Breaking News

ಕಂಡೋರ ಸೈಟಿಗೆ ರಾಕ್​ಲೈನ್​ ವೆಂಕಟೇಶ್​ ಬೇಲಿ: ಕೋರ್ಟ್​ ತಪರಾಕಿ

Spread the love

ಬೆಂಗಳೂರು: ಸ್ಯಾಂಡಲ್​ವುಡ್​ ನಿರ್ಮಾಪಕ ರಾಕ್​​ಲೈನ್ ವೆಂಕಟೇಶ್ ವಿರುದ್ಧ ಅಕ್ರಮವಾಗಿ ಬೇರೊಬ್ಬರ ಸೈಟ್​ ಒತ್ತುವರಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ನಾಗರಬಾವಿಯಲ್ಲಿ ಸ್ನೇಹಶೀಲ ಎಂಬರವರಿಗೆ ಮಂಜೂರಾಗಿದ್ದ ನಿವೇಶನವನ್ನು ಅವರು ತನ್ನ ಸಹೋದರಿ ಪುಷ್ಪಲತಾರಿಗೆ ಗಿಫ್ಟ್ ಮಾಡಿದ್ದರು. ಈ ನಿವೇಶನವನ್ನು ರಾಕ್​​ಲೈನ್ ವೆಂಕಟೇಶ್ ಅಕ್ರಮವಾಗಿ ಒತ್ತುವಾರಿ ಮಾಡಿದ್ದಾರೆ ಎಂದು ಪುಪ್ಪಲತಾ ಕೋರ್ಟ್​ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಸಿಟಿ ಸಿವಿಲ್​ ಕೋರ್ಟ್​ ರಾಕ್​​ಲೈನ್ ಮತ್ತು ಅವರ ಸಹಚರರಿಗೆ ಪುಪ್ಪಲತಾ ಅವರ ಜಾಗದಲ್ಲಿ ಅಕ್ರಮ ಪ್ರವೇಶಕ್ಕೆ ತಡೆ ನೀಡಿ ಆದೇಶ ಹೊರಡಿಸಿತ್ತು.

ಹೀಗಾಗಿ ಪುಪ್ಪಲತಾ ಅವರ ಸಹೋದರರು ಇಂದು ಅಕ್ರಮ ಒತ್ತುವರಿ ತೆರವಿಗೆ ಮುಂದಾಗಿದ್ದು, ಈ ವೇಳೆ ರಾಕ್​ಲೈನ್ ವೆಂಕಟೇಶ್​ ಪುತ್ರ ಅಭಿಲಾಷ್ ತಮ್ಮ ಸಹಚರರೊಂದಿಗೆ ಆಗಮಿಸಿ ತೆರವಿಗೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಈ ಬಗ್ಗೆ ಸ್ಪಷ್ಟನೆ ‌ನೀಡಲು ನಿರಾಕರಿಸಿದ್ದಾರೆ.


Spread the love

About Laxminews 24x7

Check Also

ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ

Spread the loveಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುವುದು, AAI ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಭಿಪ್ರಾಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ