ಬಳ್ಳಾರಿ: ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿ ಪದಗ್ರಹಣ ಮಾಡಿದ ಕಾರ್ಯಕ್ರಮಕ್ಕೆ ಶೀರಾಮುಲು ಗೈರು ಎದ್ದು ಕಾಣುತ್ತಿತ್ತು. ಡಿಸಿಎಂ ಸ್ಥಾನದ ವಿಚಾರವಾಗಿ ಅಸಮಾಧನ ಏರ್ಪಟ್ಟಿದ್ದು, ಶ್ರೀರಾಮುಲು ಮುನಿಸಿಕೊಂಡಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಎರಡು ದಿನದಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಶ್ರೀರಾಮುಲು ಇಂದು ಸುದ್ದಿಗೋಷ್ಠಿ ನಡೆಸಿ ಎಲ್ಲ ಊಹಾಪೋಹಕ್ಕೂ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಬಳ್ಳಾರಿಯಲ್ಲಿ ಗುರುವಾರ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ ಶ್ರೀರಾಮುಲು, ಬಹಳ ದಿನದಿಂದ ನಿಗದಿಯಾಗಿದ್ದ ಪೂಜೆಯಲ್ಲಿ ಭಾಗಿಯಾಗಿದ್ದೆ. ನನಗೆ ಯಾವುದೇ ಮುನಿಸಿಲ್ಲ. ನಾನು ಮುಂಚೆಯಿಂದ ಹೇಳ್ತಾ ಇದ್ದೇನೆ, ನಾನು ನಿಷ್ಠಾವಂತ ಕಾರ್ಯಕರ್ತ. ಅನೇಕ ವರ್ಷಗಳಿಂದ ಕೆಲಸ ಮಾಡಿದ್ದೇನೆ, ನಮಗೆ ಪಕ್ಷ ಮುಖ್ಯವಾಗತ್ತೆ. ಆತುರದಲ್ಲಿ ನಿರ್ಧಾರ ಕೈಗೊಳ್ಳಲು ಪಕ್ಷಕ್ಕೆ ಆಗಲ್ಲ. ನಾನು ಆರು ಚುನಾವಣೆ ಗೆದ್ದು, ಮೂರು ಭಾರಿ ಮಂತ್ರಿಯಾಗಿದ್ದೇನೆ. ನಮ್ಮ ಪಾರ್ಟಿ ಮೇಲೆ ವಿಶ್ವಾಸ ಇದೆ. ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ತಾರೆ. ನಮ್ಮಲ್ಲಿ ವೈಯಕ್ತಿಕ ಅಭಿಪ್ರಾಯಗಳಿಗೆ ಮನ್ನಣೆ ಇಲ್ಲ. ನಮಗೆ ಪಾರ್ಟಿ ನಿರ್ಧಾರವೇ ಅಂತಿಮ ಎಂದರು.
Laxmi News 24×7