ಕೊಪ್ಪಳ: ಕೋವಿಡ್ ನಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗೆ ಸರಕಾರವೇ ಆಸರೆಯಾಗ ಲಿದೆ. ಕೆಲವು ಕಾರಣಗಳಿಂದ ಮಕ್ಕಳ ಅಂಕಿಅಂಶದಲ್ಲಿ ಸಣ್ಣಪುಟ್ಟ ಲೋಪಗಳಿರಬಹುದು. ಹಾಗಾಗಿ ಸರಕಾರದಿಂದ ಮತ್ತೂಮ್ಮೆ ಸರ್ವೇ ನಡೆಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಾಥ ಮಕ್ಕಳ ಪಾಲನೆಯನ್ನು ಸರಕಾರವೇ ನೋಡಿ ಕೊಳ್ಳಲಿದೆ. ಕೆಲವು ಜಿಲ್ಲೆಗಳಲ್ಲಿ ಅನಾಥ ಮಕ್ಕಳ ಕುರಿತು ವರದಿಯಾಗಿಲ್ಲ. ಹಾಗಾಗಿ ಮತ್ತೂಮ್ಮೆ ಸರ್ವೇಗೆ ಸೂಚಿಸಲಾಗಿದೆ. ಬಾಲ ವಿಕಾಸ ಯೋಜನೆಯಡಿ ಅಂತಹ ಮಕ್ಕಳಿಗೆ ಮಾಸಿಕ 3,500 ಹಾಗೂ ಶೈಕ್ಷಣಿಕ ಸೌಲಭ್ಯ ಕಲ್ಪಿಸಲಾಗುವುದು. ಅಂತಹ ಮಕ್ಕಳನ್ನು ಸರಕಾರವೇ ದತ್ತು ಸ್ವೀಕರಿಸಲಿದೆ. ಕಾನೂನಿನನ್ವಯ ಸಂಘ- ಸಂಸ್ಥೆಗಳಿಗೂ ದತ್ತು ನೀಡಲಾಗುವುದು ಎಂದರು.
ಪ್ರತಿ ಜಿಲ್ಲೆಯಲ್ಲೂ ವ್ಯವಸ್ಥೆ :
ಕೋವಿಡ್ 3ನೇ ಅಲೆಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸಲು ಸರಕಾರವು ಪ್ರತಿ ತಾಲೂಕು ಆಸ್ಪತ್ರೆಯಲ್ಲಿ 5 ಬೆಡ್‌ಗಳು ಹಾಗೂ ಜಿಲ್ಲಾ ಕೇಂದ್ರದಲ್ಲಿ 35 ಬೆಡ್‌ಗಳನ್ನು ಕಾದಿರಿಸಿ ಮಕ್ಕಳ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರ ಕೊರತೆಯಿದೆ. ಸಂಭವನೀಯ ಮೂರನೇ ಅಲೆಯಿಂದ ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಖಾಸಗಿ ವೈದ್ಯರ ಜತೆ ಚರ್ಚಿಸುತ್ತಿದ್ದೇವೆ ಎಂದರು.
Laxmi News 24×7