ಬೆಂಗಳೂರು: ಕರ್ನಾಟಕದಲ್ಲಿ ಖೋಟಾ ನೋಟು ಚಲಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಶರೀಫುಲ್ಲಾ ಇಸ್ಲಾಂ ಎಂಬಾತನನ್ನ ಎನ್‌ಐಎ ಬಂಧಿಸಿದೆ. ಈತನನ್ನ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಬಾಬಾಪುರದಲ್ಲಿ ಬಂಧಿಸಲಾಗಿದೆ..
ಬಾಂಗ್ಲಾ ಮೂಲದ ವ್ಯಕ್ತಿಗಳಿಂದ ಈತ ನಕಲಿ ಭಾರತೀಯ ನೋಟು ಪಡೆಯುತ್ತಿದ್ದ ಹಾಗೂ ಕರ್ನಾಟಕದಲ್ಲಿ ಆ ಖೋಟಾನೋಟುಗಳನ್ನ ಚಲಾವಣೆ ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದ ಎನ್ನಲಾಗಿದೆ.
ಏನಿದು ಪ್ರಕರಣ..?
2018 ರ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಖೋಟಾನೋಟು ಚಲಾವಣೆ ಪ್ರಕರಣ ದಾಖಲಾಗಿತ್ತು. ಆಗ ಇಬ್ಬರು ಆರೋಪಿಗಳನ್ನ ಚಿಕ್ಕೋಡಿ ಪೊಲೀಸರು ಬಂಧಿಸಿದ್ದರು. ಈ ವೇಳೆ 82 ಸಾವಿರ ಖೋಟಾ ನೋಟುಗಳನ್ನ ಜಪ್ತಿ ಮಾಡಲಾಗಿತ್ತು. ಬಳಿಕ ಪ್ರಕರಣ ದಾಖಲಿಸಿಕೊಂಡು ಎನ್‌ಐಎ ತನಿಖೆ ಆರಂಭಿಸಿತ್ತು. ಪ್ರಕರಣದ ಐವರು ಆರೋಪಿಗಳಿಗೆ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯ 6 ವರ್ಷ ಸಜೆ ವಿಧಿಸಿತ್ತು. ಸದ್ಯ ಪ್ರಮುಖ ಆರೋಪಿ ಶರೀಫುಲ್ಲಾ ಇಸ್ಲಾಂ ಬಂಧನವಾಗಿದ್ದು.. ಬಾಂಗ್ಲಾ ಮೂಲದ ಆರೋಪಿಗಳಿಗಾಗಿ ಶೋಧ ಮುಂದುವರೆದಿದೆ.
Laxmi News 24×7