ಬೆಂಡವಾಡ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮದ ತೋಟದ ಮನೆಗೆ ತಡರಾತ್ರಿ ಆರು ಜನರು ಕಳ್ಳರು ಕಳ್ಳತನಕ್ಕೆ ಯತ್ನ್ಸಿದ್ದಾಗ ಮನೆಯ ಮಾಲಿಕ ಹಾಗೂ ಮಾಲಿಕನ ಮಗ ಕಳ್ಳರನ್ನು ಹಿಡಿಯಲು ಬೆನ್ನತ್ತಿದ್ದಾಗ ಕಳ್ಳರು ತಂದೆ, ಮಗನನ್ನು ಬಡೆದು ಹಲ್ಲೆ ನಡೆಸಿ ರಸ್ತೆ ಪಕ್ಕದಲ್ಲಿದ್ದ ಬಾವಿಗೆ ಎಸೆದು ಕಳ್ಳರು ಓಡಿ ಹೋಗಿದ್ದರೆ. ಇನ್ನೂ ಹಲ್ಲೆಯಿಂದ ತಂದೆ ಸಾವನ್ನೊಪ್ಪಿದ್ದು ಮಗನನ್ನು ಗೋಕಾಕ ದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಮೃತನನ್ನು ಬೆಂಡವಾಡ ಗ್ರಾಮದ ನಿವಾಸಿ ಮುಕುಂದ ಮೇತ್ರಿ(38) ಎಂದು ಗುರುತಿಸಲಾಗಿದೆ. ಇನ್ನೂ ಆತನ ಮಗನಾದ ರಾಘವೇಂದ್ರ ಮೇತ್ರಿ (23) ಗಂಭೀರ ಗಾಯವಾಗಿದ್ದರಿಂದ ಆತನನ್ನು ಗೋಕಾಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾಗಿಸಿದ್ದಾರೆ. ಘಟನಾ ಸ್ಥಳಕ್ಕೆ ರಾಯಬಾಗ ಪೊಲೀಸರು ಭೇಟಿನೀಡಿ ಪರಿಶೀಲಿನೆ ನಡೆಸಿ ಕಳ್ಳರನ್ನು ಹಿಡಿಯಲು ಜಾಲ ಬೀಸಿದ್ದಾರೆ. ಈ ಕುರಿತು ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ