ಭೋಪಾಲ್: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವವರೆಗೂ ಆಹಾರ ಸೇವಿಸುವುದಿಲ್ಲ ಎಂದು ದೀಕ್ಷೆ ಸ್ವೀಕಾರ ಮಾಡಿ, ಕಳೆದ 28 ವರ್ಷಗಳಿಂದ ಮಧ್ಯ ಪ್ರದೇಶದ ಜಬಲ್‍ಪುರಕ್ಕೆ ನಿವಾಸಿ ಊರ್ಮಿಳಾ ಚರ್ತುವೇದಿ (82) ಉಪವಾಸ ಮಾಡುತ್ತಿದ್ದಾರೆ.1992ರ ಡಿ.6 ರಂದು ವಿವಾದತ್ಮಾಕ ಕಟ್ಟದ ನೆಲಸಮ ಮಾಡಿದ ಸಮಯದಿಂದ ಊರ್ಮಿಳಾ ಅವರು ಉಪವಾಸ ಮಾಡುತ್ತಿದ್ದಾರೆ. ರಾಮನಿಗೆ ಮತ್ತೆ ಮಂದಿರ ನಿರ್ಮಾಣ ಮಾಡುವವರೆಗೂ ಆಹಾರ ಸೇವಿಸುವುದಿಲ್ಲ ಎಂದು ನಿರ್ಧಾರ ಮಾಡಿದ್ದರು. ಕಳೆದ ವರ್ಷ ರಾಮಮಂದಿರ ನಿರ್ಮಾಣಕ್ಕೆ ನ್ಯಾಯಾಲಯ ಅನುಮತಿ ನೀಡಿದ ಸಂದರ್ಭದಲ್ಲಿ ಊರ್ಮಿಳಾ ಅವರು ಸಂತೋಷ ವ್ಯಕ್ತಪಡಿಸಿದ್ದರು. ಊರ್ಮಿಳಾ ಅವರು ಕಳೆದ 28 ವರ್ಷಗಳಿಂದ ಧಾನ್ಯಗಳನ್ನು ಬಳಕೆ ಮಾಡದೆ ತಯಾರಿಸಿದ ರಾಮಮಂದಿರದ ಪ್ರಸಾದ, ಹಾಲು, ಮೋಸರು ಮತ್ತು ಹಣ್ಣುಗಳನ್ನು ಮಾತ್ರ ಸೇವಿಸುತ್ತಿದ್ದರು.
ರಾಮಮಂದಿರ ಶಿಲಾನ್ಯಾಸ ನಡೆದ ಬಳಿಕ ಅಯೋಧ್ಯೆಗೆ ಭೇಟಿ ನೀಡುವ ಚಿಂತನೆ ನಡೆಸಿರುವ ಊರ್ಮಿಳಾ ಅವರು ಪವಿತ್ರ ನದಿಯಲ್ಲಿ ಶುದ್ಧಿಯಾಗಿ ದೀಕ್ಷೆಯಿಂದ ವಿರಮಿಸುವುದಾಗಿ ತಿಳಿಸಿದ್ದಾರೆ. ಈ ಕುರಿತು ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮಾಡಿದ್ದು, ‘ಶ್ರೀರಾಮ ತನ್ನ ಭಕ್ತರಿಗೆ ಎಂದು ನಿರಾಸೆ ಮಾಡುವುದಿಲ್ಲ. ತ್ರೇತಾಯುಗದ ಶಬರಿ ತಾಯಿಯಾಗಲಿ ಅಥವಾ ಈ ಯುಗದ ಊಮಿರ್ಳಾ ತಾಯಿಯಾಗಲಿ.. ಅಮ್ಮ, ನಿಮ್ಮ ಭಕ್ತಿಗೆ ಧನ್ಯವಾದ. ಇಡೀ ದೇಶವೇ ನಿಮ್ಮ ಭಕ್ತಗೆ ವಂದನೆಗಳನ್ನು ಹೇಳುತ್ತಿದೆ. ಜೈ ಶ್ರೀರಾಮ್’ ಎಂದು ಬರೆದುಕೊಂಡಿದ್ದಾರೆ.