Breaking News

ಪ್ರಿಯಕರನ ಮನೆಯಲ್ಲೇ ವಿವಾಹಿತ ಯುವತಿ ಸಾವು : ಯುವತಿ ಪೋಷಕರಿಂದ ಪ್ರಿಯಕರನ ಮನೆಗೆ ಬೆಂಕಿ

Spread the love

ಬಾಗಲಕೋಟೆ: ವಿವಾಹಿತ ಯುವತಿಯ ಸಾವಿಗೆ ಆಕೆಯ ಪ್ರಿಯಕರನೇ ಕಾರಣ ಎಂದು ಆರೋಪಿಸಿದ ಯುವತಿಯ ಪೋಷಕರು ಪ್ರಿಯಕರನ ಮನೆಗೆ ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ಇಳಕಲ್ ತಾಲೂಕಿನ ಕೆಲೂರ ಗ್ರಾಮದಲ್ಲಿ ನಡೆದಿದೆ.

ಕೆಲೂರ ಗ್ರಾಮದ ವಿವಾಹಿತ ಯುವತಿ ಬಸಮ್ಮ ಪ್ರಿಯಕರನ ಮನೆಯಲ್ಲಿಯೇ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ಇದನ್ನು ಕಂಡು ಆಕ್ರೋಷಗೊಂಡ ಯುವತಿಯ ಪೋಷಕರು ಯುವತಿಯ ಸಾವಿಗೆ ಪ್ರೀಯಕರ ರಂಜೀತ್ ಕಾರಣ ಎಂದು ಪ್ರಿಯಕರನ ಮನೆಗೆ ಬೆಂಕಿಹಚ್ಚಿ ಆಕ್ರೋಷ ವ್ಯಕ್ತಪಡಿಸಿದ್ದಾರೆ.

ರಂಜೀತ್ ಹಾಗೂ ಬಸಮ್ಮ ಬೇರೆ ಜಾತಿಯವರಾಗಿದ್ದು ಪರಸ್ಪರ ಪ್ರೀತಿಸುತ್ತಿದ್ದರು ಈ ವಿಷಯ ತಿಳಿದ ಕುಟುಂಬಸ್ಥರು ಬಸಮ್ಮಳಿಗೆ ಗದಗ ಮೂಲದ ಯುವಕನೊಂದಿಗೆ ವಿವಾಹ ಮಾಡಲಾಗಿತ್ತು ಆದರೆ ಯುವತಿ ಗಂಡನನ್ನು ತೊರೆದು ಪ್ರೀಯಕರ ರಂಜಿತ್ ಜೊತಗೆ ವಾಸಿಸುತ್ತಿದ್ದಳು.

ಆದರೆ ಇದೀಗ ಪ್ರಿಯಕ್ ರಂಜಿತ ಮನೆಯಲ್ಲಿಯೇ ಯುವತಿ ಬಸಮ್ಮಳ ಶವ ನೇಣುಬಿಗದ ಸ್ಥಿತಿಯಲ್ಲಿ ಪತ್ತೆಯಾಗಿದ್ದು,ಬಸಮ್ಮಳ ಕುಟುಂಬಸ್ಥರು ಕೊಲೆ ಎಂದು ಆರೋಪಿಸಿದ್ದಾರೆ.ವಿವಾಹಿತ ಯುವತಿ ಶವವಾಗಿ ಪತ್ತೆಯಾದ ಬೆನ್ನೆಲೆ ಪ್ರಿಯಕರ ರಂಜಿತ್ ಕುಟುಂಬಸ್ಥರು ನಾಪತ್ತೆಯಾಗಿದ್ದು ಆಕ್ರೋಶಗೊಂಡ ಬಸಮ್ಮನ ಕುಟುಂಬಸ್ಥರು ರಂಜಿತ್ ಮನೆಗೆ ಬೆಂಕಿ ಹಚ್ಚಿದ್ದಾರೆ ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಬೇಟಿ ನೀಡಿ ಬೆಂಕಿ ನಂದಿಸಿದರು.ಅಮೀನಗಡ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


Spread the love

About Laxminews 24x7

Check Also

ಕಳ್ಳರನ್ನು ಓಡಿಸಲು ದಿಟ್ಟತನ ಮೆರೆದ ಮಹಿಳೆ ಪೃಥ್ವಿ ಸಮಯ ಪ್ರಜ್ಞೆಯಿಂದ ಜಿರಲೆ ಸ್ಪ್ರೇ ಸಿಂಪಡಿಸಿ ಕಳ್ಳರನ್ನು ಓಡಿಸಿದ ಮಹಿಳೆ…!!!

Spread the love ಕಳ್ಳರನ್ನು ಓಡಿಸಲು ದಿಟ್ಟತನ ಮೆರೆದ ಮಹಿಳೆ ಪೃಥ್ವಿ ಸಮಯ ಪ್ರಜ್ಞೆಯಿಂದ ಜಿರಲೆ ಸ್ಪ್ರೇ ಸಿಂಪಡಿಸಿ ಕಳ್ಳರನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ