Breaking News

ದುಷ್ಕರ್ಮಿಗಳು ಬೀದಿ ನಾಯಿಗಳಿಗೆ ವಿಷ ಹಾಕಿದ ಘಟನೆ: ಮೈಸೂರು

Spread the love

ಮೈಸೂರು: ದುಷ್ಕರ್ಮಿಗಳು ಬೀದಿ ನಾಯಿಗಳಿಗೆ ವಿಷ ಹಾಕಿದ ಘಟನೆ ದಾರುಣ ನಗರದಲ್ಲಿ ನಡೆದಿದ್ದು, ವಿಷ ಆಹಾರ ಸೇವಿಸಿದ 13 ನಾಯಿಗಳ ಪೈಕಿ 5 ನಾಯಿಗಳು ಸಾವನ್ನಪ್ಪಿ, 8 ನಾಯಿಗಳ ಸ್ಥಿತಿ ಗಂಭೀರವಾಗಿದೆ.

ಇಲ್ಲಿನ ಕೆ. ಲೇಔಟ್ ನಲ್ಲಿ ರಾತ್ರಿ ಘಟನೆ ನಡೆದಿದೆ. ಸ್ಥಳೀಯ ಪ್ರಾಣಿದಯಾ ಸಂಘದ ಹೋರಾಟಗಾರರು ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೀದಿ ನಾಯಿಗಳಿಗೆ ಆಗಾಗ ಚುಚ್ಚುಮದ್ದುಗಳನ್ನು ನೀಡಲಾಗುತ್ತಿತ್ತು. ಎಲ್ಲಾ ನಾಯಿಗಳು ಆರೋಗ್ಯಕರ ಹಾಗೂ ಸ್ನೇಹಯುತವಾಗಿದ್ದವು. ಮಕ್ಕಳನ್ನಾಗಲೀ, ವಾಹನಗಳ ಹಿಂದೆಯಾಗಲೀ ಓಡುತ್ತಿರಲಿಲ್ಲ. 2ನೇ ಅಡ್ಡ ರಸ್ತೆಯಲ್ಲಿ ಎರಡು ನಾಯಿಗಳು ಸತ್ತು ಬಿದ್ದಿದ್ದವು. ಮತ್ತೆರಡು ನಾಯಿಗಳು ಮತ್ತೊಂದು ಬೀದಿಯಲ್ಲಿ ಸತ್ತಿದ್ದವು ಎಂದು ಪ್ರತಿ ನಿತ್ಯ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದ ವ್ಯಕ್ತಿಯೊಬ್ಬರು ಹೇಳಿದ್ದಾರೆ.

5 ನಾಯಿಗಳು ಸಾವನ್ನಪ್ಪಿದ್ದು, ಕೆಲ ನಾಯಿಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಪಿಎಫ್‌ಎ ಮ್ಯಾನೇಜಿಂಗ್ ಟ್ರಸ್ಟಿ ಸವಿತಾ ನಾಗಭೂಷಣ್ ಹೇಳಿದ್ದಾರೆ.


Spread the love

About Laxminews 24x7

Check Also

ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ವರ್ಷಪೂರ್ತಿ ರಾಜ್ಯದೆಲ್ಲೆಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. :C.M.

Spread the love1924 ರ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಪೂರ್ವಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಗಾಂಧೀಜಿಯವರ ವಿಚಾರಧಾರೆಯನ್ನು ಪ್ರಚುರಪಡಿಸಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ