ನವದೆಹಲಿ : ಕೇಂದ್ರ ಸರ್ಕಾರದಿಂದ ಹೊಸ ಐಟಿ ನಿಯಮಗಳನ್ನು ರೂಪಿಸಿ, ಅಧಿಸೂಚನೆಯನ್ನು ಹೊರಡಿಸಿತ್ತು. ಅದಕ್ಕೆ ಮೇ.15ರವರೆಗೆ ಆಕ್ಷೇಪಣೆಗೆ ಕಾಲಾವಕಾಶ ಕೂಡ ನೀಡಲಾಗಿತ್ತು. ಇಂತಹ ಕಾಲಾವಕಾಶ ಮುಕ್ತಾಯಗೊಂಡ ಬಳಿಕ, ಈಗಾಗಲೇ ವಾಟ್ಸ್ ಆಪ್ ಸೇರಿದಂತೆ ಅನೇಕ ಸೋಷಿಯಲ್ ಮೀಡಿಯಾಗಳಿಗೆ ಹೊಸ ಐಟಿ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದ್ದಂತ ಕೇಂದ್ರ ಸರ್ಕಾರ, ಈಗ ಟ್ವಿಟ್ಟರ್ ಗೆ ಅಂತಿಮ ಸೂಚನೆ ನೀಡಿದೆ.
ಈ ಕುರಿತಂತೆ ಕೇಂದ್ರ ಸರ್ಕಾರ ಮುಖ್ಯ ಅನುಸರಣಾ ಅಧಿಕಾರಿಯವರು ವಿವರಗಳನ್ನು ಒಳಗೊಂಡಂತ ಹೊಸ ಐಟಿ ನಿಯಮಗಳ್ನು ಪಾಲಿಸುವ ಪತ್ರ ಬರೆದಿದ್ದು, ಕೇಂದ್ರ ಸರ್ಕಾರದ ಹೊಸ ಐಟಿ ನಿಯಮಗಳನ್ನು ಪಾಲಿಸುವಂತೆ ಅಂತಿಮ ಸೂಚನೆಯನ್ನು ಪತ್ರದ ಮೂಲಕ ತಿಳಿಸಿದೆ.
ಅಂದಹಾಗೇ, ಇಂದು ಟ್ವಿಟ್ಟರ್ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಟ್ವಿಟ್ಟರ್ ಖಾತೆಯ ಬ್ಲೂ ಟಿಕ್ ರದ್ದು ಪಡಿಸಿ ವಿವಾದಕ್ಕೂ ಗುರಿಯಾಗಿತ್ತು. ಆ ನಂತ್ರ ಮರುಸ್ಥಾಪಿಸಿತ್ತು ಕೂಡ. ಇದಾದ ನಂತ್ರ ಈಗ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ವಿವಿಧ ಆರ್ ಎಸ್ ಎಸ್ ಮುಖಂಡರಿಗೆ ನೀಡಿದ್ದಂತ ಬ್ಲೂ ಟಿಕ್ ವೆರಿಫಿಕೇಷನ್ ಬ್ಯಾಡ್ಜ್ ಅನ್ನು ರದ್ದುಗೊಳಿಸಿ, ಆರ್ ಎಸ್ ಎಸ್ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದೆ.
Government of India gives final notice to Twitter for compliance with new IT rules. pic.twitter.com/98S0Pq8g2U
— ANI (@ANI) June 5, 2021
Laxmi News 24×7