Breaking News

ಕಠಿಣ ಲಾಕ್‍ಡೌನ್ ಮಧ್ಯೆ ಹೊರ ರಾಜ್ಯಗಳಿಂದ ಕಳ್ಳ ದಾರಿಗಳ ಮೂಲಕ ಎಂಟ್ರಿ- ಕೊರೊನಾ ಹೊತ್ತು ತರುವ ಆತಂಕ

Spread the love

ಕೋಲಾರ: ಎರಡು ರಾಜ್ಯಗಳನ್ನು ಸಂಪರ್ಕಿಸುವ ಗಡಿ ಜಿಲ್ಲೆಯ ಎಲ್ಲ ದಾರಿಗಳು ಕೊರೊನಾ ಆತಂಕದಿಂದ ಬಂದ್ ಆಗಿವೆ. ಆದರೆ ಹೊರ ರಾಜ್ಯದ ಜನ ಮಾತ್ರ ಗಡಿಗಳಲ್ಲಿ ಕಳ್ಳಾಟ ನಡೆಸುತ್ತಿದ್ದಾರೆ. ರಸ್ತೆ ಬಂದ್ ಮಾಡಿ, ಚೆಕ್ ಪೋಸ್ಟ್ ಗಳನ್ನು ನಿರ್ಮಾಣ ಮಾಡಿದ್ದರೂ, ಹಳ್ಳಿಗಳು, ಕಾಡು ಮೇಡುಗಳ ಕಳ್ಳ ದಾರಿಯ ಮೂಲಕ ಹೊರ ರಾಜ್ಯದ ಜನ ನುಸುಳುತ್ತಿದ್ದಾರೆ.

ಬಂಗಾರಪೇಟೆ ತಾಲೂಕು ಕನಮನಹಳ್ಳಿ ಸೇರಿದಂತೆ ಕೆಜಿಎಫ್ ತಾಲೂಕು ವೆಂಕಟಾಪುರ, ಕೆಂಪಾಪುರ, ಮುಳಬಾಗಲು ತಾಲೂಕಿನ ನಂಗಲಿ, ಬೈರಕೂರು, ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು, ಮಾಲೂರಿನ ಸಂಪಂಗೆರೆ, ಕೆಸರಗೆರಯಲ್ಲಿ ಚೆಕ್ ಪೋಸ್ಟ್ ಗಳನ್ನ ಮಾಡಲಾಗಿದೆ. ಕೊರೊನಾ ಸೊಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಅಂತರ್ ರಾಜ್ಯ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಆದರೆ ಇನ್ನೂ ಹಲವೆಡೆ ಚೆಕ್ ಪೋಸ್ಟ್ ಹಾಕಲಾಗಿಲ್ಲ. ಅಲ್ಲದೆ ಪೊಲೀಸರ ಕಣ್ಣು ತಪ್ಪಿಸಿ ರಸ್ತೆಯ ಪಕ್ಕದಲ್ಲೇ ಕಳ್ಳದಾರಿಯಲ್ಲಿ ಓಡಾಡುತ್ತಿದ್ದಾರೆ. ಕಾಡಿನ ರಸ್ತೆಯಲ್ಲೇ ಕಲ್ಲು, ಮುಳ್ಳು, ಹಳ್ಳ, ಕೊಳ್ಳದ ರಸ್ತೆಯಲ್ಲಿ ನೆರೆ ರಾಜ್ಯದ ಜನ ಬೈಕ್‍ಗಳಲ್ಲಿ ನುಸುಳುತ್ತಿದ್ದಾರೆ.

ಅಗತ್ಯ ವಸ್ತುಗಳ ಸಾಗಾಟಕ್ಕೆ ಮಾತ್ರ ಅನುವು ಮಾಡಿಕೊಟ್ಟು ಉಳಿದಂತೆ ಜನರ ಓಡಾಟಕ್ಕೆ ಸರ್ಕಾರ ಬ್ರೇಕ್ ಹಾಕಿದೆ. ಜೊತೆಗೆ ಕೋಲಾರ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಚೆಕ್ ಪೋಸ್ಟ್ ಹಾಕಿ, ತಪಾಸಣೆ ಆರಂಭ ಮಾಡಿದೆ. ಇದರ ಜೊತೆಗೆ ದಿನದ 24 ಗಂಟೆಗಳ ಕಾಲ ಪೊಲೀಸ್ ಸಿಬ್ಬಂದಿಯನ್ನು ಕಾವಲಿಟ್ಟು ಜಾಗರೂಕತೆ ವಹಿಸಿದೆ. ಹೀಗಿದ್ದರೂ ಗಡಿಗಳಲ್ಲಿ ಜನರು ಪಕ್ಕದ ಕಳ್ಳದಾರಿಗಳಿಂದ ರಾಜ್ಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಮೂಲಕ ಕೋಲಾರ ಜಿಲ್ಲೆ ಸೇರಿದಂತೆ ರಾಜ್ಯಕ್ಕೆ ಹೀಗೆ ನುಸುಳುಕೋರರಿಂದ ಕೊರೊನಾ ಸೋಂಕು ಮತ್ತಷ್ಟು ಹರಡುವ ಆತಂಕ ಎದುರಾಗಿದೆ.

ಜಿಲ್ಲೆಯಲ್ಲಿ 18 ಚೆಕ್ ಪೋಸ್ಟ್ ಗಳನ್ನ ಹಾಕಲಾಗಿದೆ, ಅಗತ್ಯ ವಸ್ತುಗಳ ಸಾಗಾಟ ಹಾಗೂ ಆರೋಗ್ಯ ತುರ್ತು ಸೇವೆಗೆ ಮಾತ್ರ ಅವಕಾಶ ನೀಡಲಾಗಿದೆ. ಈಗಾಗಲೆ ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲೂ ಕಂಪ್ಲೀಟ್ ಲಾಕ್‍ಡೌನ್ ಮಾಡಲಾಗಿದೆ. ಆದರೆ ಸಾಕಷ್ಟು ಜನ ಅಧಿಕಾರಿಗಳ ಕಣ್ತಪ್ಪಿಸಿ ಕಳ್ಳದಾರಿಗಳ ಮೂಲಕ ನುಸುಳಿಕೊಂಡು ಕೋಲಾರ ಗಡಿಯ ಮೂಲಕ ರಾಜ್ಯಕ್ಕೆ ಬರುತ್ತಿದ್ದಾರೆ.

ಜಿಲ್ಲೆಯ ಮೂಲಕ ನೆರೆ ರಾಜ್ಯಗಳಿಗೆ ತೆರಳುವ ಸಾಕಷ್ಟು ರಸ್ತೆಗಳಲ್ಲಿ ಚೆಕ್ ಪೋಸ್ಟ್ ಹಾಕಿಲ್ಲ. ಹೀಗಾಗಿ ಸಾಕಷ್ಟು ಜನರು ರಾಜಾರೋಷವಾಗಿ ಓಡಾಟ ನಡೆಸುತ್ತಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಚೆಕ್ ಪೋಸ್ಟ್‍ಗಳನ್ನ ಮೀರಿ ಪೊಲೀಸರ ಕಣ್ಣು ತಪ್ಪಿಸಿ ಬರೋದು ಹೆಚ್ಚಾಗಿದೆ. ಇದಕ್ಕೆ ಸ್ಥಳೀಯ ಶಾಸಕರು ಕೂಡ ಸಮರ್ಥನೆ ನೀಡಿದ್ದು, ಗಡಿ ಕ್ಷೇತ್ರದ ನಮಗೆ ನೆರೆ ರಾಜ್ಯಕ್ಕೆ ಹೋಗಿ ಬರುವುದು ಅನಿವಾರ್ಯ ಎನ್ನುತ್ತಾರೆ. ಅಧಿಕಾರಿಗಳು ಸಹ ಸರ್ಕಾರದ ಗೈಡ್ ಲೈನ್ಸ್ ಫಾಲೋ ಮಾಡ್ತೇವೆ ಎನ್ನುತ್ತಾರೆ.


Spread the love

About Laxminews 24x7

Check Also

ನಮಗೆ ಇ.ಡಿ ಸಮನ್ಸ್ ಮೂಲಕ ಕಿರುಕುಳ ನೀಡಲಾಗುತ್ತಿದೆ: ಡಿಸಿಎಂ ಡಿ.ಕೆ.ಶಿವಕುಮಾರ್

Spread the loveಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್ ನೀಡಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ