Breaking News

ರಾಜ್ಯದ ಹಲವೆಡೆ ಭಾರಿ ಮಳೆ………………..

Spread the love

ಬೆಂಗಳೂರು, ಜು.9- ಕೊಡಗು, ಮಂಗಳೂರು, ಕಾರವಾರ ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೆಲ ಭಾಗಗಳಲ್ಲಿ ಗುಡ್ಡ ಕುಸಿಯುವ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ತಿಂಗಳ ಆರಂಭದಿಂದ ಮುಂಗಾರು ಮಳೆ ಚುರುಕುಗೊಂಡಿದ್ದು, ರೈತರು ಸಂತಸಗೊಂಡಿದ್ದಾರೆ.

ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆ ಒಂದೇ ಸಮನೆ ಸುರಿಯುತ್ತಿದ್ದು, ಕೃಷಿ ಚಟುವಟಿಕೆಗೆ ಸಹಕಾರಿಯಾಗಿದೆ. ದಕ್ಷಿಣ ಕನ್ನಡ, ಮಂಗಳೂರು, ಬೆಳ್ತಂಗಡಿ, ಉಡುಪಿ, ಕುಮಟ, ಕಾರವಾರ, ಶಿರಸಿ, ಸಾಗರ ಹಾಗೂ ಶಿವಮೊಗ್ಗ ಭಾಗದಲ್ಲಿ ಬಿರುಸಿನಿಂದ ಮಳೆ ಬೀಳುತ್ತಿದ್ದು, ಕೆಲವು ಭಾಗದಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದರೆ, ಇನ್ನೂ ಕೆಲ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಲೇ ಇದೆ.

ಜೂನ್ ತಿಂಗಳಲ್ಲಿ ಮಳೆ ಇಲ್ಲದ ಕಾರಣ ಕೃಷಿ ಚಟುವಟಿಕೆ ನಿಂತಿತ್ತು. ಈಗ ಭತ್ತದ ನಾಟಿ ಸೇರಿ ಮೊದಲಾದ ಕಾರ್ಯಗಳು ಭರದಿಂದ ಸಾಗಿವೆ. ಇನ್ನು, ಹುಬ್ಬಳ್ಳಿ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಮೋಡ ಕವಿದ ವಾತಾವರಣ ಇದೆ. ಬೆಳಗಾವಿ ಸೇರಿ ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗುತ್ತಿದೆ. ಉಕ್ಕಿ ಹರಿದ ನದಿಗಳು: ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರಾಜ್ಯದ ನದಿಗಳು ಉಕ್ಕಿ ಹರಿಯುತ್ತಿವೆ. ಹೀಗಾಗಿ, ನದಿ ಅಂಚಿನ ಗ್ರಾಮಗಳು ಕಂಗಾಲಾಗಿವೆ.

ಈಗಾಗಲೇ ಈ ಭಾಗದಲ್ಲಿರುವ ಜನರನ್ನು ಸ್ಥಳಾಂತರ ಮಾಡಲು ಆಯಾ ಜಿಲ್ಲಾಗಳು ಚಿಂತನೆ ನಡೆಸಿವೆ. ಅಘನಾಶಿನಿ, ಗಂಗಾವಳಿ, ನೇತ್ರಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಉಡುಪಿ ಜಿಲ್ಲಾಯ ಬೈಂದೂರಿನಲ್ಲಿ ನದಿಗಳ ಮಟ್ಟ ಹೆಚ್ಚಾಗಿದ್ದು, ಕೆಲ ಮನೆಗಳು ಕುಸಿದಿವೆ. ಕೆಲವು ಕಡೆಗಳಲ್ಲಿ ಶಾಲೆಗಳಿಗೆ ಹಾನಿಯಾದ ಬಗ್ಗೆಯೂ ವರದಿ ಆಗಿದೆ.

ಭಾನುವಾರದವರೆಗೂ ಮುಂದುವರಿಯಲಿದೆ ಮಳೆ: ಇಂದಿನಿಂದ ಮೂರ್ನಾಲ್ಕು ದಿನಗಳ ಕಾಲ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು ಮತ್ತು ಬೆಳಗಾವಿಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮೇ ಕೊನೆ ಹಾಗೂ ಜೂನ್ ಆರಂಭದಲ್ಲಿ ರಾಜ್ಯದ ಕೆಲ ಭಾಗಗಳಲ್ಲಿ ಉತ್ತಮ ಮಳೆಯಾಗಿತ್ತು.

ಆದರೆ, ನಂತರದ ಅವಧಿಯಲ್ಲಿ ಬಿಸಿಲು ಕಾಣಿಸಿಕೊಂಡಿತ್ತು. ಇದು ರೈತರನ್ನು ಮತ್ತಷ್ಟು ಚಿಂತೆಗೀಡು ಮಾಡಿತ್ತು. ಆದರೆ, ಈಗ ಮತ್ತೆ ಮಳೆ ಆಗುತ್ತಿರುವದರಿಂದ ರೈತರಲ್ಲಿ ಆಶಾಭಾವ ಮೂಡಿಸಿದೆ.

ಇಂದು ಯಾವ ಜಿಲ್ಲಾಯಲ್ಲಿ ಯಾವ ರೀತಿಯ ವಾತಾವರಣವಿದೆ ಎಂಬುದಕ್ಕೆ ಇಲ್ಲಿದೆ ಮಾಹಿತಿ: ಹುಬ್ಬಳ್ಳಿ-ಧಾರವಾಡ ಜಿಟಿ ಜಿಟಿ ಮಳೆ, ಸಂಪೂರ್ಣ ಮೋಡ ಕವಿದ ವಾತಾವರಣ, ಉಡುಪಿ- ಭಾರಿ ಮಳೆ, ದಕ್ಷಿಣ ಕನ್ನಡ- ಮಳೆ, ಕೋಲಾರ- ಮೋಡ ಕವಿದ ವಾತಾವರಣ, ಕಲಬುರಗಿ- ಮೋಡ ಕವಿದ ವಾತಾವರಣ, ವಿಜಯಪುರ- ಮೋಡ ಕವಿದ ವಾತಾವರಣ, ಬಾಗಲಕೋಟೆ- ಮೋಡ ಕವಿದ ವಾತಾವರಣ, ಗದಗ- ಮೋಡ ಕವಿದ ವಾತಾವರಣ, ರಾಯಚೂರು- ಬಿಸಿಲು, ಹಾವೇರಿ- ಮೋಡ ಕವಿದ ವಾತಾವರಣ, ಹುಬ್ಬಳ್ಳಿ- ಮೋಡ ಕವಿದ ವಾತಾವರಣ, ದೊಡ್ಡಬಳ್ಳಾಪುರ-ಮೋಡ ಕವಿದ ವಾತಾವರಣ, ಬೆಳಗಾವಿ- ತುಂತುರು ಮಳೆ.


Spread the love

About Laxminews 24x7

Check Also

ವೀರಶೈವ-ಲಿಂಗಾಯತ ಒಬಿಸಿ ಸೇರ್ಪಡೆಗೆ ಒತ್ತಾಯ

Spread the love ಬೆಂಗಳೂರು: ಜಾತಿ ಗಣತಿ (ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ) ವರದಿಯನ್ನು ಮುಂದಿನ ಸಚಿವ ಸಂಪುಟದಲ್ಲಿ ಕೈಗೆತ್ತಿಕೊಳ್ಳಲು ಸರಕಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ