Breaking News

ಅನೈತಿಕ ಸಂಬಂಧ ಶಂಕೆ ; ಪತ್ನಿ ಕೊಲೆ, ಮಗನೂ ಭಾಗಿ

Spread the love

ಬಾಗಲಕೋಟೆ: ಮನೆಯಲ್ಲಿ ಪತ್ನಿ ನಿದ್ರೆ ಮಾಡುತ್ತಿರುವಾಗಲೇ ಆಕೆಯ ಕುತ್ತಿಗೆ ಬಿಗಿದು ಗಂಡ ಕೊಲೆ ಮಾಡಿದ್ದಾನೆ. ತನ್ನ ಕಣ್ಣೆದುರಲ್ಲೇ ಅಮ್ಮನನ್ನು ಕೊಲ್ಲುತ್ತಿದ್ದ ಅಪ್ಪನಿಗೆ 14 ವರ್ಷದ ಮಗನೂ ಸಾಥ್​ ಕೊಟ್ಟಿದ್ದಾನೆ. ಅಷ್ಟೇ ಅಲ್ಲ ಆತ್ಮಹತ್ಯೆ ಎಂದು ಬಿಂಬಿಸಿ ತರಾತುರಿಯಲ್ಲಿ ಅಂತ್ಯಸಂಸ್ಕಾರ ಮಾಡಲು ಹೋದಾಗ ಕೊಲೆ ರಹಸ್ಯ ಬಯಲಾಗಿದೆ.
ಇಂತಹ ದುರ್ಘಟನೆ ಬಾಗಲಕೋಟೆ ‌ಜಿಲ್ಲೆ ಜಮಖಂಡಿ ತಾಲೂಕಿನ ತುಂಗಳ ಗ್ರಾಮದಲ್ಲಿ ಸಂಭವಿಸಿದೆ. ಮಹಾದೇವಿ ವಡ್ರಾಲ(40) ಕೊಲೆಯಾದ ದುರ್ದೈವಿ. ಪತಿ ಹನುಮಂತ ವಡ್ರಾಲ ಮತ್ತು 14 ವರ್ಷದ ಮಗ ಕೊಲೆ ಆರೋಪಿಗಳು.

ಜೂ.7ರ ನಸುಕಿನಲ್ಲಿ ಮಹಾದೇವಿಯನ್ನು ತಂದೆ-ಮಗ ಸೇರಿಕೊಂಡು ಉಸಿಗಟ್ಟಿಸಿ ಕೊಂದಿದ್ದರು. ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಬಿಂಬಿಸಿ ತರಾತುರಿಯಲ್ಲಿ ಶವ ಸುಟ್ಟು ಅಂತ್ಯಕ್ರಿಯೆಯನ್ನೂ ಮಾಡಿ ಮುಗಿಸಿದ್ದರು ತಂದೆ- ಮಗ. ತರಾತುರಿಯಲ್ಲಿ ಅಂತ್ಯಕ್ರಿಯೆ ಮಾಡಿದ್ದಕ್ಕೆ ಗ್ರಾಮಸ್ಥರಲ್ಲೂ ಅನುಮಾನ ಮೂಡಿತ್ತು. ಈ ನಡುವೆ ಸಾವಳಗಿ ಠಾಣೆ ಪೊಲೀಸರಿಗೆ ತುಂಗಳ ಗ್ರಾಮದಿಂದ ಅನಾಮಿಕ‌ ಕರೆಯೊಂದು ಬಂದಿತ್ತು. ಇದರ ಜಾಡು ಹಿಡಿದು ಹೊರಟ ಪೊಲೀಸರು ಕೊನೆ ರಹಸ್ಯ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳಾದ ಹನುಮಂತ ವಡ್ರಾಲ ಹಾಗೂ ಅಪ್ರಾಪ್ತ ಮಗನನ್ನು ಬಂಧಿಸಿದ್ದು, ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಸಂಶಯ ವ್ಯಕ್ತಪಡಿಸಿ ಕೊಲೆ ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.


Spread the love

About Laxminews 24x7

Check Also

ಬಾಗಲಕೋಟೆ ಜಿಲ್ಲೆಯ ಬಾಡಗಂಡಿಯಲ್ಲಿ ಇಂದು ಶ್ರೀ ಎಸ್.ಆರ್. ಪಾಟೀಲ ಸಮೂಹ ಸಂಸ್ಥೆಗಳು ಮತ್ತು ಬಾಡಗಂಡಿ ಶಾಖೆಯ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ನಿಯಮಿತ ಸಂಸ್ಥೆಯ ರಜತ ಮಹೋತ್ಸ

Spread the love ಬಾಗಲಕೋಟೆ ಜಿಲ್ಲೆಯ ಬಾಡಗಂಡಿಯಲ್ಲಿ ಇಂದು ಶ್ರೀ ಎಸ್.ಆರ್. ಪಾಟೀಲ ಸಮೂಹ ಸಂಸ್ಥೆಗಳು ಮತ್ತು ಬಾಡಗಂಡಿ ಶಾಖೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ