ತರಕಾರಿ, ಸೊಪ್ಪನ್ನು ಕಾಲಿನಿಂದ ಒದ್ದು ದರ್ಪ ತೋರಿಸಿದ್ದ ರಾಯಚೂರು ಸದರ ಬಜಾರ್ ಠಾಣೆ ಪಿಎಸ್‌ಐ ಆಜಂ ಖಾನ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ರಾಯಚೂರು ಎಸ್.ಪಿ. ಪ್ರಕಾಶ್ ನಿಕ್ಕಂ ಅವರು ಪಿಎಸ್‌ಐ ಅಜಂ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ರಾಯಚೂರಿನ ಚಂದ್ರಮೌಳೇಶ್ವರ ವೃತ್ತದಲ್ಲಿ ತರಕಾರಿ, ಸೊಪ್ಪನ್ನು ಮಾರಾಟ ಮಾಡುತ್ತಿದ್ದು, ಅಲ್ಲಿಗೆ ಬಂದ ಅಜಂ ಕಾಲಿನಿಂದ ತರಕಾರಿ, ಸೊಪ್ಪು ಒದ್ದು ಚೆಲ್ಲಾಪಿಲ್ಲಿ ಮಾಡಿದ್ದರು.
ರಾಯಚೂರಿನ ಚಂದ್ರಮೌಳೇಶ್ವರ ವೃತ್ತದ ಬಳಿ ಏಕಾಏಕಿ ಬಂದು ತರಕಾರಿ, ಸೊಪ್ಪು ಕಾಲಿನಿಂದ ಒದ್ದು ಜನರನ್ನು ಓಡಿಸಲಾಗಿತ್ತು. ಈ ದೃಶ್ಯದ ವಿಡಿಯೋ ವೈರಲ್ ಆಗಿದ್ದು, ದರ್ಪ ತೋರಿದ ಪಿಎಸ್‌ಐ ಅಜಂ ಅಮಾನತುಗೊಂಡಿದ್ದಾರೆ.
Laxmi News 24×7