Breaking News

ನರೇಗಾ ಬಗ್ಗೆ ಚರ್ಚೆಗಾಗಿ ವಿಧಾನಮಂಡಲ ಅಧಿವೇಶನ 2 ದಿನ ವಿಸ್ತರಣೆ – ಸಿಎಂ

Spread the love

ಬೆಂಗಳೂರು: ಶಿವರಾತ್ರಿ ಹಬ್ಬದ ಪ್ರಯುಕ್ತ ಎಸ್.ಎಂ.ವಿ.ಟಿ. ಬೆಂಗಳೂರು (SMVT Bengaluru) ಮತ್ತು ವಿಜಯಪುರ (Vijayapura) ನಡುವೆ ವಿಶೇಷ ರೈಲು ಸಂಚರಿಸಲಿದೆ.

ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು, ನೈಋತ್ಯ ರೈಲ್ವೆಯು ಎಸ್.ಎಂ.ವಿ.ಟಿ. ಬೆಂಗಳೂರು ಮತ್ತು ವಿಜಯಪುರ ನಡುವೆ ವಿಶೇಷ ರೈಲು ಸೇವೆಗಳನ್ನು ಓಡಿಸಲು ನಿರ್ಧರಿಸಿದೆ.

ರೈಲು ಸಂಖ್ಯೆ 06503:
ಎಸ್.ಎಂ.ವಿ.ಟಿ. ಬೆಂಗಳೂರು – ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ದಿನಾಂಕ 2026ರ ಫೆಬ್ರವರಿ 13ರಂದು (ಶುಕ್ರವಾರ) ರಾತ್ರಿ 07:15ಕ್ಕೆ ಎಸ್.ಎಂ.ವಿ.ಟಿ. ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ 07:15 ಗಂಟೆಗೆ ವಿಜಯಪುರವನ್ನು ತಲುಪಲಿದೆ.

ರೈಲು ಸಂಖ್ಯೆ 06504:
ವಿಜಯಪುರ – ಎಸ್.ಎಂ.ವಿ.ಟಿ. ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು 2026ರ ಫೆಬ್ರವರಿ 16ರಂದು (ಸೋಮವಾರ) ಸಂಜೆ 05:30ಕ್ಕೆ ವಿಜಯಪುರದಿಂದ ಹೊರಟು ಮರುದಿನ ಬೆಳಿಗ್ಗೆ 06:30ಕ್ಕೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ. ಈ ರೈಲುಗಳಿಗೆ ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್‌.ಎಂ.ಎಂ.ಹಾವೇರಿ, ಬಾದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ. ಈ ರೈಲು 22 ಬೋಗಿಗಳನ್ನು ಒಳಗೊಂಡಿರುತ್ತದೆ. ಅವುಗಳಲ್ಲಿ 02 ಎಸಿ 2-ಟೈರ್, 03 ಎಸಿ 3-ಟೈರ್, 11 ಸ್ಲೀಪರ್ ಕ್ಲಾಸ್, 04 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 02 ಎಸ್ಎಲ್ಆರ್ ಡಿ ಬೋಗಿಗಳು ಇರಲಿವೆ.


Spread the love

About Laxminews 24x7

Check Also

ವಿಜಯಪುರದ ಚಡಚಣ ಪಟ್ಟಣದಲ್ಲಿ ಅಪಹರಣವಾಗಿದ್ದ ಒಂದೂವರೆ ವರ್ಷದ ಮಗು ಸುರಕ್ಷಿತ ಪತ್ತೆ; ಕೃತ್ಯ ಎಸಗಿದ ಮಹಿಳೆಯ ಶೋಧ ಮುಂದುವರಿಕೆ!

Spread the love ವಿಜಯಪುರದ ಚಡಚಣ ಪಟ್ಟಣದಲ್ಲಿ ಅಪಹರಣವಾಗಿದ್ದ ಒಂದೂವರೆ ವರ್ಷದ ಮಗು ಸುರಕ್ಷಿತ ಪತ್ತೆ; ಕೃತ್ಯ ಎಸಗಿದ ಮಹಿಳೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ