ಬೆಂಗಳೂರು: ಬೆಂಗಳೂರಿನಲ್ಲಿ ಬಾಂಗ್ಲಾದೇಶದ ಯುವತಿ ಮೇಲೆ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣದ ತನಿಖೆಯಲ್ಲಿ ಪೋಲೀಸರಿಗೆ ಇವರು ಇತರ ದೆಶಗಳಿಗೆ ಮಹಿಳೆಯರ ಸಾಗಾಟ ಮಾಡುತ್ತಿರುವ ಮಾಹಿತಿ ತಿಳಿದು ಬಂದಿದೆ.
ಬಾಂಗ್ಲಾದೇಶ ದಿಂದ ಸಮುದ್ರದ ಮೂಲಕ ಚೆನ್ನೈ ತಲುಪಿಸಿ, ಅಲ್ಲಿಂದ ಕರ್ನಾಟಕ, ಕೇರಳ, ತಮಿಳು, ಗೋವಾ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಕ್ರಮ ಚಟುವಟಿಕೆಗಳಿಗೆ ಇಲ್ಲಿನ ಯುವಕ – ಯುವತಿಯನ್ನು ಬಳಸಿಕೊಳ್ಳುವುದು ಒಂದು ಕಡೆಯಾದ್ರೆ, ಮತ್ತೊಂದು ಕಡೆ ಇದೇ ಯುವತಿಯನ್ನು ಕೆಲ ಕಿಂಗ್ ಪಿನ್ ಗಳ ಸೂಚನೆಯಂತೆ ದೂರದ ಕೆನಡಾ ದೇಶಕ್ಕೆ ಮಾನವ ಕಳ್ಳ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಎನ್‍ಐಎ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿದೆ.
ಬಾಂಗ್ಲಾದಿಂದ ಚೆನ್ನೈಗೆ ಯುವತಿಯನ್ನು ಕರೆತಂದು, ಅಲ್ಲಿಂದ ಯಾರ್ಯಾರು ಎಲ್ಲೆಲ್ಲಿಗೆ ಅಂತಾ ಡಿವೈಡ್ ಮಾಡಲಾಗುತ್ತದೆ. ನಂತರ ಕೆನಡಾ ದೇಶಕ್ಕೆ ಯಾರು ಅಂತಾ ಗುರುತಿಸಿ ಅಲ್ಲಿಂದ ಕರ್ನಾಟಕದ ಮೂಲಕ ಮಂಗಳೂರು ಪೋರ್ಟಿ ಗೆ ತಲುಪಿಸಿ ಕೆನಡಾ ಸೇರಿದಂತೆ ವಿವಿಧ ದೇಶಗಳಿಗೆ ಯುವತಿಯರನ್ನು ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ತನಿಖೆಯಲ್ಲಿ ಗೊತ್ತಾಗಿದೆ.
ಕೇವಲ ಬಾಂಗ್ಲಾದೇಶ ದೇಶದ ಯುವತಿಯರು ಮಾತ್ರವಲ್ಲದೇ ನಮ್ಮ ದೇಶದ ಬಡ ಯುವತಿಯರನ್ನು ಕೂಡ ಕೆಲಸ ಕೊಡಿಸುವ ಆಸೆ ತೋರಿಸಿ, ಬೇರೆ ಬೇರೆ ದೇಶಗಳಿಗೆ ಅಕ್ರಮವಾಗಿ ಸಾಗಾಣಿಕೆ ಮಾಡ್ತಿರೋದು ತನಿಖೆಯಲ್ಲಿ ಬಹಿರಂಗವಾಗಿದೆ.ಸದ್ಯ ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬಾಂಗ್ಲಾದೇಶ ದೇಶದ ಯುವತಿಯ ಗ್ಯಾಂಗ್ ರೇಪ್ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಎನ್‍ಐಎ ಪೊಲೀಸರು, ಮಾನವ ಕಳ್ಳಸಾಗಣೆ ಮಾಡುತ್ತಿದ್ದ ಕೆಲ ಮಧ್ಯವರ್ತಿಗಳನ್ನು ಬಂಧಿಸಿದ್ದು, ಕಿಂಗ್ ಪಿನ್ ಗಳಿಗಳಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.