ಮಡಿಕೇರಿ: ಬೇಸರವಾಗಿದೆ ಎಂದು ಮೀನು ಹಿಡಿಯಲು ಹೋದವರಿಗೆ ಆಶ್ಚರ್ಯ ಕಾದಿತ್ತು. ಗಾಳಕ್ಕೆ ದೊಡ್ಡ ಮೀನು ಬಿದ್ದಿದ್ದು, ಮೀನು ನೋಡಿ ಅಲ್ಲಿನ ಜನ ನಿಬ್ಬರಗಾಗಿದ್ದಾರೆ.
ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಹಾರಂಗಿ ಜಲಾಶಯದ ಹಿನ್ನೀರಿಗೆ ಸಮೀಪವಿರುವ ನಾಕೂರು ಶಿರಂಗಾಲ ಗ್ರಾಮದ ಯುವಕರು ಟೈಂ ಪಾಸ್‍ಗಾಗಿ ಮೀನು ಹಿಡಿಯಲು ಹೋಗಿದ್ದಾರೆ. ಈ ವೇಳೆ ಹಿನ್ನೀರಿನಲ್ಲಿ ಗಾಳ ಹಾಕಿ ಕುಳಿತಿದ್ದಾರೆ. ಗಾಳವನ್ನು ಯಾರೋ ಮನುಷ್ಯರು ಎಳೆಯುತ್ತಿರುವಂತೆ ಬಾಸವಾಗಿದೆ. ಬಳಿಕ ಮೂವರು ಯುವಕರು ಸೇರಿ ನಿಧಾನವಾಗಿ ಗಾಳ ಎಳೆದಿದ್ದಾರೆ. ಆದರೆ ಯುವಕರಿಗೆ ಅಚ್ಚರಿ ಆಗುವಂತೆ ಬರೋಬ್ಬರಿ 38 ಕೆ.ಜಿ ತೂಕದ ಕಾಟ್ಲಾ ಜಾತಿಯ ಮೀನು ಸೆರೆ ಸಿಕ್ಕಿದೆ.
ಲಾಕ್‍ಡೌನ್ ನಡುವೆ ಬೇಸರ ಕಳೆಯೋಕೆಂದು ಹತ್ತಿರದ ಹಳ್ಳಿಯ ಯುವಕರು ಜಲಾಶಯದ ಹಿನ್ನೀರಿನ ಬಳಿ ತೆರಳಿದ್ದರು. ಹಾಕಿದ ಗಾಳಕ್ಕೆ ಬರೋಬ್ಬರಿ 38 ಕೆ.ಜಿ ತೂಕದ ಭಾರೀ ಗಾತ್ರದ ಮೀನು ಬೀದಿದ್ದು, ಗಾಳಕ್ಕೆ ಬಿದ್ದ ಮೀನು ಕಂಡು ಯುವಕರು ಅಚ್ಚರಿಗೊಳಗಾಗಿದ್ದಾರೆ. ಆದರೆ ಸರಿಯಾದ ಬೇಟೆಯನ್ನೇ ಆಡಿದ್ದಾರೆ.