ದಾವಣಗೆರೆ: ‘ಶ್ರೀರಾಮನಿಗೆ ಜಗತ್ತಿನ ಬಗ್ಗೆ ತಿಳಿಸಿದ್ದೇ ವಾಲ್ಮೀಕಿ. ರಾಮಮಂದಿರಕ್ಕೂ ಮೊದಲು ವಾಲ್ಮೀಕಿ ಮಂದಿರ ಕಟ್ಟಬೇಕಿತ್ತು’ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ(K. N. Rajanna) ಹೇಳಿದ್ದಾರೆ. ಈ ಬಗ್ಗೆ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 100 ದೇವಸ್ಥಾನಗಳ ಜೀರ್ಣೋದ್ಧಾರ ಮಾಡಲಾಗುತ್ತಿದೆ. ಅಲ್ಲದೇ ಮೂವರು ವಾಲ್ಮೀಕಿ ಸಮುದಾಯದವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ರಾಜಣ್ಣ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಗೃಹ ಇಲಾಖೆ …
Read More »ಜೈನ ನಿಗಮ ಸ್ಥಾಪನೆಗೆ ಸಲ್ಲೇಖನ ವ್ರತಕ್ಕೂ ಸಿದ್ಧ’
ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ‘ರಾಜ್ಯದ ಜೈನ ಸಮುದಾಯದ ಏಳ್ಗೆಗಾಗಿ ಜೈನ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಇದಕ್ಕಾಗಿ ನಾನು ಸಲ್ಲೇಖನ ವೃತ ಕೈಗೊಂಡು ಪ್ರಾಣತ್ಯಾಗಕ್ಕೂ ಸಿದ್ಧ’ ಎಂದು ಆಚಾರ್ಯ ಗುಣಧರನಂದಿ ಮಹಾರಾಜ ಹೇಳಿದರು. ತಾಲ್ಲೂಕಿನ ಶಮನೇವಾಡಿಯಲ್ಲಿ ತಮ್ಮ 33ನೇ ದೀಕ್ಷಾ ಜಯಂತಿ ಪ್ರಯುಕ್ತ ಗುರುವಾರ ನಡೆದ ಜೈನ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಜೈನರ ಸಮಸ್ಯೆಗಳ ನಿವಾರಣೆಗೆ ಮುಂದಾಗುವ ನಾಯಕರಿಗೆ ನಿಮ್ಮ ಮತ ನೀಡಿ. ಇನ್ನುಳಿದ ಧರ್ಮಗಳ ಮೇಲೆ ಗೌರವ ಇರಲಿ. …
Read More »ಕೃಷಿಯಲ್ಲಿ ಬದುಕು ಕಟ್ಟಿಕೊಂಡ ಪದವೀಧರ
ರಾಯಬಾಗ: ಬೆಂಗಳೂರಿನ ರಾಷ್ಟ್ರೀಕೃತ ಬ್ಯಾಂಕ್‌ವೊಂದರಲ್ಲಿ ಶಾಖಾಧಿಕಾರಿಯಾಗಿ ಮಾಡುತ್ತಿದ್ದ ಕೆಲಸ ತೊರೆದ ಇಲ್ಲಿನ ಎಂಬಿಎ ಪದವೀಧರ ಆಶೀಷ್ ದೇಶಪಾಂಡೆ, ಈಗ ಕೃಷಿಯಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ. ತಂದೆ ಕಲ್ಯಾಣರಾವ್ ಹಾಗೂ ಸಹೋದರ ಅನ್ಶುಮನ್ ಸಹಕಾರದಿಂದ ಒಕ್ಕಲುತನ ಮಾಡುತ್ತ ಉತ್ತಮ ಆದಾಯ ಗಳಿಸುತ್ತಿದ್ದಾರೆ. ‘ಕೃಷಿಯಲ್ಲಿ ಭವಿಷ್ಯವಿಲ್ಲ’ ಎಂದು ಇಂದು ಅನೇಕ ಯುವಕರು ಕೊರಗುತ್ತಿದ್ದಾರೆ. ಆದರೆ, ನಾಲ್ಕು ವರ್ಷಗಳ ಹಿಂದೆ ಆಶೀಷ್ ಬ್ಯಾಂಕಿನ ಕೆಲಸಕ್ಕೆ ವಿದಾಯ ಹೇಳಿ ಕೃಷಿ ರಂಗದಲ್ಲೇ ಯಶಸ್ಸು ಕಾಣುತ್ತಿದ್ದಾರೆ. ಸಾವಯವ ಕೃಷಿ: …
Read More »ಬೆಳಗಾವಿ | ಗುಜರಿ ಅಂಗಡಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಅಪಾರ ಹಾನಿ
ಬೆಳಗಾವಿ: ಇಲ್ಲಿನ ವಡಗಾವಿಯ ಡೋಹರ ಗಲ್ಲಿಯಲ್ಲಿ ಶುಕ್ರವಾರ ನಸುಕಿನಲ್ಲಿ ಕಿಡಿಗೇಡಿಗಳು ಗುಜರಿ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿ ನಾಲ್ಕು ಅಂಗಡಿಗಳಿಗೆ ಹತ್ತಿಕೊಂಡಿದ್ದರಿಂದ ಅಪಾರ ಪ್ರಮಾಣದ ಗುಜರಿ ವಸ್ತುಗಳು ಸುಟ್ಟಿವೆ. ಹಳೆ ತಗಡಿನ ವಸ್ತುಗಳು, ಪ್ಲಾಸ್ಟಿಕ್ ಸಾಮಗ್ರಿ, ಗೋಣಿ ಚೀಲ, ವಾಹನಗಳ ಟೈರ್, ಡ್ಯೂಬ್, ರದ್ದಿಪೇಪರ್ ಮುಂತಾದ ವಸ್ತುಗಳು ಅಂಗಡಿಗಳಲ್ಲಿ ಇದ್ದವು. ಇದರಿಂದ ಬೆಂಕಿ ಕೆನ್ನಾಲಿಗೆ ಬೇಗ ಹೊತ್ತಿಕೊಂಡಿತು. ಹೊತ್ತಿ ಉರಿಯುತ್ತಿರುವ ಗುಜರಿ ಅಂಗಡಿ ಎಚ್ಚರಗೊಂಡ ಗುಜರಿ ವ್ಯಾಪಾರಿಗಳು ಬೆಂಕಿ ನಂದಿಸಲು ಯತ್ನಿಸಿದರೂ …
Read More »ಸಿ.ಎಂ ಜನಸ್ಪಂದನ: ಆಮ್ಲಜನಕ ದುರಂತ ಸಂತ್ರಸ್ತರು ಭಾಗಿ
ಚಾಮರಾಜನಗರ: ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ನಗರದ ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ ಆಮ್ಲಜನಕ ದುರಂತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರು ಭಾಗಿಯಾಗಿ ಸಿ.ಎಂಗೆ ಮನವಿ ಸಲ್ಲಿಸಿದರು. ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಎಂ ನೇತೃತ್ವದಲ್ಲಿ ಜನಸ್ಪಂದನದಲ್ಲಿ ಭಾಗಿಯಾದ ಸಂತ್ರಸ್ತರು, ‘ಕಾಯಂ ಸರ್ಕಾರಿ ನೌಕರಿಯನ್ನು ನೀಡಬೇಕು’ ಎಂದು ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು. ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸರ್ಕಾರಿ ಉದ್ಯೋಗ …
Read More »ರಾಜ್ಯಾದ್ಯಂತ ಇ-ಚಲನ್ ದಂಡ ವ್ಯವಸ್ಥೆ ಜಾರಿ, ಏನಿದು?
ರಾಜ್ಯಾದ್ಯಂತ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗ್ತಲೇ ಇದ್ದು, ಇದೀಗ ಪೆನ್ನು ಪೇಪರ್ ಹಿಡಿದು ಪೊಲೀಸರು ದಂಡ ವಿಧಿಸೋದಿಲ್ಲ. ಹೈಟೆಕ್ ದಂಡ ಪಾವತಿ ಬಗ್ಗೆ ಕರ್ನಾಟಕ ಟ್ರಾಫಿಕ್ ಪೊಲೀಸ್ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಜ್ಯದ ಎಲ್ಲೆಡೆ ಇನ್ಮುಂದೆ ಇ-ಚಲನ್ ಮೂಲಕ ದಂಡ ವ್ಯವಸ್ಥೆಗೆ ಚಾಲನೆ ಸಿಕ್ಕಿದೆ. ಏನಿದು ಇ-ಚಲನ್? ರಾಜ್ಯದಲ್ಲಿ ಶೇ.100 ರಷ್ಟು ಪೇಪರ್‌ಲೆಸ್ ದಂಡ ಪಾವತಿ ವ್ಯವಸ್ಥೆ ಜಾರಿಯಾಗಿದೆ. ದೇಶದಲ್ಲಿ ಇದೇ ಮೊದಲ ರಾಜ್ಯವಾಗಿದ್ದು, ಸಂಚಾರ …
Read More »ರಾಜ್ಯಾದ್ಯಂತ ಇಂದಿನಿಂದ ಮೂರು ದಿನ ಬಿಜೆಪಿ ‘ಗ್ರಾಮ ಚಲೋ ಅಭಿಯಾನ
ಬೆಂಗಳೂರು: ರಾಜ್ಯದಾದ್ಯಂತ ಇಂದಿನಿಂದ ಮೂರು ದಿನ ರಾಜ್ಯ ಬಿಜೆಪಿ ವತಿಯಿಂದ ಗ್ರಾಮ ಚಲೋ ಅಭಿಯಾನ ಕೈಗೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಈ ಬಗ್ಗೆ ಮಾಹಿತಿ ನೀಡಿದ್ದು, ರಾಜ್ಯದಾದ್ಯಂತ ಫೆಬ್ರವರಿ 9 ರಿಂದ 11 ರವರೆಗೆ ಮೂರು ದಿನ ಗ್ರಾಮ ಚಲೋ ಅಭಿಯಾನ ಕೈಗೊಳ್ಳಲಾಗಿದೆ. ಮೂರು ದಿನದ ಕಾರ್ಯಕ್ರಮದಲ್ಲಿ 42000 ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ರಾಜ್ಯದ 28,000 ಹಳ್ಳಿಗಳು, 19000 ನಗರ ಬೂತ್ ಗಳಲ್ಲಿ 42000 ಕಾರ್ಯಕರ್ತರು ಮೂರು ದಿನ …
Read More »ಚಿದಾನಂದ ಸವದಿಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ
ಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು ತೂಗಿ ಲೋಕಸಭಾ ಟಿಕೆಟ್ ನೀಡಲು ಮುಂದಾಗಿದೆ. ಚಿಕ್ಕೋಡಿ ಕ್ಷೇತ್ರಕ್ಕೆ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಹಾಘೂ ಪ್ರಕಾಶ್ ಹುಕ್ಕೇರಿ ಪುತ್ರ ಗಣೇಶ್ ಹುಕ್ಕೇರಿ ಅವರ ಹೆಸರುಗಳು ಕೇಳಿ ಬಂದಿವೆ. ಬಿಜೆಪಿ ಪಕ್ಷದತ್ತ ವಾಲುತ್ತಿರುವ ಸವದಿಯನ್ನ ಪಕ್ಷದಲೇ ಉಳಿಸಿಕೊಳ್ಳಲು ಪುತ್ರನಿಗೆ ಟಿಕೆಟ್ ನೀಡಬಹುದು ಎನ್ನಲಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ …
Read More »ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಗೆಲ್ಲಲು ಕಾಂಗ್ರೆಸ್ ಭಾರಿ ಪ್ಲಾನ್
ಉತ್ತರ ಕನ್ನಡ, :ಲೋಕಸಭೆ ಚುನಾವಣೆಗೆ (Lok Sabha Election) 2-3 ತಿಂಗಳು ಬಾಕಿ ಉಳಿದಿವೆ. ಈಗಾಗಲೆ ರಾಜ್ಯದಲ್ಲಿ ಟಿಕೆಟ್ಗಾಗಿ ಲಾಭಿ ಜೋರಾಗಿಯೇ ನಡೆಯುತ್ತಿದೆ. ರಾಜ್ಯ ಕಾಂಗ್ರೆಸ್ (Congress) ಘಟಕ ಹಾಲಿ ಶಾಸಕರು ಅಥವಾ ಸಚಿವರನ್ನು ಕಣಕ್ಕೆ ಇಳಿಸಲು ಚಿಂತನೆ ನಡೆಸಿದೆ. ಈ ಮೂಲಕ ಲೋಕಸಭೆ ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲಲು ಮುಂದಾಗಿದೆ. ಜಾರಿಯಾಗಿರುವ ಐದು ಗ್ಯಾರೆಂಟಿ ಮತ್ತು ಸ್ಥಳೀಯ ನಾಯಕರ ಪ್ರಭಾವ ಎರಡನ್ನೂ ಒಟ್ಟುಗೂಡಿಸಿ ಚುನಾವಣೆಯನ್ನು ಎದುರಿಸಲು ಸಜ್ಜಾಗಿದೆ. ಇದಕ್ಕಾಗಿ ಎಲ್ಲ …
Read More »ಜನಸ್ಪಂದನೆಗೆ ಜನರ ವೇದನೆಯೇ ಉತ್ತರ: ಬಿಜೆಪಿ ವ್ಯಂಗ್ಯ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಗುರುವಾರ ರಾಜ್ಯಮಟ್ಟದ ಜನಸ್ಪಂದನ (Jana Spandana) ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬಂದಿತ್ತು. 12,000ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕಾರ ಮಾಡಲಾಗಿದೆ. ಈ ಬಗ್ಗೆ ರಾಜ್ಯ ಬಿಜೆಪಿ(BJP) ವ್ಯಂಗ್ಯವಾದಿದ್ದು, ಜನಸ್ಪಂದನೆಗೆ ಜನರ ವೇದನೇಯೇ ಉತ್ತರ ಎಂದು ಹೇಳಿದೆ. ಈ ಬಗ್ಗೆ ಎಕ್ಸ್ ನಲ್ಲಿ (X) ಟೀಕೆ ಮಾಡಿರುವ ಬಿಜೆಪಿ, “ಕಾಂಗ್ರೆಸ್ಸಿಗರ ಪೊಲಿಟಿಕಲ್ ಸ್ಟಂಟ್ ಜನಸ್ಪಂದನೆಗೆ ಜನರ ವೇದನೆಯೇ ಉತ್ತರ” ಎಂದು ಬರೆದುಕೊಂಡಿದೆ. ಅಲ್ಲದೇ, …
Read More »