ಮಂಡ್ಯ :ಮಂಡ್ಯ ಸಕ್ಕರೆಯ ನಾಡಿನಲ್ಲಿ ಹುಟ್ಟಿ ನಾಗರಹಾವು ಮೊದಲನೇ ಚಿತ್ರಕ್ಕೆ
ಕಾಲನ್ನಿಟ್ಟು ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ.
ಹಿರಿಯ ರಾಜಕಾರಣಿ ಅನಿಸಿಕೊಂಡ ರೆಬಲ್ ಸ್ಟಾರ್ ಅಂಬರೀಶ್ ಅವರ ನಡೆದು ಬಂದ ಹಾದಿ ಎಂದು ಅನಿಸಿಕೊಂಡ.

ಇವತ್ತು ನಾಡು ಕಂಡ ಅಪರೂಪದ ಜನಾನುರಾಗಿ ಕಲಾವಿದ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಜನ್ಮದಿನ.
ಚಿತ್ರರಂಗ ಮತ್ತು ರಾಜಕೀಯದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದ್ದ ಅಂಬರೀಶ್ ಕನ್ನಡಿಗರ ಪಾಲಿಗೆ ಎಂದಿಗೂ ಲೆಜೆಂಡ್ ಆಗಿಯೇ ಉಳಿದಿದ್ದಾರೆ.
ಅವರ ನೆನಪುಗಳ ಜೊತೆಗೆ ಎಲ್ಲ ಅಭಿಮಾನಿಗಳಿಗೂ ಅಂಬರೀಶ್ 68ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಮಂಡ್ಯದ ಗಂಡು ಎಂದೇ ಜನಮಾನಸದಲ್ಲಿ ಪ್ರಖ್ಯಾತರಾಗಿರುವ ಅಂಬರೀಶ್ ಅವರು ಕನ್ನಡ ನಾಡು
ನುಡಿಗೆ ಸಲ್ಲಿಸಿರುವ ಸೇವೆ ಅವಿಸ್ಮರಣೀಯವಾದುದು.
Laxmi News 24×7