Breaking News

ಹುಣಸೂರು ಮತ್ತೊಂದು ಭಟ್ಕಳ್ಳ ಆಗಲಿದೆ. ಪ್ರಮೋದ್ ಮುತಾಲಿಕ್

Spread the love

ಹುಣಸೂರು: ಜಿಹಾದಿ ಸಂಸ್ಕೃತಿ ಇರುವ ಕಡೆಗಳಲ್ಲಿ ಹಿಂದೂ ಯುವಕರ ಕೊಲೆ. ಆತ್ಮಹತ್ಯೆಗೆ ಪ್ರಚೋದನೆ ನಡೆಯುತ್ತಲೇ ಇರುತ್ತದೆ. ಈ ಬಗ್ಗೆ ಸರಕಾರ ಮತ್ತು ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕೆಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್ ಎಚ್ಚರಿಸಿದರು.

Pramod Muthalik: ಹುಣಸೂರು ಮತ್ತೊಂದು ಭಟ್ಕಳ್ಳ ಆಗಲಿದೆ. ಪ್ರಮೋದ್ ಮುತಾಲಿಕ್ ಎಚ್ಚರಿಕೆ

ವಿರಾಜಪೇಟೆಯಿಂದ ಮೈಸೂರಿಗೆ ತೆರಳುವ ಮಾರ್ಗ ಮಧ್ಯೆ ತಾಲೂಕಿನ ದಾಸನಪುರದ ರವಿ ಪುತ್ರ ಮುತ್ತುರಾಜ್ ಕೊಲೆಯಾಗಿದ್ದ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಿ ಕುಟಂಬದವರಿಂದ ಮಾಹಿತಿ ಪಡೆದು ಧೈರ್ಯ ಹೇಳಿದ ನಂತರ ಅವರು ಪ್ರಕರಣ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದರು.

ನಂತರ ಮಾತನಾಡಿದ ಇದೊಂದು ಜಿಹಾದಿ ಮನಸ್ಥಿತಿಯುಳ್ಳವರಿಂದ ನಡೆದ ಕೃತ್ಯ. ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಇದಕ್ಕಾಗಿ ಹಿಂದೂ ಸಂಘಟನೆಗಳು ಬೆಂಬಲವಾಗಿ ನಿಲ್ಲಲಿವೆ. ಯಾವುದೇ ಕಾನೂನು ಹೋರಾಟಕ್ಕೂ ನೆರವು ನೀಡಲಾಗುವುದೆಂದು ಭರವಸೆ ಇತ್ತರು. ನಂತರ ನಗರದಲ್ಲಿ ಕೆಲ ಮುಖಂಡರನ್ನು ಭೇಟಿ ಮಾಡಿ ಚರ್ಚಿಸಿದರು.

ಹುಣಸೂರಿನ ಮುತ್ತುರಾಜ್. ಕೆ.ಆರ್.ನಗರದ ಪುನಿತ್ ಸಾವು ಕೂಡ ಒಂದೇ ರೀತಿಯಲ್ಲಿ ನಡೆದಿದೆ. ಎರಡೂ ಕಡೆಯಲ್ಲಿ ಜಿಹಾದಿ ಸಂಸ್ಕೃತಿಯವರು ಮೊದಲು ಹಲ್ಲೆ ನಡೆಸಿದ್ದಾರೆ. ನಂತರ ಯುವಕರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ