ಅಥಣಿ: ಸಕ್ಕರೆ ಕಾರ್ಖಾನೆಗಳು ರೈತರಿಂದ ಖರೀದಿಸಿದ ಕಬ್ಬಿಗೆ 14 ದಿನದಲ್ಲಿ ರೈತನಿಗೆ ಬಿಲ್ ಬಿಡುಗಡೆ ಮಾಡಬೇಕೆಂದು ಕಾನೂನು ಇದ್ದರೂ ಸಕ್ಕರೆ ಕಾರ್ಖಾನೆ ಮಾಲೀಕರು ಯಾರು ಇದನ್ನು ಪಾಲಿಸುತ್ತಿಲ್ಲ, ಯಾವ ಸಕ್ಕರೆ ಕಾರ್ಖಾನೆ ಪಾಲಿಸಿಕೊಂಡು ಬಂದಿದೆ ಎಂದು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಲಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಥಣಿ ತಾಲೂಕು ಘಟಕದ ಅಧ್ಯಕ್ಷ ಮಾಹದೇವ ಮಡಿವಾಳ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕಬ್ಬಿಗೆ ಯೋಗ್ಯ ದರ ನೀಡುತ್ತಿಲ್ಲ ಎಂದು ಅವರು ಪಟ್ಟಣದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿ ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಎರಡು ವರ್ಷದಿಂದ ಬೆಳಗಾವಿ ಜಿಲ್ಲೆಯ ರೈತರ ಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ, ಅದರಲ್ಲೂ ಕಬ್ಬು ಬೆಳೆಗಾರರ ಸಮಸ್ಯೆ ತೀವ್ರವಾಗಿದೆ, ಸರ್ಕಾರಗಳು ಮಾಸ್ಕ್ ಧರಿಸಿರಲಿಲ್ಲ ಎಂಬುದಕ್ಕೆ ಸಾವಿರಾರು ರೂಪಾಯಿ ದಂಡ ವಿಧಿಸುವ ಕಾನೂನು ರೂಪಿಸುತ್ತಾರೆ, ಕಳೆದ ನಾಲ್ಕು ವರ್ಷಗಳಿಂದ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಬ್ಬಿನ ಬಿಲ್ಲ ಬಿಡುಗಡೆ ಮಾಡುತ್ತಿಲ್ಲ ಕಾರ್ಖಾನೆ ಮಾಲೀಕರ ಮೇಲೆ ದಂಡ ವಿಧಿಸುವ ಕಾರ್ಯಕ್ಕೆ ಹಾಗೂ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಿಕ್ಕೆ ಯಾಕೆ ಹಿಂದೇಟು ಹಾಕುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕಾರ್ಯ ರಾಜ್ಯ ಕೇಂದ್ರ ಸರ್ಕಾರಗಳು ಮಾಡುತ್ತಿದ್ದೆ ಎಂದು ಆರೋಪಿಸಿದರು.
ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ನುರಿಸುವ ಹಾಗೂ ಕಟಾವು ಹಂಗಾಮು ಆಗಿದ್ರಿಂದ ಸಕ್ಕರೆ ಕಾರ್ಖಾನೆಗ ಮಾಲಿಕರು ಪ್ರತಿ ಟನ್ ಕಬ್ಬಿಗೆ ದರವನ್ನು ನಿಗದಿ ಮಾಡುವಂತೆ ವತ್ತಾಯಿಸಿದರು, ಹಾಗೂ ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ಪ್ರತಿ ಒಂದು ಟನ್ ಗೆ ೩೩೦೦ ರೂಪಾಯಿ ವಿತರಣೆ ಮಾಡುತ್ತಿದ್ದಾರೆ , ರಾಜ್ಯದಲ್ಲಿ ಅದರಲ್ಲೂ ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ತಮ್ಮ ಮನಸಿಗೆ ಬಂದ ಹಾಗೆ ಕಬ್ಬಿನ ಬಿಲ್ ನೀಡುತ್ತಿದ್ದಾರೆ, ಅದರಲ್ಲೂ ಒಂದು ಟನ್ ಕಬ್ಬಿಗೆ ೨೫೦೦, ೨೬೦೦, ೨೭೦೦ ರೂಪಾಯಿ ತಮಗೆ ತೋಚಿದ ಹಾಗೆ ಬೆಲ್ ವಿತರಣೆ ಮಾಡುತ್ತಿದ್ದಾರೆ, ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು
ನಾವು ರೈತರ ಪರವಾಗಿದ್ದೇವೆ ಎಂದು ಹಸಿರು ಶಾಲು ಹಾಕಿ ಪ್ರಮಾಣ ವಚನ ಸ್ವೀಕರಿಸಿದರೆ ಸಾಲದು, ರೈತರ ಹಿತ ಕಾಪಾಡುವ ಕೆಲಸಕ್ಕೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಎರಡು ವರ್ಷದಿಂದ ಕೃಷ್ಣಾ ನದಿ ಪ್ರವಾಹಕ್ಕೆ ತುತ್ತಾಗಿ ಮತ್ತು ಈ ಬಾರಿ ಅತಿವೃಷ್ಟಿಯಿಂದ ರೈತ ಸಮೂಹ ತುಂಬಾ ನೋವಿನಲ್ಲಿದೆ , ಸರ್ಕಾರ ರೈತರ ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
Laxmi News 24×7