ಬೆಂಗಳೂರು, ಜು.27- ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಕಗ್ಗಂಟ್ಟಾಗಿರುವುದರಿಂದ ದೆಹಲಿ ವರಿಷ್ಠರೇ ಪಕ್ಷದ ಸಂಸದೀಯ ಮಂಡಳಿಯಲ್ಲೇ ಒಬ್ಬರನ್ನು ಆಯ್ಕೆ ಮಾಡುವುದು ಖಚಿತವಾಗಿದೆ. ಸಿಎಂ ಸ್ಥಾನ ಅಲಂಕರಿಸಲು ಸುಮಾರು ಒಂದು ಡಜನ್‍ಗೂ ಅಧಿಕ ಆಕಾಂಕ್ಷಿಗಳು ಇರುವುದರಿಂದ ಸಂಸದೀಯ ಮಂಡಳಿಯಲ್ಲೇ ಹೆಸರು ಅಂತಿಮಗೊಳಿಸಿ ನೆಪಮಾತ್ರಕ್ಕೆ ಶಾಸಕಾಂಗ ಸಭೆ ನಡೆಯಲಿದೆ. ವರಿಷ್ಠರ ಸೂಚನೆಯನ್ನು ವಿಧಿಯಿಲ್ಲದೆ ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ.
ಶಾಸಕರ ಅಭಿಪ್ರಾಯದಂತೆ ಶಾಸಕಾಂಗ ಪಕ್ಷದ ನಾಯಕನ್ನು ಆಯ್ಕೆ ಮಾಡಲು ಹೋದರೆ ನೂರೆಂಟು ತಾಪತ್ರಯಗಳು ಎದುರಾಗಬಹುದೆಂಬ ಹಿನ್ನೆಲೆಯಲ್ಲಿ ವರಿಷ್ಠರೇ ಒಂದೇ ಹೆಸರನ್ನು ಶಿಫಾರಸು ಮಾಡಲಿದ್ದಾರೆ. ಒಂದು ವೇಳೆ ಒಂದಕ್ಕಿಂತ 2-3 ಹೆಸರುಗಳು ಸಿಎಂ ಸ್ಥಾನಕ್ಕೆ ಕೇಳಿ ಬಂದರೆ ಆಗ ಶಾಸಕರ ಅಭಿಪ್ರಾಯವನ್ನು ವೀಕ್ಷಕರು ಪಡೆದು ಅಂತಿಮ ತೀರ್ಮಾನ ಮಾಡಿದ ನಂತರವೇ ಹೆಸರು ಘೋಷಣೆಯಾಗಲಿದೆ.
ವರಿಷ್ಠರ ತೀರ್ಮಾನದಂತೆ ಯಾರನ್ನೂ ಆಯ್ಕೆ ಮಾಡುತ್ತಾರೋ ಅದಕ್ಕೆ ಎಲ್ಲರೂ ಒಪ್ಪಿಕೊಂಡರೆ ಗುರುವಾರ ಇಲ್ಲವೇ ಶುಕ್ರವಾರವೇ ಹೊಸ ಸಾರಥಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.