ಬೆಂಗಳೂರು : ನಗರದ ಛಲವಾದಿ ಪಾಳ್ಯದ ಬಿಜೆಪಿಯ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹಂತಕರನ್ನು ಬಂದಿಸುವಲ್ಲಿ ಪೊಲೀಸರು ಯಶ ಕಂಡಿದ್ದಾರೆ. ಪೀಟರ್ ಮತ್ತು ಸೂರ್ಯ ಎಂಬ ಪ್ರಮುಖ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಪೊಲೀಸರು ಮುಂದಾದ ವೇಳೆ ಸೂರ್ಯ ಮತ್ತು ಪೀಟರ್ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.
ಈ ವೇಳೆ ಪೊಲೀಸರು ಫೈರಿಂಗ್ ಮಾಡಿ ಆರೋಪಿಗಳನ್ನು ಸುಮನಹಳ್ಳಿ ಶನಿವಮಹಾತ್ಮ ದೇವಾಸ್ಥಾನದ ಬಳಿ ಬಂಧಿಸಿದ್ದಾರೆ. ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
Laxmi News 24×7