ಅಥಣಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೊರೊನಾದಿಂದ ಬೇಗ ಗುಣಮುಖರಾಗಲಿ. ದೇವರು ಆರೋಗ್ಯ ದಯಪಾಲಿಸಲಿ ಎಂದು ಬೇಡಿಕೊಳ್ಳುವೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.
ಅಥಣಿ ಆರ್ ಟಿ ಓ ಕಚೇರಿಯ ನೂತನವಾಗಿ ವಾಹನ ನೋಂದಣಿ ಕೊಠಡಿ ಉದ್ಘಾಟಿಸಿ ಮಾತನಾಡಿದರು. ಮುಖ್ಯಮಂತ್ರಿಗಳು ಸ್ವತಃ ನನ್ನ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದವರು ಕ್ವಾರೆಂಟೈನ್ ಆಗಿ ಅಂತ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಾನು ಅವರನ್ನು ಭೇಟಿ ನೀಡಿಲ್ಲ. ದೆಹಲಿಗೆ ಹೋಗಿಬಂದ ವಿಚಾರವನ್ನು ಅವರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ತಿಳಸಿದ್ದೆನೆ ಎಂದು ತಿಳಿಸಿದರು.
ಇನ್ನೂ ಸಚಿವ ಶ್ರೀಮಂತ ಪಾಟೀಲ ಮರಾಠಿ ಭಾಷೆ ಭಾಷಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಶ್ರೀಮಂತ ಪಾಟೀಲ ಅಪ್ಪಟ ಕನ್ನಡಿಗ. ಮಹಾರಾಷ್ಟ್ರದ ಉದ್ಯಮಿ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಬಂದಾಗ ಅವರಿಗೆ ನಮ್ಮ ಜನರು ಮರಾಠಿ ಭಾಷೆಯಲ್ಲಿ ಮಾತನಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದರಲ್ಲಿ ಅನ್ಯತ ಭಾವಿಸಬಾರದು. ನೆಲ, ಜಲ ಬಗ್ಗೆ ಅಪಾರ ಗೌರವ ಹೋಗಿದ್ದಾರೆ ಎಂದು ಹೇಳಿದರು.
ಮುಂದಿನ ಸಿಎಂ ಲಕ್ಷ್ಮಣ್ ಸವದಿ ವಿಚಾರ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಟೋ ನನಗೆ ಅದಕ್ಕೆ ಸಂಭಂದ ಇಲ್ಲ, ಅವರವರ ಅಭಿಪ್ರಾಯಗಳು ಹಚ್ಚಿಕೊಂಡಿದ್ದಾರೆ. ಹಿಂತ ಊಹಾಪೋಹಗಳಿಗೆ ಕಿವಿಗೊಡಬಾರದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಬಾರದು ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು.
ಕೊಕಟನೂರ ಪಶು ವೈದ್ಯಕೀಯ ಕಾಲೇಜು ಉದ್ಘಾಟನೆ ದಿನ ನಿಗದಿ ಮಾಡಲಾಗಿತ್ತು. ಆದ್ರೆ ಕೊರೊನಾ ಸೋಂಕಿನಿಂದ ಮುಂದುಡಲಾಗಿದೆ. ದಿನಾಂಕ ಮುಂದೆ ತಿಳಿಸಲಾಗುತ್ತದೆ ಎಂದು ತಿಳಿಸಿದರು.
Laxmi News 24×7