ಬೆಂಗಳೂರು: ದುಷ್ಟ ಶಕ್ತಿಯನ್ನು ಪಡೆಯಲು ಬಾಲಕಿಯನ್ನು ಬಳಸಿಕೊಂಡು ವಾಮಾಚಾರ ಮಾಡಿರುವ ಘಟನೆ, ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಒಂದು ಪುಟ್ಟ ಹಳ್ಳಿಯಲ್ಲಿ ನಡೆದಿದೆ.
ಅದೃಷ್ಟವಶಾತ್ ಸ್ಥಳೀಯರ ಸಮಯ ಪ್ರಜ್ಞೆಯಿಂದ ಬಾಲಕಿಯ ರಕ್ಷಣೆ ಮಾಡಲಾಗಿದೆ. ಕೊರೊನಾ ಲಾಕ್‍ಡೌನ್ ನಡುವೆ ಮಂತ್ರವಾದಿಗಳ ಕುತಂತ್ರ ಬೆಳಕಿಗೆ ಬಂದಿದೆ. ಕೆಲವು ಸ್ಥಳೀಯರು ಸೇರಿದಂತೆ ಮಾಂತ್ರಿಕನ ನೆರವಿನಿಂದ ದುಷ್ಟ ಶಕ್ತಿಯನ್ನು ಪಡೆಯಲು ಬಾಲಕಿಗೆ ವಿಚಿತ್ರವಾದ ಪೂಜೆ ಮಾಡಿ ವಾಮಾಚಾರ ಮಾಡಿ ನರಬಲಿ ಮಾಡಲು ಸಿದ್ಧತೆ ಮಾಡುತ್ತಿದ್ದ ವೇಳೆ ದಾಳಿ ಮಾಡಿದ ಸ್ಥಳೀಯರು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಮಂತ್ರವಾದಿ ಸ್ಥಳದಿಂದ ಪರಾರಿಯಾಗಿದ್ದಾನೆ.