ಬೆಂಗಳೂರು: ಚೆಲುವಿನ ಚಿತ್ತಾರ ಚಿತ್ರದ ಮೂಲಕ ಜನಪ್ರಿಯತೆ ಪಡೆದಿದ್ದ ಸ್ಯಾಂಡಲ್ವುಡ್ನ ಹಿರಿಯ ನಟ ಸುರೇಶ್ ಚಂದ್ರ (69) ಇಂದು ವಿಧಿವಶರಾಗಿದ್ದಾರೆ.
ಸುರೇಶ್ ಚಂದ್ರ ಅವರಿಗೆ ಇತ್ತೀಚಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಅನೇಕ ನಟ ದಿಗ್ಗಜರ ಜೊತೆ ನಟಿಸಿದ್ದ ಸುರೇಶ್ ಚಂದ್ರ ಅವರು, ಗೋಲ್ಡ್ನ್ ಸ್ಟಾರ್ ಗಣೇಶ್ ಅಭಿನಯದ ಚೆಲುವಿನ ಚಿತ್ತಾರ ಚಿತ್ರದ ಮೂಲಕ ಹೆಚ್ಚು ಖ್ಯಾತಿ ಪಡೆದಿದ್ದರು.
Laxmi News 24×7