ಗೋಕಾಕ : ಜಗತ್ತಿನಾದ್ಯಂತ ಕಾಡುತ್ತಿರುವ ಕೊರೋನಾ ವಿರುದ್ಧ ಸಮರ ಸಾರುತ್ತಿರುವ ಕೋರೋನಾ ವಾರಿಯರ್ಸ್ ಅವರಿಗೆ ಪ್ರತಿಯೊಬ್ಬರೂ ಗೌರವ ಸಲ್ಲಿಸಿ ಕೃತಜ್ಞತೆ ಸಲ್ಲಿಸುವಂತೆ ಯುವ ಮುಖಂಡ ನಾಗೇಶ ಶೇಖರಗೋಳ ಹೇಳಿದರು.
ತಾಲೂಕಿನ ಬಳೋಬಾಳ ಗ್ರಾಮ ಪಂಚಾಯತ ಕಾರ್ಯಾಲಯದ ಆವರಣದಲ್ಲಿ ಬುಧವಾರದಂದು ಗ್ರಾಮಸ್ಥರು ಹಮ್ಮಿಕೊಂಡಿದ್ದ ಕೊರೋನಾ ವೈರಸ್ ವಾರಿಯರ್ಸ್ ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊರೋನಾ ಹಿನ್ನೆಲೆಯಲ್ಲಿ ಜನ ಜಾಗೃತಿ ಮೂಡಿಸುತ್ತಿರುವ ವೈದ್ಯರು, ದಾದಿಯರು, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸರು, ಪೌರ ಕಾರ್ಮಿಕರ ಕಾರ್ಯವನ್ನು ಅವರು ಶ್ಲಾಘಿಸಿದರು.
ನ್ಯಾಯವಾದಿ ಮುತ್ತೆಪ್ಪ ಕುಳ್ಳೂರ ಮಾತನಾಡಿ, ಕೊರೋನಾ ವೈರಸ್ ರೋಗವನ್ನು ತಡೆಗಟ್ಟಲು ಅರಭಾವಿ ಮತಕ್ಷೇತ್ರದಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕ್ಷೇತ್ರದ ಸುಮಾರು 84500 ಕುಟುಂಬಗಳಿಗೆ ಹಸಿದವರಿಗೆ ಅನ್ನ ನೀಡಿದ ಮಹಾನ್ ದಾನಿಯಾಗಿದ್ದಾರೆ. ಶಾಸಕರ ಕಾರ್ಯ ಇಡೀ ದೇಶದಲ್ಲಿಯೇ ಮಾದರಿ ಕಾರ್ಯವಾಗಿದೆ. ಜೊತೆಗೆ ಕ್ಷೇತ್ರದ ಜನರ ಸುರಕ್ಷತೆಗಾಗಿ 2.50 ಲಕ್ಷ ಮಾಸ್ಕಗಳನ್ನು ವಿತರಿಸಿ ಮಾನವೀಯತೆಯ ಮೌಲ್ಯಕ್ಕೆ ಸಾಕ್ಷಿಯಾಗಿದ್ದಾರೆ. ಇಂತಹವರನ್ನು ನಾವೆಲ್ಲರೂ ಪಡೆದಿರುವುದು ಧನ್ಯ ಎಂದು ಹೇಳಿದರು.
ಘಟಪ್ರಭಾ ಪಿಎಸ್‍ಐ ಹಾಲಪ್ಪ ಬಾಲದಂಡಿ, ಟೀಂ ಎನ್‍ಎಸ್‍ಎಫ್‍ನ ಲಕ್ಕಪ್ಪ ಲೋಕುರಿ, ಪಿಡಿಓ ಜೋತಾವರ, ವಿನೋದ ಪೂಜೇರಿ, ಪ್ರಧಾನಿ ಕಳಸನ್ನವರ, ಶಿವಪುತ್ರ ಚಿಮ್ಮಡ, ಲಗಮನ್ನಾ ಕಳಸನ್ನವರ, ಸುನೀಲ ಈರೇಶನವರ, ಸಿದ್ದಯ್ಯಾ ಹೋಳಗಿ, ನಾಗಪ್ಪ ಪಾಟೀಲ, ಮುತ್ತೆಪ್ಪ ಬೆಳವಿ, ರಮೇಶ ಕೋಲಕಾರ, ಗ್ರಾಮ ಪಂಚಾಯತ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್ ಅವರನ್ನು ಗ್ರಾಮ ಪಂಚಾಯತಿಯಿಂದ ಸತ್ಕರಿಸಿ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.