ಬೆಳಗಾವಿ: ಬೆಂಗಳೂರಿನ ಪಾದರಾಯನಪುರದಲ್ಲಿ ಘಟನೆಯನ್ನು ಸಮರ್ಥಿಸಿಕೊಂಡಿರುವ ಮಾಜಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಕೆಂಡಾಮಂಡಲರಾಗಿದ್ದಾರೆ.
ಪಾದರಾಯನಪುರ ಘಟನೆ ಬಗ್ಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಪ್ರತಿಕ್ರಿಯಿಸಿ, ಕೊರೊನಾ ವೈರಸ್ ಯಾವುದೇ ಜಾತಿ, ಭಾಷೆಗೆ ಸೀಮಿತವಾಗಿಲ್ಲ. ಹಲ್ಲೆ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ದುಷ್ಕರ್ಮಿಗಳ ಮೇಲೆ ದೇಶ ದ್ರೋಹದ ದೂರು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಹಾಗೂ ಗೃಹ ಸಚಿವರನ್ನು ಒತ್ತಾಯಿಸುತ್ತೆನೆ ಎಂದು ಹೇಳಿದರು.
ಪ್ರಚೋದನೆ ಕೊಡುವರನ್ನು ಗುರುತಿಸಿ, ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮೊದಲು ಜಮೀರ್ ಅಹ್ಮದ್ ಭಾರತದ ಪರವಾಗಿದ್ದಾರಾ? ಅಥವಾ ಇನ್ಯಾವುದೋ ದೇಶದ ಪರವಾಗಿದ್ದಾರಾ ಎಂಬುವುದನ್ನುಆತ್ಮಾವಲೋಕನ ಮಾಡಿಕೊಳ್ಳಬೇಕು. ರಾಜ್ಯ ಮತ್ತು ದೇಶದ ಬಗ್ಗೆ ಗೌರವ ಇಲ್ಲವಾದ್ರೆ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಜಮೀರ್ ಯಾವ ದೇಶದ ಪರವಾಗಿ ಇದ್ದಾರೆ ಎಂಬುದು ಸ್ಪಷ್ಟಪಡಿಸಬೇಕು ಎಂದು ಕಿಡಿಕಾರಿದ್ದಾರೆ.