Breaking News

ರೈಲ್ವೆ ಆನ್‌ಲೈನ್ ಟಿಕೆಟ್‌ ಬುಕ್ಕಿಂಗ್‌; IRCTC ಹೊಸ ಮಾರ್ಗಸೂಚಿ…

Spread the love

ನವದೆಹಲಿ, ಜುಲೈ 30: ರೈಲಿನಲ್ಲಿ ಪ್ರಯಾಣಿಸಲು ಆನ್‌ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡುವವರಿಗೆ IRCTC (ಭಾರತೀಯ ರೈಲ್ವೆ ಕ್ಯಾಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮ) ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿರುವುದಾಗಿ ತಿಳಿಸಿದೆ.

ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಸರಳಗೊಳಿಸಿದ್ದು, ಈ ಹೊಸ ವಿಧಾನದಲ್ಲಿ ಕೇವಲ 50 ರಿಂದ 60 ಸೆಕೆಂಡುಗಳಲ್ಲಿ ಆನ್‌ಲೈನ್ ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ. ಕೊರೊನಾ ಕಾರಣವಾಗಿ IRCTC ಈ ಹೊಸ ಪ್ರಕ್ರಿಯೆ ಆರಂಭಿಸಿರುವುದಾಗಿ ಮಾಹಿತಿ ನೀಡಿದೆ.

ಕೊರೊನಾ ಸಾಂಕ್ರಾಮಿಕದಿಂದ ದೀರ್ಘ ಸಮಯದಿಂದ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಿಲ್ಲ. ಆ ರೀತಿಯ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಹೊಸ ನಿಯಮ ಅನ್ವಯವಾಗುತ್ತದೆ. ಅಂಥ ಬಳಕೆದಾರರು ಐಆರ್‌ಸಿಟಿಸಿ ಪೋರ್ಟಲ್‌ನಲ್ಲಿ ಟಿಕೆಟ್ ಖರೀದಿ ಮೊದಲು ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ. ನಿಯಮಿತವಾಗಿ ಟಿಕೆಟ್ ಕಾಯ್ದಿರಿಸುವವರಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ರೈಲ್ವೆ ನಿಗಮ ತಿಳಿಸಿದೆ.

ಸುಲಭವಾಗಿ ಹೇಗೆ ರೈಲು ಟಿಕೆಟ್ ಬುಕ್ಕಿಂಗ್ ಮಾಡಬಹುದು? ಮುಂದೆ ಓದಿ…

ಮೊದಲು ಏನು ಮಾಡಬೇಕು?

* ಟಿಕೆಟ್ ಬುಕ್ಕಿಂಗ್‌ ಮಾಡಲು ಪ್ರಯಾಣಿಕರು IRCTCಯಲ್ಲಿ ಲಾಗಿನ್ ಐಡಿ ಹಾಗೂ ಪಾಸ್‌ವರ್ಡ್ ಮೂಲಕ ಖಾತೆ ತೆರೆಯಬೇಕು.

* ಲಾಗಿನ್‌ ಪಾಸ್‌ವರ್ಡ್‌ಗಾಗಿ ನಿಮ್ಮ ಇಮೇಲ್ ಐಡಿ,ಮೊಬೈಲ್ ಸಂಖ್ಯೆ ನಮೂದಿಸಬೇಕು.

* ಒಮ್ಮೆ ಈ ನಂಬರ್ ವೇರಿಫಿಕೇಷನ್ ಆದರೆ, ಸುಲಭವಾಗಿ ಬುಕ್ಕಿಂಗ್ ಮಾಡಬಹುದು.

* ಐಆರ್‌ಸಿಟಿಸಿ ಪೋರ್ಟಲ್ ತೆರೆದ ನಂತರ ವೇರಿಫಿಕೇಷನ್ ವಿಂಡೋ ತೆರೆಯುತ್ತದೆ.

* ಪ್ರಯಾಣಿಕರು ಈ ಮುನ್ನ ನಮೂದಿಸಿದ್ದ ಇಮೇಲ್ ಹಾಗೂ ಮೊಬೈಲ್ ನಂಬರ್‌ ಅನ್ನು ಹಾಕಬೇಕು

* ನಂತರ ವೇರಿಫಿಕೇಶನ್‌ಗಾಗಿ ಬಲಭಾಗದಲ್ಲಿ ಮತ್ತು ಸರಿಪಡಿಸಲು ಎಡ ಭಾಗದಲ್ಲಿ ಎಡಿಟ್ ಆಯ್ಕೆಯಿದೆ.

* ನಿಮ್ಮ ಇ ಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ಬದಲಿಸಬೇಕು ಎಂದಿದ್ದರೆ, ಎಡಭಾಗದಲ್ಲಿರುವ ಎಡಿಟ್ ಆಪಕ್ಷನ್‌ಗೆ ಹೋಗಿ ಬದಲಾಯಿಸಿ.

* ನೀವು ನಮೂದಿಸಿರುವ ವಿವರಗಳು ಸರಿಯಾಗಿದೆಯೇ ಎಂದು ಪರಿಶೀಲಿಸಿದ ಬಳಿಕ ವೇರಿಫಿಕೇಶನ್ ಆಯ್ಕೆ ಬಳಸಿ. ಬಳಿಕ ನೀವು ನಮೂದಿಸಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.

* ಆ ಸಂಖ್ಯೆಯನ್ನು ನೀವು ರೈಲ್ವೆ ಟಿಕೆಟ್ ಆನ್‌ಲೈನ್ ಬುಕ್ಕಿಂಗ್‌ನಲ್ಲಿ ಟಿಕೆಟ್ ಕಾಯ್ದಿರಿಸಲು ನಮೂದಿಸಬೇಕು.

* ಒಟಿಪಿ ನಮೂದಿಸಿದ ಬಳಿಕ ನಿಮ್ಮ ಟಿಕೆಟ್ ಬುಕ್ಕಿಂಗ್ ಆಗಿರುವ ಸಂದೇಶ ನಿಮಗೆ ಇ ಮೇಲ್ ಮೂಲಕ ಬರುತ್ತದೆ.

* ಆ ಟಿಕೆಟ್ ಬುಕ್ಕಿಂಗ್ ಪ್ರಿಂಟೌಟ್ ತೆಗೆದುಕೊಳ್ಳಬಹುದು.

ಒಮ್ಮೆ ಒಂದು ಐಆರ್‌ಸಿಟಿಸಿ ಖಾತೆಯಿಂದ ಒಂದೇ ತಿಂಗಳಿನಲ್ಲಿ ಆರು ಬಾರಿ ಟಿಕೆಟ್‌ಗಳನ್ನು ಕಾಯ್ದಿರಿಸಬಹುದಾಗಿದೆ. IRCTCಯೊಂದಿಗೆ ಗುರುತಿನ ದಾಖಲೆಗಳನ್ನು ಅಳವಡಿಸುವ ಯೋಜನೆಯಲ್ಲಿ ರೈಲ್ವೆ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದು ರೈಲ್ವೆ ರಕ್ಷಣಾ ಪಡೆ ಮಹಾನಿರ್ದೇಶಕ ಅರುಣ್ ಕುಮಾರ್ ಈ ಮುನ್ನ ತಿಳಿಸಿದ್ದರು.

ಪ್ರಯಾಣಿಕರು ರೈಲ್ವೆ ಟಿಕೆಟ್‌ಗಾಗಿ ಲಾಗಿನ್ ಆಗುವಾಗ ಅವರನ್ನು ಪ್ಯಾನ್, ಆಧಾರ್ ಹಾಗೂ ಇತರೆ ಗುರುತಿನ ದಾಖಲೆಗಳೊಂದಿಗೆ ಲಿಂಕ್ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದರು.

ಇದೀಗ ಈ ಹೊಸ ವಿಧಾನದಿಂದ ಪರಿಶೀಲನೆ ಬಳಿಕ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಿಕೊಳ್ಳಲು ನೆರವಾಗಲಿದೆ. ಕೇವಲ 50-60 ಸೆಕೆಂಡುಗಳಲ್ಲೇ ರೈಲ್ವೆ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ. ಪ್ರಯಾಣಿಕರಿಗೆ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಅತಿ ಸರಳವಾಗಿದೆ. ಶೀಘ್ರವೇ ಬುಕ್ಕಿಂಗ್ ಆಗಲಿದೆ ಎಂದು ಸಂಸ್ಥೆ ತಿಳಿಸಿದೆ.


Spread the love

About Laxminews 24x7

Check Also

ರಾಜ್ಯದಲ್ಲಿ ವಿವಿಧ ಬೆಳೆಗಳ ಬಿತ್ತನೆ ನಡೆಯುತ್ತಿದ್ದು, ರಾಸಾಯನಿಕ ಗೊಬ್ಬರದ ಬೇಡಿಕೆ ಹೆಚ್ಚಿದೆ. ಈ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ

Spread the loveಮೈಸೂರು: ಪ್ರಸಕ್ತ ಸಾಲಿಗೆ ರಾಸಾಯನಿಕ ಗೊಬ್ಬರದ ಕೊರತೆಯಿಲ್ಲ. ಆದರೆ, ಕೇಂದ್ರ ಸರ್ಕಾರ ಮುಂದಿನ ವರ್ಷದಿಂದ ಯೂರಿಯಾ ಪೂರೈಕೆಯನ್ನು ಶೇ.50ರಷ್ಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ