Breaking News

ಶವ ಪಡೆಯುವ‌ ವಿಚಾರಕ್ಕೆ ಸಮಂಧಿಸಿದಂತೆ ಬೆಳಗಾವಿ ಜಿಲ್ಲಾ ಆಸ್ಪತ್ರೆ ಎದುರು ಮೃತ ವ್ಯೆಕ್ತಿಯ ಸಮಂಧಿಕರು ಹಾಗು ವೈದ್ಯಕೀಯ ಸಿಬ್ಬಂಧಿ ನಡುವೆ ಗಲಾಟೆ

Spread the love

ಬೆಳಗಾವಿ-ಕೊರೊನಾ ಸೊಂಕಿನಿಂದ ಮೃತಪಟ್ಟ ವ್ಯಕ್ತಿ ಶವ ಪಡೆಯುವ‌ ವಿಚಾರಕ್ಕೆ ಸಮಂಧಿಸಿದಂತೆ ಬೆಳಗಾವಿ ಜಿಲ್ಲಾ ಆಸ್ಪತ್ರೆ ಎದುರು ಮೃತ ವ್ಯೆಕ್ತಿಯ ಸಮಂಧಿಕರು ಹಾಗು ವೈದ್ಯಕೀಯ ಸಿಬ್ಬಂಧಿ ನಡುವೆ ಗಲಾಟೆ ನಡೆದಿದೆ.

ಬೆಳಗಾವಿ ಬಿಮ್ಸ್ ಆಸ್ಪತ್ರೆ ಮುಂಭಾಗ ಬಿಮ್ಸ್ ಸಿಬ್ಬಂದ್ಧಿ- ಸಂಬಂಧಿಗಳ ನಡುವೆ ಒಂದು ಘಂಟೆಗೂ ಹೆಚ್ವು ಕಾಲ ಗಲಾಟೆ,ಗದ್ದಲ,ಮುಂದುವರೆದಿತ್ತು.ಕೊರೊನಾದಿಂದ ಸುರೇಶ ಮೇತ್ರಿ(51) ಕೊರೊನಾದಿಂದ ಸಾವನೊಪ್ಪದ್ದು ಮೃತದೇಹ ಹಸ್ತಾಂತರ ಮಾಡುವ ವಿಚಾರದಲ್ಲಿ ಈ ಗಲಾಟೆ ನಡೆದಿದೆ.

ಕಾಕತಿ ಗ್ರಾಮದ ಅಂಬೇಡ್ಕರ್ ಗಲ್ಲಿ ‌ನಿವಾಸಿ ಸುರೇಶ್ ತಡರಾತ್ರಿ ಸಾವನ್ನಪ್ಪಿದ್ದು ಅಂತ್ಯಕ್ರಿಯೆ ಮಾಡಲು ನಮಗೆ ಶವ ನೀಡಿ ಎಂದು ಸಮಂಧಿಗಳು ಪಟ್ಟು ಹಿಡಿದ ಹಿನ್ನಲೆಯಲ್ಲಿ,ಮರಣೋತ್ತರ ಪರೀಕ್ಷೆ ನೀಡಿ ಪಾಲಿಕೆಗೆ ಒಪ್ಪಿಸುತ್ತೇವೆ ಅಲ್ಲಿಂದ ಪಡೆಯಿರಿ ಎಂದು ಸಿಬ್ಬಂದ್ಧಿ ಹೇಳಿದ್ದರಿಂದ ಇಬ್ಬರ ನಡುವೆ ನಡೆದ ವಾದ,ಪ್ರತಿವಾದ ಗಲಾಟೆಯ ಸ್ವರೂಪ ಪಡೆಯಿತು.

ವೈದ್ಯರ ನಿರ್ಲಕ್ಷ್ಯ ದಿಂದ ಸಾವನ್ನಪ್ಪಿದ್ದಾನೆ. ಸರಿಯಾಗಿ ಊಟ ನೀಡದೇ ವೈದ್ಯರ ಸಾಯಿಸಿದ್ದಾರೆಂದು ಸಮಂಧಿಕರು ಆರೋಪ ಮಾಡಿದ್ದಾರೆ.ಸಂಬಂಧಿಗಳ ಕಣ್ತಪ್ಪಿಸಿ ಮರಣೋತ್ತರ ಪರೀಕ್ಷೆಗೆ ಶವವನ್ನು ಪೋಲಿಸರು ಸಾಗಿಸಿದರು.


Spread the love

About Laxminews 24x7

Check Also

ವಾಟಾಳ್ ನಾಗರಾಜ್‌ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲು ಕ್ರಮ: ಶಿವರಾಜ್ ತಂಗಡಗಿ

Spread the loveಬೆಂಗಳೂರು: ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್‌ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡುವ ಕೆಲಸ ಸರ್ಕಾರ ಮಾಡಲಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ