ಬೆಂಗಳೂರು: ಇಂದು ಲಾಕ್ ಫ್ರೀ ಎರಡನೇ ದಿನವಾಗಿದ್ದು, ಉತ್ತರ ಕರ್ನಾಟಕದ ಭಾಗಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ.
ಮೆಜೆಸ್ಟಿಕ್ ನಿಲ್ದಾಣದತ್ತ ಪ್ರಯಾಣಿಕರು ಅಗಮಿಸುತ್ತಿದ್ದು, ಟಿಕೆಟ್‍ಗಾಗಿ ಸರತಿಯಲ್ಲಿ ನಿಂತಿದ್ದಾರೆ. ಸೋಮವಾರ ರಾತ್ರಿಯೇ ಬಸ್ ವ್ಯವಸ್ಥೆ ಇಂದು ಮೆಜೆಸ್ಟಿಕ್ ನಿಲ್ದಾಣಕ್ಕೆ ಹಲವರು ಬಂದಿದ್ದರು. ಆದ್ರೆ ಬಸ್ ಸಿಗದೇ ಇಡೀ ರಾತ್ರಿಯನ್ನು ಪ್ರಯಾಣಿಕರು ನಿಲ್ದಾಣದಲ್ಲಿಯೇ ಕಳೆಯುವಂತಾಗಿತ್ತು. ಇಂದು ಬಸ್ ಸಂಚಾರದಲ್ಲಿ ಕೆಲ ಬದಲಾವಣೆ ತರಲಾಗಿದ್ದು, ಸಂಜೆ 5 ಗಂಟೆ ಬದಲು 7 ಗಂಟೆವರೆಗೂ ಬಸ್‍ಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ಸಂಜೆ 7 ಗಂಟೆಗೆ ಬಸ್ ಹೊರಟರೆ ಬೆಳಗ್ಗೆ ತನ್ನ ಕೊನೆಯ ನಿಲ್ದಾಣ ತಲುಪಬೇಕು. ಮಧ್ಯ ಎಲ್ಲಿಯೂ ಬಸ್ ನಿಲುಗಡೆ ಮಾಡುವಂತಿಲ್ಲ. ಹಾಗಾಗಿ ಪ್ರಯಾಣಿಕರು ಆಹಾರ ಸಾಮಾಗ್ರಿ ಮತ್ತು ನೀರಿನ ಜೊತೆ ಪ್ರಯಾಣಿಸಿದ್ರೆ ಒಳಿತು. ಒಂದು ಕಡೆ ಕೆಎಸ್‍ಆರ್ ಟಿಸಿ ನಿಲ್ದಾಣಕ್ಕೆ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರೆ, ಪಕ್ಕದ ಬಿಎಂಟಿಸಿ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದೆ.
ಬುಕ್ಕಿಂಗ್ ವ್ಯವಸ್ಥೆ ಹೇಗೆ?
ಬೆಂಗಳೂರಿನಿಂದ – ಬಾಗಲಕೋಟೆ, ಬೆಳಗಾವಿ, ವಿಜಯಪುರ, ಬಳ್ಳಾರಿ, ಕುಂದಾಪುರ, ಚಿಕ್ಕಮಗಳೂರು, ದಾವಣಗೆರೆ, ಧಾರವಾಡ, ಕಲಬುರಗಿ, ರಾಯಚೂರು, ಹುಬ್ಬಳ್ಳಿ, ಹೊಸಪೇಟೆ, ಹಾವೇರಿ, ಹರಪ್ಪನ ಹಳ್ಳಿ, ಕೊಪ್ಪಳ, ಕಾರವಾರ, ಮಂಗಳೂರು, ಮಡಿಕೇರಿ, ಮೈಸೂರು, ಶಿವಮೊಗ್ಗ, ಸಿರ್ಸಿ, ಉಡುಪಿ, ಯಾದಗಿರಿ.
ಬೆಂಗಳೂರಿಗೆ – ಬೆಳಗಾವಿ, ಬಳ್ಳಾರಿ, ಕುಂದಾಪುರ, ಚಿಕ್ಕಮಗಳೂರು, ದಾವಣಗೆರೆ, ಕಲಬುರ್ಗಿ, ಹುಬ್ಬಳ್ಳಿ, ಗಂಗಾವತಿ, ಹಡಗಲಿ, ಹರಿಹರ, ಹೊಸಪೇಟೆ, ಕಂಪ್ಲಿ, ಕುಮಟಾ, ಕುಷ್ಟಗಿ, ಕೊಪ್ಪಳ, ಶಿರಸಿ, ಉಡುಪಿ, ಯಾದಗಿರಿ, ಯಲಬುರ್ಗಾ, ಸಂಡೂರು, ಶಿರಗುಪ್ಪ, ಯಲ್ಲಾಪುರ, ಮಂಗಳೂರು, ಮೈಸೂರು, ವಿಜಯಪುರ.