ಬೆಳಗಾವಿ : ಬೆಳಗಾವಿ ರಾಜಕೀಯ ಬದ್ಧ ವೈರಿಗಳ ಮುಖಾಮುಖಿ ಆಗಿದ್ದಾರೆ.ಬೆಳಗಾವಿ ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಇಬ್ಬರು ಮುಖಾಮುಖಿ ಆಗುವ ಮೂಲಕ ಮೂರು ವರ್ಷಗಳ ವೈರತ್ವಕ್ಕೆ ಅಂತ್ಯ ಹಾಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ಹಾವು- ಮುಂಗುಸಿಯಂತೆ ಕಿತ್ತಾಡಿಕೊಂಡಿದ್ದ ಈ ಇಬ್ಬರು ನಾಯಕರು ಒಂದೇ ವೇದಿಕೆಗೆ ಬರಬೇಕೆನ್ನುವದು ಬಿಜೆಪಿ ಕಾರ್ಯಕರ್ತರ ಅಪೇಕ್ಷೆಯಾಗಿತ್ತು ,ಡಿಸಿಸಿ ಬ್ಯಾಂಕ್ ಚುನಾವಣೆ ಈ ಅವಕಾಶವನ್ನು ಕಲ್ಪಿಸಿ ಕೊಟ್ಟಿದೆ.
ಡಿಸಿಸಿ ಬ್ಯಾಂಕಿನಲ್ಲಿ
ಮುಖಾಮುಖಿಯಾದ ಇಬ್ಬರು ನಾಯಕರಾದ
ಡಿಸಿಎಂ ಲಕ್ಷ್ಮಣ ಸವದಿ, ಸಚಿವ ರಮೇಶ್ ಜಾರಕಿಹೋಳಿ ಮುಖಾಮುಖಿಯಾಗಿ ,ಒಂದೇ ಸೋಫಾದಲ್ಲಿ ಅಕ್ಕ ಪಕ್ಕ ಕುಳಿತು ಉಭಯ ಕುಸಲೋಪಚಾರಿ ವಿಚಾರಿಸಿ ಒಂದೇ ಸೋಪಾ ಮೇಲೆ ಕುಳಿತು ಕ್ಯಾಮರಾಕ್ಕೆ ಪೋಜು ಕೊಡುವ ಮೂಲಕ ಎಲ್ಲರ ಗಮನ ಸೆಳೆದರು.
ಖಾನಾಪೂರ ಸೇರಿ ಉಳಿದ ಕ್ಷೇತ್ರಗಳ ಅವಿರೋಧ ಆಯ್ಕೆ ಕುರಿತು ಇಬ್ಬರೂ ಚರ್ಚೆ ನಾವಿಬ್ಬರೂ ಮೊದಲಿನಿಂದಲ್ಲೂ ಒಂದೇ ಆಗಿದ್ದವು ಅಂತ ಹೇಳಿಕೆ ಕೊಟ್ಟರು. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇಬ್ಬರೂ ನಾಯಕರ ನಡುವೆ ವೈಮನಸ್ಸು ಉಂಟಾಗಿ ಇಬ್ಬರೂ ಬೇರೆ ಬೇರೆಯಾಗಿದ್ದರು
ಸವದಿ ವಿರುದ್ಧ ಮಹೇಶ್ ಕುಮಠಳ್ಳಿ ಕಣಕ್ಕಿಳಿಸಿ ಸವದಿ ಸೋಲಿಗೆ ಕಾರಣವಾಗಿದ್ದ ಸಚಿವ ರಮೇಶ್ ಜಾತಕಿಹೋಳಿ ಹಳೆ ವೈಮನಸ್ಸು ಮರೆತು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಒಂದಾಗಿದ್ದು ವಿಶೇಷ
Laxmi News 24×7