ಮೂಡಲಗಿ : ಜನರ ಕಷ್ಟಗಳಿಗೆ ಸ್ಪಂಧಿಸಿ , ಸಮಸ್ಯೆಗಳಿಗೆ ಪರಿಹಾರ ನೀಡುವ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್ ಐಯೊಬ್ಬ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದಾರೆ.
ಹೌದು. ಮೂಡಲಗಿ ಪೊಲೀಸ್ ಠಾಣೆಯ ಪಿಎಸ್ ಐ ಮಲ್ಲಿಕಾರ್ಜುನ ಸಿಂಧೂರ ಅವರ ಠಾಣೆಯ ವ್ಯಾಪ್ತಿಯಲ್ಲಿನ ಜನರ ಕಷ್ಠಗಳಿಗೆ ಸ್ಪಂಧಿಸುತ್ತಾ ಕಾರ್ಯ ನಿರ್ವಹಿಸುತ್ತಿರುವುದು ಜನರ ಮೆಚ್ಚುಗೆ ಕಾರಣ.
ಶಕ್ತಿಯಿಂದಾಗದ ಕೆಲಸವನ್ನು ಯುಕ್ತಿಯಿಂದ ಮಾಡಬೇಕು ಎಂಬ ಗಾದೆಯಂತೆ ಪೊಲೀಸ್ ಠಾಣೆಗೆ ಬರುವ ಜನರ ಸಾಮಾನ್ಯ ಸಮಸ್ಯೆಗಳನ್ನು ಅಲ್ಲಿಗೆ ಬಗೆ ಹರಿಸುತ್ತಾರೆ. ಜತೆಗೆ ಮೂಡಲಗಿಯಲ್ಲಿನ ಜನರ ಕಷ್ಟ ಕಾರ್ಪಣ್ಯಗಳಿಗೆ ಸಂಧಿಸುತ್ತಾರೆ.
ಸಾಮಾನ್ಯ ಜನತೆ ಕರೆಗೆ ಓಗೋಟ್ಟು ಸ್ಪಂದಿಸುತ್ತಿರುವರು ಪಿ.ಎಸ್.ಐ ಅವರು ಕೊರೊನಾ ಲಾಕ್‍ಡೌನ್ ಸಮಯದಲ್ಲಿ ತಮ್ಮ ಕರ್ತವ್ಯವನ್ನು ಶ್ರದ್ಧತೆಯಿಂದ ನಿರ್ವಹಿಸಿದ್ದಾರೆ. ಠಾಣೆಯಲ್ಲಾಗಲಿ, ಕರ್ತವ್ಯದಲ್ಲಿದ್ದಾಗಲಿ, ಯಾವುದೇ ವ್ಯಕ್ತಿ ಫೋನ್ ಮಾಡಿದರು. ಕರೆ ಸ್ಪಂಧಿಸುತ್ತಾರೆ.
ಸೈಕಲ್ ನಲ್ಲಿ ಕರ್ತವ್ಯಕ್ಕೆ ಹಾಜರು: ಹಿರಿಯ ಅಧಿಕಾರಿಗಳು ವಾಹನ ಇಲ್ಲದ ಸಂದರ್ಭದಲ್ಲಿ ಕರ್ತವ್ಯಕ್ಕೆ ರಜೆ ಮಾಡುವುದೇ ಅಂತದ್ರಲ್ಲಿ ಪಿಎಸ್ ಐ ಮಲ್ಲಿಕಾರ್ಜುನ ಅವರ ಸೈಕಲ್ ನಲ್ಲಿಯೇ ಪೊಲೀಸ್ ಠಾಣೆಗೆ ತೆರಳುತ್ತಾರೆ. ಜತೆಗೆ ಸೈಕಲ್ ನಲ್ಲಿ ಸವಾರಿ ನಡೆಸಿ, ರೌಂಡ್ ಹೊಡೆಯುತ್ತಾರೆ.
ರಸ್ತೆಯ ಮಧ್ಯೆದಲ್ಲಿಯೇ ಜನರನ್ನು ಪ್ರೀತಿಯಿಂದ ಮಾತನಾಡಿಸುವುದು. ಅಣ್ಣ, ತಮ್ಮನಂತೆ ಸಾರ್ವಜನಿಕರೊಂದಿಗೆ ಸಂಭಾಷಣೆ ಮಾಡುತ್ತಾರೆ. ಇದರಿಂದ ಜನರ ಸಹ ಮನೆ ಮಗನಂತೆ ಕಾಣುತ್ತಾರೆ.
ಒಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳಿಂದ್ರೆ ಭಯ ಪಡುವ ಈ ಸಂದರ್ಭದಲ್ಲಿ ಪಿಎಸ್ ಐ ಮಲ್ಲಿಕಾರ್ಜುನ ಜನರೊಂದಿಗೆ ಇರುವ ಒಡನಾಟ, ಕರ್ತವ್ಯ ವೈಖರಿಗೆ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.