Breaking News

ವಧು- ವರರನ್ನು ಜೋಡಿಸುವ ಕೊಂಡಿಯಾಗಿರು ಮೆಟ್ರಿಮೊನಿಯಲ್ ಆನ್ ಲೈನ್ ವೆಬ್ ನಲ್ಲಿ ಫೇಕ್ ಅಕೌಂಟ್ ಮಾಡಿ ಹಣ ಸುಲಿಗೆ

Spread the love

ಮೆಟ್ರಿಮೊನಿಯಲ್ ವೆಬ್ ಸೈಟ್ ನಲ್ಲಿ ಅಕೌಂಟ್ ತೆರೆದು,ಅದೆಷ್ಟೋ ವಧು,ವರರು ದಾಂಪತ್ಯ ಜೀವನ ಆರಂಭಿಸಿದ್ದಾರೆ ಅದಕ್ಕೆ ಲೆಕ್ಕವೇ ಇಲ್ಲ ಆದ್ರೆ ಸೈಬರ್ ವಂಚಕರು ಇದನ್ನು ದುರುಪಯೋಗ ಪಡೆಸಿಕೊಂಡು,ಫೇಕ್ ಅಕೌಂಟ್ ತೆರೆದು,ವಿಡಿಯೋ ಕಾಲ್ ಮಾಡಿ ಹಣ ಸುಲಿಗೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ವಧು- ವರರನ್ನು ಜೋಡಿಸುವ ಕೊಂಡಿಯಾಗಿರು ಮೆಟ್ರಿಮೊನಿಯಲ್ ಆನ್ ಲೈನ್ ವೆಬ್ ನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ,ಐ ಲೈಕ್ ಯೂ ಅಂತಾ ಮೆಸ್ಸೇಜ್ ಮಾಡಿ,ನಂತರ ವಿಡಿಯೋ ಕಾಲ್ ಮಾಡಿ, ನಂಬಿಕೆ ಹುಟ್ಟಿಸಿ,ಹಣ ವರ್ಗಾಯಿಸಿಕೊಂಡು ಮಕ್ಮಲ್ ಟೋಪಿ ಹಾಕು ಸೈಬರ್ ಖದೀಮರ ಗ್ಯಾಂಗ್ ಕೆಲಸ ಮಾಡುತ್ತಿದ್ದು,ಸಾರ್ವಜನಿಕರು ಈ ಕುರಿತು ಜಾಗೃತಿ ವಹಿಸುವಂತೆ ಬೆಳಗಾವಿ ಪೋಲೀಸ್ ಪ್ರಕಟಣೆ ಹೊರಡಿಸಿದೆ.

ಮೆಟ್ರಿಮೊನಿಯಲ್ ಆನ್ ಲೈನ್ ವೆಬ್ ಜಾಲವನ್ನು ದುರುಪಯೋಗ ಪಡಿಸಿಕೊಂಡು ಸೈಬರ್ ಕ್ರಿಮಿಗಳು ಬೆಳಗಾವಿಯಲ್ಲೂ ವಂಚಿಸಿರುವ ಕುರಿತು ಬೆಳಗಾವಿಯ ಸೈಬರ್ ಕ್ರೈಂ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ಈ ರೀತಿಯ ವಂಚನೆ ಪ್ರಕರಣಗಳು ಬೆಳಗಾವಿಯಲ್ಲೂ ಬೆಳಕಿಗೆ ಬಂದಿದ್ದು,ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ಬೆಳಗಾವಿ ಡಿಸಿಪಿ ವಿಕ್ರಂ ಅಮಟೆ ಮನವಿ ಮಾಡಿಕೊಂಡಿದ್ದಾರೆ


Spread the love

About Laxminews 24x7

Check Also

ಘೋಡಗೇರಿ ಜಿ.ಪಂ ವ್ಯಾಪ್ತಿಯ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಪ್ರಚಾರ ಸಭೆ

Spread the loveಘೋಡಗೇರಿ ಜಿ.ಪಂ ವ್ಯಾಪ್ತಿಯ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಪ್ರಚಾರ ಸಭೆ ವಿರೋಧಿಗಳ ಸುಳ್ಳು ವದಂತಿಗಳಿಗೆ ಕಿವಿಗೋಡಬೇಡಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ