Breaking News

ಬೆಚ್ಚಿ ಬಿದ್ದ ಬೆಳಗಾವಿ ಜಿಲ್ಲೆಗೆ ಖುಷಿ ಸುದ್ದಿ: ಪಾಸಿಟಿವ್ ವ್ಯಕ್ತಿ ಗುಣಮುಖ

Spread the love

 

ಬೆಳಗಾವಿ: ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಬೆಳಗಾವಿಯಲ್ಲಿ ಶನಿವಾರ ಕೊಂಚ ನಿಟ್ಟುಸಿರು ಬಿಡುವ ವಿಚಾರ ಹೊರ ಬಿದ್ದಿದ್ದು, ಸೋಂಕಿತ ವ್ಯಕ್ತಿಯೋರ್ವ ಗುಣಮುಖನಾಗಿ ಡಿಸ್ಚಾರ್ಜ್ ಅಗುತ್ತಿರುವುದ ಜಿಲ್ಲೆಗೆ ಖುಷಿಯ ವಿಷಯವಾಗಿದೆ.

ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ವ್ಯಕ್ತಿಗೆ ಏ. 3ರಂದು ಸೋಂಕು ತಗುಲಿರುವುದು ಖಚಿತವಾಗಿತ್ತು. ಜಿಲ್ಲೆಯಲ್ಲಿ ಬಂದ ಮೊದಲ ಪಾಸಿಟಿವ್ ವರದಿಯಲ್ಲಿ ಈ ವ್ಯಕ್ತಿಯೂ ಸೇರಿದ್ದನು.

14 ದಿನಗಳ ಬಳಿಕ ವ್ಯಕ್ತಿಯ ಗಮಟಲು ದ್ರವ ಮದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದಾಗ ನೆಗೆಟಿವ್ ವರದಿ ಬಂದಿದೆ. ಮತ್ತೆ 15 ದಿನಗಳ ಬಳಿಕ ಮತ್ತೊಮ್ಮೆ ಪರೀಕ್ಷೆಗೆ ಕಳುಹಿಸಿದಾಗ ಎರಡೂ ಸಲ ವರದಿ ನೆಗೆಟಿವ್ ಬಂದಿದ್ದರಿಂದ ಸೋಂಕಿತ ವ್ಯಕ್ತಿ ಸಂಪೂರ್ಣ ಗುಣಮುಖನಾಗಿದ್ದು ಖಚಿತವಾಗಿದೆ. ಸಂಜೆ ಹೊತ್ತಿಗೆ ವೈದ್ಯರು ಹೂ ನೀಡಿ ಡಿಸ್ಚಾರ್ಜ್ ಮಾಡುವ ಬಗ್ಗೆ ಯೋಚನೆಯಲ್ಲಿದ್ದಾರೆ. ಈ ನೆಗೆಟಿವ್ ವರದಿಯಿಂದಾಗಿ ಜಿಲ್ಲೆಯಲ್ಲಿ ಇದೊಂದು ಉತ್ತಮ ಬೆಳವಣಿಗೆಯಾಗಿದೆ.


Spread the love

About Laxminews 24x7

Check Also

ಅಕ್ರಮ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

Spread the loveಬೆಳಗಾವಿ: ಮಹಾನಗರ ಪಾಲಿಕೆ 8 ಮತ್ತು 9 ವಾರ್ಡ್‌ನಲ್ಲಿನ  ಆಸ್ತಿಗಳಿಗೆ ಮತ್ತೊಬ್ಬರ ಹೆಸರಿನಲ್ಲಿ ಬಾಂಡ್ ಆಧಾರದ ಮೇಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ