ಬೆಂಗಳೂರು: ಸಂಚಾರಿ ವಿಜಯ್ ಸತ್ತಿಲ್ಲ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಅಂತ ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾ.ಅರುಣ್ ನಾಯ್ಕ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇಂದು ಬೆಳಗ್ಗೆ ಸಂಚಾರಿ ವಿಜಯ್ ಸಹೋದರ) ಸಿದ್ದೇಶ್ವರ್ ಅವರು ನಮ್ಮ ಅಣ್ಣ (ಸಂಚಾರಿ ವಿಜಯ್) ಅವರನ್ನು ಜೀವಂತವಾಗಿ ಇಡುವ ನಿಟ್ಟಿನಲ್ಲಿ ಅವರ ಅಂಗಾಗಳ ದಾನಕ್ಕೆ ಮುಂದಾಗಿದ್ದೇವೆ, ಅವರು ನಮ್ಮೊಂದಿಗೆ ಇಲ್ಲ ಅಂತ ಹೇಳುವುದಕ್ಕೆ ಬೇಸರವಾಗುತ್ತಿದೆ ಅಂತ ಹೇಳಿದ್ದರು.

ಈ ನಡುವೆ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಆಪೋಲೋ ಆಸ್ಪತ್ರೆಯ ವೈದ್ಯ ಡಾ.ಅರುಣ್ ನಾಯ್ಕು ಅವರು ವಿಜಯ್ ಅವರ ಮೆದುಳು ಮಾತ್ರ ತನ್ನ ಕೆಲಸವನ್ನು ನಿಲ್ಲಿಸಿದೆ. ಆದರೆ ಅವರ ಹೃದಯ ಹಾಗೂ ಶ್ವಾಸಕೋಶ ಇನ್ನೂ ಕೆಲಸ ಮಾಡುತ್ತಿದೆ, ಮೆದುಳು ಕೆಲಸ ನಿಲ್ಲಿಸಿದ್ದ ವೇಳೆಯಲ್ಲಿ, ಉಳಿಯುವುದು ಅನುಮಾನ, ಹೀಗಾಗಿ ಅವರ ಹೃದಯ ಕೆಲಸ ನಿಲ್ಲಿಸಿದ ವೇಳೆಯಲ್ಲಿ ಸಾವನ್ನು ಘೋಷಣೆ ಮಾಡಲಾಗುವುದು. ಇದಲ್ಲದೇ ವಿಜಯ್ ಅಂಗಾಗ ದಾನದ ಬಗ್ಗೆ ಅವರ ಕುಟುಂಬದವರು ನಿರ್ಧಾರ ಮಾಡಲಿದ್ದಾರೆ, ಈ ಬಗ್ಗೆ ರಾಜ್ಯ ಸರ್ಕಾರದ ಕಾನೂನಿನ ಅನ್ವಯ ನಡೆದುಕೊಳ್ಳಲಾಗುವುದು ಅಂತ ಹೇಳಿದ್ದಾರೆ.
Laxmi News 24×7