Breaking News

ಸಾವಿನಲ್ಲೂ ಸಾರ್ಥಕತೆ ಮೆರೆದ ನಟ ಸಂಚಾರಿ ವಿಜಯ್​ ಅಂಗಾಂಗಗಳು ಯಾರಿಗೆಲ್ಲ ಜೀವ ತುಂಬಿದೆ ಗೊತ್ತಾ?

Spread the love

ಬೆಂಗಳೂರು: ನಡುರಾತ್ರಿ ನಡೆದಿದ್ದ ಆಕಸ್ಮಿಕ ಅಪಘಾತದಲ್ಲಿ ಅಕಾಲಿಕವಾಗಿ ಪ್ರಾಣತೆತ್ತ ಯುವ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅವರ ಕುಟುಂಬದವರು ಸಂಚಾರಿ ವಿಜಯ್ ಅವರ ಅಂಗಾಂಗಳನ್ನ ದಾನ ಮಾಡಲು ಒಪ್ಪಿಗೆ ಸೂಚಿಸಿದ್ದರು. ಹಾಗಾಗಿ, ಸಂಚಾರಿ ವಿಜಯ್​ ಅವರ ಅಂಗಾಂಗ ಟ್ರಾನ್ಸ್​ಪ್ಲಾಂಟೇಷನ್ ಯಶಸ್ವಿಯಾಗಿ ನಡೆದಿದೆ.

ಸಂಚಾರಿ ವಿಜಯ್​ ಅವರ ಕಿಡ್ನಿ ಟ್ರಾನ್ಸ್​ಪ್ಲಾಂಟೇಷನ್ ಯಶಸ್ವಿಯಾಗಿದ್ದು ಮಹಿಳೆಯೊಬ್ಬರಿಗೆ ಕಿಡ್ನಿ ಟ್ರಾನ್ಸ್​ಪ್ಲಾಂಟೇಷನ್ ಮಾಡಲಾಗಿದೆ. 34 ವರ್ಷದ ಮಹಿಳೆಗೆ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಕಿಡ್ನಿ ಟ್ರಾನ್ಸ್​ಪ್ಲಾಂಟೇಷನ್ ನಡೆದಿದೆ.

ಇನ್ನು ನಟ ಸಂಚಾರಿ ವಿಜಯ್ ಅವರ ಕಣ್ಣುಗಳು​ ಮಿಂಟೋ ಆಸ್ಪತ್ರೆಯಲ್ಲಿ ಇಬ್ಬರಿಗೆ ಜೋಡಣೆಯಾಗಿದೆ. ಒಬ್ಬರಿಗೆ ಕಣ್ಣು ಜೋಡಣೆ ಈಗಾಗಲೇ ಯಶಸ್ವಿಯಾಗಿದೆ. ಮತ್ತೊಬ್ಬರಿಗೆ ಕಣ್ಣು ಜೋಡಣೆ ಕಾರ್ಯ ನಡೆಯುತ್ತಾ ಇದೆ.

ಅಂಗಾಂಗ ದಾನದ ಗೌಪ್ಯತೆ/ ಜ್ಯೇಷ್ಠತೆ/ ಸಾರ್ಥಕತೆ ನಡೆಯುವುದು ಹೀಗೆ:
ಇನ್ನು ಅಂಗಾಂಗ ದಾನ ಎಂಬುದು ಮಾನವ ಶ್ರೇಷ್ಠ ಕೆಲಸವಾಗಿದೆ. ಆದರೆ ಹೀಗೆ ದಾನ ಮಾಡಿದ ಅಂಗಾಂಗಳು ಯಾರಿಗೆ ಜೋಡಣೆ ಮಾಡಲಾಗಿದೆ ಎಂಬುದು ವೈದ್ಯಲೋಕ ಯಾವುದೇ ಕಾರಣಕ್ಕೂ ಬಹಿರಂಗಪಡಿಸುವುದಿಲ್ಲ. ಎಷ್ಟರಮಟ್ಟಿಗೆ ಅಂದ್ರೆ ಮೃತಪಟ್ಟ ವ್ಯಕ್ತಿ ಅಂದರೆ ಯಾವ ವ್ಯಕ್ತಿಯ ಅಂಗಾಂಗಳನ್ನು ದಾನ ಮಾಡಲಾಗಿದೆಯೋ ಅವರ ಕುಟುಂಬದವರಿಗೂ ಸಹ ಹೇಳುವುದಿಲ್ಲ. ಅಷ್ಟರಮಟ್ಟಿಗೆ ಅದರ ಗೌಪ್ಯತೆ/ ಜ್ಯೇಷ್ಠತೆ/ ಸಾರ್ಥಕತೆ ಕಾಯ್ದುಕೊಳ್ಳಲಾಗುತ್ತದೆ.

ಸ್ನೇಹಿತ ರಘು ಅವರ ತೋಟದಲ್ಲಿ ವಿಜಯ್ ಅಂತ್ಯಕ್ರಿಯೆ:
ಇತ್ತ ಸಂಚಾರಿ ವಿಜಯ್​ ಅವರ ದೇಹದ ಅಂಗಾಂಗಳ ದಾನ / ಜೋಡಣೆ ಕಾರ್ಯ ಕ್ಷಿಪ್ರವಾಗಿ ನಡೆಯುತ್ತಿದ್ದರೆ ಅತ್ತ ಅವರ ಹುಟ್ಟೂರಾದ ಕಡೀರಿನ ಪಂಚನಹಳ್ಳಿಯಲ್ಲಿ ಸಂಚಾರಿ ವಿಜಯ್ ಅವರ ಅಂತ್ಯಕ್ರಿಯೆ ಸ್ನೇಹಿತ ರಘು ಅವರ ತೋಟದಲ್ಲಿ ನೆರವೇರಿದೆ. ಅಂತಿಮ ದರ್ಶನಕ್ಕೆ ಗ್ರಾಮಸ್ಥರು ಮತ್ತು ಸ್ನೇಹಿತರು ನೆರೆದಿದ್ದರು. ಕನ್ನಡದ ಹೆಮ್ಮೆಯ ನಟ, ಕಲಾವಿದ ಸಂಚಾರಿ ವಿಜಯ್ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಚಿಕ್ಕಮಗಳೂರು ಜಿಲ್ಲೆಯ ಕಡೂಡು ತಾಲೂಕಿನ ಪಂಚನಹಳ್ಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಶೈವ ಲಿಂಗಾಯತ ವಿಧಿವಿಧಾನಗಳೊಂದಿಗೆ ನೆರವೇರಿತು.


Spread the love

About Laxminews 24x7

Check Also

ಕ್ಷಮೆ ಕೇಳಲಿ, ಇಲ್ಲವೇ ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾದೀತು: ಸಚಿವೆ ಹೆಬ್ಬಾಳ್ಕರ್

Spread the loveಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಿಧಾನ ಪರಿಷತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ