ಬೆಂಗಳೂರು: ಬ್ರಾಹ್ಮಣರ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ತಮ್ಮ ವಿರುದ್ಧ ಕೇಸ್ ದಾಖಲಾಗಿರೋ ಹಿನ್ನೆಲೆ, ಇಂದು ನಟ ಚೇತನ್ ವಿಚಾರಣೆಗೆ ಹಾಜರಾಗಿದ್ದಾರೆ.
ಪ್ರಕರಣ ಸಂಬಂಧ ಬಸವನಗುಡಿ ಪೊಲೀಸ್ರು ಚೇತನ್ಗೆ ನೋಟೀಸ್ ನೀಡಿದ್ದರು. ಹೀಗಾಗಿ ತಮ್ಮ ಸ್ನೇಹಿತರು ಹಾಗೂ ವಕೀಲರ ಜೊತೆ ಚೇತನ್ ಇಂದು ಬಸವನಗುಡಿ ಇನ್ಸ್ಪೆಕ್ಟರ್ ಆರ್. ರಮೇಶ್ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.
ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ವಿಪ್ರ ಯುವ ವೇದಿಕೆಯ ಪವನ್ ಕುಮಾರ್ ಶರ್ಮಾ ಚೇತನ್ ವಿರುದ್ಧ ದೂರು ನೀಡಿದ್ದರು. ಇದರ ಅನ್ವಯ ಬಸವನಗುಡಿ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಚೇತನ್ಗೆ ಸೂಚಿಸಿದ್ದರು.
ಕಳೆದ ಒಂದುವರೆ ಗಂಟೆಯಿಂದಲೂ ಚೇತನ್ರ ವಿಚಾರಣೆ ನಡೆಸುತ್ತಿರುವ ಪೊಲೀಸರು, ಫೇಸ್ ಬುಕ್ನಲ್ಲಿ ಹಾಕಿರೋ ಪೋಸ್ಟ್ಗಳ ಬಗ್ಗೆ ಮಾಹಿತಿ ಕಲೆ ಹಾಕ್ತಿದ್ದಾರೆ.
Laxmi News 24×7