Breaking News

ದಾವಣಗೆರೆ:ಕಟ್ಟಿಕೊಂಡ ಹೆಂಡತಿ ಮತ್ತು ಮುದ್ದಾದ ಎರಡು ಮಕ್ಕಳನ್ನು ಬೀದಿಗೆ ತಳ್ಳಿ ಮತ್ತೊಂದು ಹುಡ್ಗಿಯನ್ನು ಮದುವೆಯಾಗಿ ಚಕ್ಕಂದವಾಡುತ್ತಿದ್ದ ಖತರ್ನಾಕ್

Spread the love

ದಾವಣಗೆರೆ:ಕಟ್ಟಿಕೊಂಡ ಹೆಂಡತಿ ಮತ್ತು ಮುದ್ದಾದ ಎರಡು ಮಕ್ಕಳನ್ನು ಬೀದಿಗೆ ತಳ್ಳಿ ಮತ್ತೊಂದು ಹುಡ್ಗಿಯನ್ನು ಮದುವೆಯಾಗಿ ಚಕ್ಕಂದವಾಡುತ್ತಿದ್ದ. ಖತರ್ನಾಕ್ ಚಾಲಕಿ‌ ಹೆಸರು ನಿಂಗರಾಜ್ ಅಂತ, ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬಸವಪಟ್ಟಣ ಗ್ರಾಮದವನು. ಅಂಬ್ಯುಲೆನ್ಸ್ ಚಾಲಕನಾಗಿದ್ದ ಈತ ಕಳೆದ 2014 ರಲ್ಲಿ ಹೊನ್ನಾಳಿಯ ಬೀರಗೊಂಡನಹಳ್ಳಿ ಗ್ರಾಮದ ನೀಲಮ್ಮ ಎನ್ನುವ ಯುವತಿಯನ್ನು ಮದುವೆಯಾಗಿದ್ದ. ಬಳಿಕ ಇಬ್ಬರ ದಾಂಪತ್ಯದಿಂದ ಮುದ್ದಾದ ಇಬ್ಬರು ಗಂಡು ಮಕ್ಕಳಿದ್ದಾರೆ.. ಆದರೆ ಈತನ ತಾಯಿ ಹಾಸ್ಟೆಲ್ ಒಂದರಲ್ಲಿ‌ ಕೆಲಸ ಮಾಡುತ್ತಿದ್ದು, ಹಣದ ದುರಾಸೆಗೆ ಬಿದ್ದು ಮಗನಿಗೆ‌ ಹಾಸ್ಟೆಲ್ ನಲ್ಲಿ‌ ಅಡುಗೆ‌ ಕೆಲಸ ಮಾಡುತ್ತಿದ್ದ ಯುವತಿಯ ಜೊತೆ ಮದುವೆ ಮಾಡಿಸಲು ಸಂಚು ರೂಪಿಸಿದ್ದಲ್ಲದೆ ಮದುವೆ ಕೂಡ ಮಾಡಿಸಿದ್ದಾಳೆ.
ಅಲ್ಲದೆ ಕಿತಾಪತಿ ಕೆಲಸ ಮಾಡಿಕೊಂಡು ಡ್ರೈವರ್ ಕೆಲಸ ಕಳೆದುಕೊಂಡಿದ್ದ ನಿಂಗರಾಜ್ ಈ ಹಿಂದೆ ಜಿಲ್ಲಾಧಿಕಾರಿ‌ ಮಹಾಂತೇಶ್ ಬೀಳಗಿಯವರ ಜನ ಸ್ಪಂದನ ಕಾರ್ಯಕ್ರಮಕ್ಕೆ  ಹೋಗಿ ಕೆಲಸ ಕೊಡಿಸಿ, ಇಲ್ಲ ಅಂದ್ರೆ ವಿಷ ಕುಡಿದು ಸಾಯುತ್ತೇನೆ ಎಂದು ಹೆದರಿಸಿದ್ದ.‌ ಇದಕ್ಕೆ ಕೆಂಡಮಂಡಲರಾದ ಡಿಸಿ ಸರಿಯಾಗಿ ಉಗಿದು ಬುದ್ದಿವಾದ ಹೇಳಿದ್ರು.  ಬುದ್ದಿವಾದ ಕೇಳಿ ಒಳ್ಳೆಯ ಜೀವನ ನಡೆಸುತ್ತಾನೇನೋ ಅಂದುಕೊಂಡ್ರೆ, ಈತ ಕಟ್ಟಿಕೊಂಡ ಹೆಂಡತಿಯನ್ನು ತವರು ಮನೆಯಲ್ಲೇ ಬಿಟ್ಟು ಈಗ ಬೇರೆ ಮದುವೆಯಾಗಿ ಮಜಾ ಮಾಡುತ್ತಿದ್ದಾನೆ.

ಇನ್ನು  ನಿಂಗರಾಜ್ ಖತರ್ನಾಕ್ ಬುದ್ದಿಯಿಂದ ಹೆಂಡತಿಯನ್ನು ತವರು ಮನೆಗೆ ಎರಡು ದಿನ‌ ಇದ್ದು ಬಾ ಎಂದು ಹೇಳಿ ಬಿಟ್ಟು ಹೋದವನು ಇದಯವರೆಗೂ ನಾಪತ್ತೆಯಾಗಿದ್ದಾನೆ. ಪೋನ್ ಮಾಡಿದ್ರೆ ಸ್ವಿಚ್ ಆಫ್ ಆಗಿತ್ತು. ತಾನೇ ಗಂಡನ ಮನೆಗೆ ಹೋದ್ರೆ ಅಲ್ಲಿ ಕೂಡ ಮನೆ ಬಾಗಿಲು ಹಾಕಿಕೊಂಡು ಹೋಗಿದ್ದರು. ಇದರಿಂದ ನೀಲಮ್ಮನಿಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಗಂಡನ ತಂಗಿ ಮನೆಯಲ್ಲಿ ಅವರ ತಾಯಿ ಇದ್ದುದನ್ನು‌ ನೋಡಿ ನನ್ನ ಗಂಡ ಎಲ್ಲಿ ಎಂದು ಕೇಳಿದಾಗ ನೀಲಮ್ಮನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಗಂಡನನ್ನು ಹುಡುಕಿಕೊಡುವಂತೆ ಬಸವಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ರು ಯಾವುದೇ ಪ್ರಯೋಜನವಾಗಿಲ್ಲ.
ಅಲ್ಲದೆ ಕೆಲ ರೈತ‌ ಮುಖಂಡರು ಕೂಡ ನ್ಯಾಯ ಓದಗಿಸುತ್ತೇವೆ ಎಂದು ಬಂದು ಕೆಟ್ಟದಾಗಿ ನಡೆಸಿಕೊಂಡಿದ್ದಾರಂತೆ. ನಾನು ನ್ಯಾಯ ಕೊಡಿಸುತ್ತೇನೆ ನಾನು ಕರೆದಾಗಲೆಲ್ಲ ನನ್ನ ಜೊತೆ ಬರಬೇಕು ಎಂದು ಕಂಡಿಷನ್ ಹಾಕಿದ್ದಾರಂತೆ. ಇದರಿಂದ ನ್ಯಾಯ ಕೊಡಿಸಬೇಕಾದವರೇ ಅನ್ಯಾಯ ಮಾಡಲು ಹೊರಟಿದ್ದಾರೆ. ಇತ್ತ ನಿಂಗರಾಜ್ ಬೇರೊಬ್ಬ ಯುವತಿಯ ಜೊತೆ ಮದುವೆ ಮಾಡಿಕೊಂಡಿದ್ದು. ಈಗ ನ್ಯಾಯ ಕೊಡಿಸಿ‌ ಎಂದು ಇಡೀ ಕುಟುಂಬವೇ ಗೋಗರೆಯುತ್ತಿದೆ.
ಒಟ್ಟಾರೆಯಾಗಿ ಕೆಲಸ ಕೊಡಿಸಿ ಎಂದು ಹೈಡ್ರಾಮ ಮಾಡಿ ಈಗ ಕಟ್ಟಿಕೊಂಡ‌ ಹೆಂಡತಿ‌ ಮಕ್ಕಳನ್ನು ಬೀದಿಗೆ ತಳ್ಳಿ ಮತ್ತೊಬ್ಬ ಮಹಿಳೆಯ ಹಿಂದೆ‌ ಹೋಗಿದ್ದಾನೆ. ನ್ಯಾಯ ಕೊಡಿಸಬೇಕಿದ್ದ ಪೊಲೀಸರೇ ಈಗ ಕೈಚಲ್ಲಿ ಕುಳಿತಿದ್ದು. ನ್ಯಾಯಕ್ಕಾಗಿ ನೊಂದ ಮಹಿಳೆ ಪರಿತಪಿಸುತ್ತಿದ್ದಾಳೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ನೊಂದ ಮಹಿಳೆಗೆ ನ್ಯಾಯ ಕೊಡಿಸಿ ಮಹಿಳೆ ಬಾಳಿಗೆ ಬೆಳಕಾಗಲಿ.


Spread the love

About Laxminews 24x7

Check Also

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಮಗ್ರ ಸಿದ್ಧತೆ:D.C.

Spread the loveಬೆಳಗಾವಿ: ರಾಜ್ಯಾದ್ಯಂತ ಮಾರ್ಚ್ 21 ರಿಂದ ಏಪ್ರಿಲ್ 04 ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆಯಲಿದ್ದು, ಜಿಲ್ಲೆಯಲ್ಲಿ ಪರೀಕ್ಷೆಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ