Breaking News

ಮಹಾನಗರ ಪಾಲಿಕೆ ಮುಂದೆ ಇರುವ ಕನ್ನಡ ಬಾವುಟವನ್ನು ಬದಲಾಯಿಸುವಂತೆ ಒತ್ತಾಯಿಸಿ ಕರ್ನಾಟಕ ನವನಿರ್ಮಾಣ ಸೇನೆ :ಜಿಲ್ಲಾಧಿಕಾರಿಗೆ ಮನವಿ

Spread the love

ಬೆಳಗಾವಿ – ಮಹಾನಗರ ಪಾಲಿಕೆ ಮುಂದೆ ಇರುವ ಕನ್ನಡ ಬಾವುಟವನ್ನು ಬದಲಾಯಿಸುವಂತೆ ಕರ್ನಾಟಕ ನವನಿರ್ಮಾಣ ಸೇನೆಯ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿಗಳು ಹಾಗೂ ಬೆಳಗಾವಿ ನಗರ ಪೋಲಿಸ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಿದರು.ಮಹಾನಗರ ಪಾಲಿಕೆ ಮುಂದೆ ಇರುವ ಕನ್ನಡ ಬಾವುಟವು ಮಳೆ, ಗಾಳಿಗೆ ನಾಶಗೊಳುತ್ತಿದೆ. ಈ ಕಾರಣದಿಂದ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಕೂಡಲೇ ಎಚ್ಚೆತುಕೊಂಡು ಬಾವುಟ ಬದಲಾವಣೆ‌ ಮಾಡಬೇಕು. ಬಾವುಟ ನಾಶಗೊಳ್ಳುತ್ತಿರುವುದರಿಂದ ಬೆಳಗಾವಿ ಸಮಸ್ತ ಕನ್ನಡಿಗರ ಭಾವನೆಗೆ ದಕ್ಕೆ ಉಂಟಾಗುತ್ತಿದೆ. ಮುಂದಿನ ಎರಡು ದಿನಗಳಲ್ಲಿ ಬಾವುಟ ಬದಲಾವಣೆ ಮಾಡದಿದ್ದರೆ ಕರ್ನಾಟಕ ನವನಿರ್ಮಾಣ ಸೇನೆಯು ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರದ ವಿರುದ್ದ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಇಂತಹ ಘಟನೆಗಳಿಗೆ ಅವಕಾಶ ನೀಡದೇ ಕನ್ನಡ ಬಾವುಟ ಬದಲಾವಣೆ ಮಾಡಬೇಕೆಂದು ಸಂಘಟನೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಹಾಗೂ ಬೆಳಗಾವಿ ನಗರ ಪೋಲಿಸ ಆಯುಕ್ತರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ನವನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ಬಾಬು ಸಂಗೋಡಿ, ಬಸವರಾಜ ದೊಡಮನಿ, ಮಂಜುನಾಥ ಹಡಪದ, ಶ್ರೀಕಾಂತ ಹಂಪನವರ, ಸಾ


Spread the love

About Laxminews 24x7

Check Also

ಇಸ್ರೋ ಅಧ್ಯಕ್ಷ ಡಾ.ವಿ. ನಾರಾಯಣ, ಏಟ್ರಿಯಾ ವಿಶ್ವವಿದ್ಯಾಲಯ ಕುಲಾಧಿಪತಿ ಸಿ.ಎಸ್. ಸುಂದರರಾಜು, ಪದ್ಮಶ್ರೀ ಪುರಸ್ಕೃತ ಪ್ರಶಾಂತ ಪ್ರಕಾಶ

Spread the loveಬೆಳಗಾವಿ: “ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 25ನೇ ಘಟಿಕೋತ್ಸವದ ಭಾಗ-1 ಜುಲೈ 4ರಂದು ನಡೆಯಲಿದೆ. ಈ ವೇಳೆ ವಿಜ್ಞಾನ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ