Breaking News

ತಂದೆಯ ಪಾರ್ಥಿವ ಶರೀರವನ್ನು ಯೊಧನ ಮಗ ಸೇನೆಯ ಸಮವಸ್ತ್ರ ಧರಿಸಿ ಸ್ವಾಗತಿಸಿದ್ದಾನೆ.

Spread the love

ಬೆಳಗಾವಿ: ನಾಗಾಲ್ಯಾಂಡ್​ನಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಅಪಘಾತವಾಗಿ ಮೃತಪಟ್ಟಿದ್ದ ಯೋಧನ ಪಾರ್ಥಿವ ಶರೀರ ಇಂದು (ಜುಲೈ 13) ಸ್ವಗ್ರಾಮಕ್ಕೆ ಆಗಮಿಸಿದೆ. ತಂದೆಯ ಪಾರ್ಥಿವ ಶರೀರವನ್ನು ಯೊಧನ ಮಗ ಸೇನೆಯ ಸಮವಸ್ತ್ರ ಧರಿಸಿ ಸ್ವಾಗತಿಸಿದ್ದಾನೆ. ಜಿಲ್ಲೆಯ ಗೋಕಾಕ್ ತಾಲೂಕಿನ ಶಿವಾಪುರ ಗ್ರಾಮದ ಮಂಜುನಾಥ ಗೌಡನ್ನವರ ಮೃತ ಯೋಧ. ಗ್ರಾಮಕ್ಕೆ ಪಾರ್ಥಿವ ಶರೀರ ಬರುತ್ತಿದ್ದಂತೆ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದ್ದು, ಪಾರ್ಥಿವ ಶರೀರ ಬರುವ ದಾರಿಯಲ್ಲಿ ಹೂವನ್ನು ಹಾಕಿ, ಕೈಯಲ್ಲಿ ದೇಶದ ಭಾವುಟ ಹಿಡಿದು ಊರಿನ ಜನ ಸ್ವಾಗತಿಸಿದರು.

ಅಪ್ಪನ ರೀತಿ 5 ವರ್ಷದ ಮಗ ಸ್ವರೂಪ್ ಸೇನೆಯ ಸಮವಸ್ತ್ರ ಧರಿಸಿ ಅಪ್ಪನ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದ್ದಾನೆ. ಮಗನನ್ನು ನೋಡಿ ಶಿವಾಪುರ ಗ್ರಾಮದ ಜನ ಮಮ್ಮಲ ಮರುಗಿದ್ದಾರೆ. ಇಂದು ಸ್ವಗ್ರಾಮ ಶಿವಾಪುರದಲ್ಲಿ ಯೋಧ ಮಂಜುನಾಥನ ಅಂತ್ಯಕ್ರಿಯೆ ನಡೆಯಲಿದೆ.

ಸುಮಾರು 18 ವರ್ಷದಿಂದ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಮಂಜುನಾಥ, ಕರ್ತವ್ಯದಲ್ಲಿದ್ದ ವೇಳೆ ಗಸ್ತು ತಿರುಗುತ್ತಿದ್ದಾಗ ವಾಹನ ಅಪಘಾತ ಸಂಭವಿಸಿದೆ. ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್​ನಲ್ಲಿ ಯೋಧನಾಗಿ ನೇಮಕಗೊಂಡಿದ್ದ ಇವರು ನಾಗಾಲ್ಯಾಂಡ್ ಗಡಿಯಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗಸ್ತು ತಿರುಗುತ್ತಿದ್ದಾಗ ಅರಣ್ಯ ಪ್ರದೇಶದ ರಸ್ತೆಯಲ್ಲಿ ಅಪಘಾತ ಸಂಭವಿಸಿ ಕೊನೆಯುಸಿರೆಳೆದಿದ್ದಾರೆ.


Spread the love

About Laxminews 24x7

Check Also

ಕಬ್ಬಿನ ಬಿಲ್ ಬಾಕಿಗಾಗಿ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಎದುರು ರೈತ ಪ್ರತಿಭಟನೆ

Spread the loveಬೆಳಗಾವಿ: ಪ್ರಸಕ್ತ ಸಾಲಿನ ಕಬ್ಬಿನ ಬಿಲ್ ಬಾಕಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಶುಕ್ರವಾರ ಮಹಾನಗರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ