ಬೆಳಗಾವಿ- ರಾಜ್ಯ ಸರ್ಕಾರ ಗಪ್ ಚುಪ್ ಕೆರೆಂಟ್ ಬಿಲ್ ಹೆಚ್ಚಿಸಿದೆ,ಬೇಕಾಬಿಟ್ಟಿಯಾಗಿ ಕರೆಂಟ್ ಬಿಲ್ ಬರುತ್ತಿದೆ.ಮನಸ್ಸಿಗೆ ಬಂತೆ ಕರೆಙಟ್ ಬಿಲ್ ಹರಿಯುತ್ತಿರುವದಕ್ಕೆ ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕ್ಷೇತ್ರದ ಬಡವನ ಮನೆಯಲ್ಲಿ,ಫ್ರಿಡ್ಜ್,ಇಲ್ಲ,ಫ್ಯಾನ ಇಲ್ಲ,ಗ್ರ್ಯಾಂಡರ್ ಇಲ್ಲ,ಆತನ ಮನೆಯಲ್ಲಿ ಉರಿಯೋದು ಮೂರು ಲೈಟ್ ಮಾತ್ರ,ಕರೆಂಟ್ ಬರೋದು ಎರಡು ತಾಸು,ಮೂರು ತಾಸು ಆದರೂ ಈ ಬಡವನಿಗೆ 1242 ರೂ ಕರೆಂಟ್ ಬಿಲ್ ಬಂದಿದೆ.ಇದೇ ರೀತಿ ಎಲ್ಲ ಲೈಟ್ ಬಿಲ್ ಗಳು ಅಳತೆಗೋಲ ತಪ್ಪಿವೆ ಕೂಡಲೇ ಅದನ್ನು ಸರಿಪಡಿಸಲು ಶಾಸಕಿ ಅಂಜಲಿ ನಿಂಬಾಳ್ಕರ್ ಒತ್ತಾಯಿಸಿದ್ದಾರೆ.
ಕಳೆದ ಒಂದುವರೆ ವರ್ಷದಿಂದ ಲಾಕ್ಡೌನ್ ಮೇಲೆ ಲಾಕ್ಡೌನ್ ,ಜನರಿಗೆ ಕೆಲಸವಿಲ್ಲ,ದುಡಿಮೆಯೂ ಇಲ್ಲ.ಇಂತಹ ಸಂಧರ್ಭದಲ್ಲಿ ವಿದ್ಯುತ್ ಬಿಲ್, ಮನ ಬಂದಂತೆ ಕೊಟ್ಟರೆ ಬಡವರು ಏನು ಮಾಡಬೇಕು,ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬಡವರ ಬಗ್ಗೆ ಕಳಕಳಿ ಇದೆ ಎನ್ನುವ ವಿಶ್ವಾಸ ನನಗಿದೆ.ಮುಖ್ಯಮಂತ್ರಿಗಳು ಕೂಡಲೇ ಬಡವರ ನೆರವಿಗೆ ಧಾವಿಸಿ, ಬಡವರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಶಾಸಕಿ,ಡಾ. ಅಂಜಲಿ ನಿಂಬಾಳ್ಕರ್ ಒತ್ತಾಯಿಸಿದ್ದಾರೆ.
Laxmi News 24×7