ಕೆಆರ್ ಪುರ, ಜೂ.14 : ಸ್ಟಾರ್ ಪೊಲೀಸರ ಚೇಸ್ಟೇ ಜಾಸ್ತಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪೊಲೀಸರ ವಿರುದ್ಧ ಹರಿಹಾಯ್ದರು. ರಾಮಮೂರ್ತಿನಗರ ವಾರ್ಡ್ ನ ಕಲ್ಕೆರೆಯಲ್ಲಿ ರೇಷನ್ ಕಿಟ್ ಗಳನ್ನು ವಿತರಸಿ ಅವರು ಮಾತನಾಡಿದರು. ಒಳ್ಳೆಯ ಪೊಲೀಸರು ಇದ್ದಾರೆ ಕಾನ್ಸ್ ಟೇಬಲ್ ಗಳು ಪಾಪ ಏನೂ ಮಾಡೋದಿಲ್ಲ ಆದರೆ ಸ್ಟಾರ್ ಗಳನ್ನು ಹಾಕಿಕೊಂಡವರು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿರುತ್ತಾರೆ ಎಂದು ಆರೋಪಿಸಿದರು.
ಜನರ ಕಷ್ಟಗಳಿಗೆ ಸ್ಪಂದನೆ ಮಾಡುವುದಕ್ಕಾಗಿಯೇ ಕಾಂಗ್ರೆಸ್ ಪಕ್ಷದ ವತಿಯಿಂದ ಮುಖಂಡರು ರೇಷನ್ ಕಿಟ್ ಗಳನ್ನು ವಿತರಿಸುತ್ತಿದ್ದಾರೆ. ಆದರೆ ಕೆಲ ಪೊಲೀಸರು ಕಾಂಗ್ರೆಸ್ ಪಕ್ಷದ ಕಾರ್ಯಗಳಿಗೆ ಅಡ್ಡಿಯುಂಟು ಮಾಡುತ್ತಿದ್ದಾರೆ ಎಂದರು.
ಕಾಲ ಯಾವಾಗಲೂ ಒಂದೇ ತರ ಇರೋದಿಲ್ಲ ಬದಲಾಗುತ್ತಿರುತ್ತೆ ಬಿಜೆಪಿಯ ದೌರ್ಜನ್ಯಗಳನ್ನು ಜನ ನೋಡುತ್ತಿದ್ದಾರೆ ಇವರಿಗೆಲ್ಲಾ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಪೆಟ್ರೋಲ್ ಲೀಟರ್ 100 ರ ಗಡಿ ದಾಟಿ ಮುನ್ನುಗ್ಗುತ್ತಿದೆ ಜನ ಸಾಮಾನ್ಯನ ಸಂಬಳ ಮಾತ್ರ ಅಲ್ಲಿಗೇ ನಿಂತಿದೆ ಇದಕ್ಕೆಲ್ಲಾ ಮುಂದಿನ ದಿನಗಳಲ್ಲಿ ಜನರಿಂದಲೇ ಉತ್ತರ ಸಿಗುತ್ತೆ ಎಂದರು.
Laxmi News 24×7