Breaking News

ಮೋದಿ-ಕಮಲಾ ಹ್ಯಾರೀಸ್ ದ್ವಿಪಕ್ಷೀಯ ಮಾತುಕತೆ; ಇಂಡೋ-ಫೆಸಿಫಿಕ್ ಪ್ರದೇಶದ ​ಬಗ್ಗೆ ಫೋಕಸ್

Spread the love

ನವದೆಹಲಿ: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು​ ಭೇಟಿಯಾದರು. ಬಳಿಕ ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಇಬ್ಬರು ನಾಯಕರುಗಳು ಇಂಡೋ-ಫೆಸಿಫಿಕ್​  ಪ್ರದೇಶದ ಬಗ್ಗೆ ಹೆಚ್ಚು ಗಮನ ಹರಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ವ್ಯಾಪಾರ, ಅಭಿವೃದ್ಧಿ, ಎರಡೂ ದೇಶಗಳ ಸ್ನೇಹ ಸಂಬಂಧ, ಸಂಸ್ಕೃತಿ ಹೀಗೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಜೊತೆಗೆ ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ನಡೆದ ಬೆಳವಣಿಗೆಗಳ ಬಗ್ಗೆಯೂ ಚರ್ಚೆ ನಡೆಸಿದರು ಎಂದು ತಿಳಿದುಬಂದಿದೆ. ಬಳಿಕ ಮೋದಿ ಹಾಗೂ ಕಮಲಾ ಹ್ಯಾರಿಸ್​ ಜಂಟಿ ಸುದ್ದಿಗೋಷ್ಟಿ ನಡೆಸಿದರು.

ಈ ವೇಳೆ ಮಾತನಾಡಿದ ಕಮಲಾ ಹ್ಯಾರಿಸ್, ಭಾರತದ ಶಾಂತಿ ಕಾಪಾಡಲು ಅಮೆರಿಕ ಸಿದ್ಧವಿದೆ. ಅಮೆರಿಕ ಹಾಗೂ ಭಾರತದ ರಾಜತಾಂತ್ರಿಕ ಒಪ್ಪಂದಗಳನ್ನು ಮುಂದುವರೆಸಲು ಸಮ್ಮತಿ ನೀಡಿದ್ದೇವೆ. ಅಮೆರಿಕಾ ಭಾರತದ ಸ್ವಾಭಾವಿಕ ಪಾಲುದಾರ ಅಂತ ಹೇಳಿದ್ರು.. ಇನ್ನೂ ಮುಂದೆಯೂ ಸಹ ಅಮೆರಿಕಾ ಮತ್ತು ಭಾರತ ಒಟ್ಟಾಗಿ ಕೆಲಸ ಮಾಡಲಿವೆ ಅಂತ ಹೇಳಿದ ಕಮಲಾ, ಭಾರತ ಲಸಿಕೆ ವಿತರಣೆಯ ಸಾಧನೆ ಕೊಂಡಾಡಿದ್ರು. ಒಂದೇ ದಿನ 2 ಕೋಟಿ ಲಸಿಕಾ ವಿತರಣೆ ಮೂಲಕ ಹೊಸ ಮೈಲಿಗಲ್ಲಾಗಿಸಿದೆ ಅಂತ ಹಾಡಿ ಹೊಗಳಿದ್ರು.

ಭಾರತ ಅಮೆರಿಕಾ ದೇಶದ ಪ್ರಮುಖ ಪಾಲುದಾರ ರಾಷ್ಟ್ರ. ಜಗತ್ತಿನ ಸುರಕ್ಷತೆಗಾಗಿ ಭಾರತ ಹಾಗೂ ಅಮೆರಿಕಾ ಇತಿಹಾಸದುದ್ದಕ್ಕೂ ಜೊತೆಯಾಗಿ ಕೆಲಸ ಮಾಡಿವೆ. ಜಗತ್ತಿನ ರಾಷ್ಟ್ರಗಳು ಹಿಂದೆಂದಿಗಿಂತಲೂ ಹೆಚ್ಚು ಪರಸ್ಪರ ಅವಲಂಬಿತವಾಗಿವೆ.
ಕಮಲಾ ಹ್ಯಾರಿಸ್​, ಅಮೆರಿಕ ಉಪಾಧ್ಯಕ್ಷೆ

ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಮಾತನಾಡಿ, ಕಮಲಾ ಹ್ಯಾರಿಸ್​ರನ್ನ ಭಾರತಕ್ಕೆ ಬರುವಂತೆ ಆಹ್ವಾನ ನೀಡಿದ್ರು.. ಅಲ್ಲದೆ, ಕೊರೊನಾ 2ನೇ ಅಲೆಯಲ್ಲಿ ಅಮೆರಿಕಾ ಸಹಾಯಕ್ಕೆ ಧನ್ಯವಾದ ಹೇಳಿದ್ರು.

ನಿನ್ನೆ ಮೋದಿ ವಿಶೇಷ ವಿಮಾನದ ಮೂಲಕ ವಾಷಿಂಗ್ಟನ್​ನ ಆಂಡ್ರ್ಯೂಸ್ ಜಂಟಿ ಏರ್‌ಫೋರ್ಸ್ ಬೇಸ್‌ ತಲುಪಿ ಅನಿವಾಸಿ ಭಾರತೀಯರನ್ನು ಭೇಟಿ ಮಾಡಿದ್ರು. ಜೊತೆಗೆ ಕಂಪನಿ ಸಿಇಓಗಳ ಜೊತೆ ಬಂಡವಾಳ ಹೂಡಿಕೆ ಬಗ್ಗೆ ಮಹತ್ವದ ಸಭೆ ನಡೆಸಿದ್ರು.. ಇಂದು ಕ್ವಾಡ್​​ ಸಭೆಯಲ್ಲಿ ನಮೋ ಭಾಗಿ ಆಗ್ತಿದ್ದಾರೆ.. ಕ್ವಾಡ್​​ ಸದಸ್ಯ ರಾಷ್ಟ್ರಗಳಾದ ಅಮೆರಿಕಾ ಅಧ್ಯಕ್ಷರು, ಅಸ್ಟ್ರೇಲಿಯಾ, ಜಪಾನ್​ ಪ್ರಧಾನಿಗಳ ಜೊತೆ ಭಾಗಿ ಆಗಲಿದ್ದಾರೆ. ಮೊದಲ ಬಾರಿಗೆ ಬೈಡೆನ್​ ಅಧ್ಯಕ್ಷತೆ ವಹಿಸ್ತಿದ್ದಾರೆ.

ಭಾರತ ಕೊರೊನಾ 2ನೇ ಅಲೆಗೆ ಸಿಲುಕಿ ನರಳುತ್ತಿತ್ತು. ದೊಡ್ಡ ಸಂಕಟ ದೇಶವನ್ನು ಆವರಿಸಿತ್ತು. ಅಂಥ ಸಂಕಷ್ಟದ ಸಮಯದಲ್ಲಿ ಕಮಲಾ ಹ್ಯಾರಿಸ್​ ಭಾರತದ ಬಗ್ಗೆ ತಮ್ಮ ಕಳಕಳಿ ವ್ಯಕ್ತಪಡಿಸಿದ್ದರು. ನೆರವಿನ ಹಸ್ತ ಚಾಚಿದ್ದರು. ನಿಮ್ಮ ಈ ಸಹಾಯಕ್ಕೆ ನಾನು ಹೃದಯಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ.
ನರೇಂದ್ರ ಮೋದಿ, ಭಾರತದ ಪ್ರಧಾನಿ

ಏನಿದು ಕ್ವಾಡ್​ ಸಭೆ?
ದೇಶಗಳ ನಡುವಿನ ಸೌಹರ್ದಯುತ ಸಂಪರ್ಕ, ಮೂಲಸೌಕರ್ಯ, ತಂತ್ರಜ್ಞಾನ, ಹವಾಮಾನ ಸುಧಾರಣೆ, ಶಿಕ್ಷಣ, ಶೈಕ್ಷಣಿಕ ಹಾಗೂ ವ್ಯಾಪಾರ ವಾಣಿಜ್ಯಕ್ಕೆ ಕ್ವಾಡ್​ ಮಹತ್ವದ್ದಾಗಿದೆ.. ಪ್ರಸ್ತುತ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾದ ಬಗ್ಗೆ ಈ ಸಭೆಯಲ್ಲಿ ಮಹತ್ವದ ಚರ್ಚೆ ಮಾಡಲಾಗುತ್ತಿದೆ. ಇನ್ನೂ ಸಮಾನ ಮನಸ್ಕ ದೇಶಗಳ ಈ ಸೌಹರ್ದಯುತ ಸ್ನೇಹದ ಮೂಲಕ ವೈರಿ ದೇಶಗಳಿಗೆ ಮಹತ್ವದ ಸಂದೇಶ ರವಾನೆ ಮಾಡಲಾಗ್ತಿದೆ.

ಸೆಪ್ಟೆಂಬರ್ 25ರಂದು ನ್ಯೂಯಾರ್ಕ್ ನಗರದಲ್ಲಿ ನಡೆಯುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲೂ ಪ್ರಧಾನಿ ಮೋದಿ ಭಾಷಣ ಮಾಡಲಿದ್ದು, ಸೆಪ್ಟೆಂಬರ್‌ 26ಕ್ಕೆ ನ್ಯೂಯಾರ್ಕ್​ನಿಂದ ಮೋದಿ ಭಾರತಕ್ಕೆ ವಾಪಸ್​ ಆಗಲಿದ್ದಾರೆ.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ