Breaking News

ನೀರಿನಲ್ಲೂ ಪತ್ತೆಯಾದ ಕೋವಿಡ್ ವೈರಸ್​​​!

Spread the love

ಲಖನೌ : ಕೋವಿಡ್​ ಎರಡನೇ ಅಲೆಗೆ ಸಿಲುಕಿ ದೇಶಕ್ಕೆ ದೇಶವೇ ತತ್ತರಿಸಿರುವ ನಡುವೆ, ಈಗ ಇನ್ನೊಂದು ಆಘಾತಕಾರಿ ಸುದ್ದಿ ಹೊರ ಬಿದ್ದಿದ್ದು, ನೀರಿನಲ್ಲಿ ಕೋವಿಡ್ ವೈರಸ್ ಪತ್ತೆಯಾಗಿರುವುದಾಗಿ ತಜ್ಞರು ಹೇಳಿದ್ದಾರೆ.
ಇಂಡಿಯನ್ ಕೌನ್ಸಿಲ್ ಆಫ್​ ಮೆಡಿಕಲ್ ರಿಸರ್ಚ್ ( ಐಸಿಎಂಆರ್​) ಮತ್ತು ವಿಶ್ವ ಆರೋಗ್ಯ ಸಂಸ್ಥೆ ( ಡಬ್ಲ್ಯುಹೆಚ್​ಒ ) ಜಂಟಿಯಾಗಿ ಕೊಳಚೆ ನೀರಿನಲ್ಲಿ ವೈರಸ್ ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿತ್ತು.ಇದಕ್ಕಾಗಿ ಉತ್ತರ ಪ್ರದೇಶದ ಕೆಲ ಭಾಗಗಳಿಂದ ಕೊಳಚೆ ನೀರು ಸಂಗ್ರಹಿಸಿ ಲಖನೌದ ಸಂಜಯ್ ಗಾಂಧಿ ಪೋಸ್ಟ್ ಗ್ರಾಜ್ಯುವೇಟ್​ ಇನ್ಸ್​ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್ ( ಎಸ್​ಜಿಪಿಐ)ನ ಲ್ಯಾಬ್​ನಲ್ಲಿ ಪರೀಕ್ಷೆಗೆ ಒಳಪಡಿಸಿತ್ತು.ಈ ವೇಳೆ ಕೊಳಚೆ ನೀರಿನಲ್ಲಿ ಕೋವಿಡ್ ವೈರಸ್ ಇರುವುದು ದೃಢಪಟ್ಟಿದೆ. ಈ ಬಗ್ಗೆ ತಜ್ಞ ವೈದ್ಯರೂ ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಓದಿ : ಈ ಗ್ರಾಮದಲ್ಲಿ ಇದುವರೆಗೆ ಒಂದೇ ಒಂದು ಕೋವಿಡ್ ಕೇಸಿಲ್ಲ, 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ವಿತರಣೆಎಸ್‌ಜಿಪಿಜಿಐನ ಸೂಕ್ಷ್ಮ ಜೀವ ವಿಜ್ಞಾನ ವಿಭಾಗದ ಅಧ್ಯಕ್ಷ ಡಾ. ಉಜ್ವಾಲಾ ಘೋಶಾಲ್ ಅವರ ಪ್ರಕಾರ, ಐಸಿಎಂಆರ್ ಮತ್ತು ಡಬ್ಲ್ಯುಹೆಚ್‌ಒ ಅಧ್ಯಯನವನ್ನು ಪ್ರಾರಂಭಿಸಿತ್ತು. ಇದಕ್ಕಾಗಿ, ದೇಶದ 8 ಕೇಂದ್ರಗಳಿಂದ ಕೊಳಚೆ ನೀರು ಸಂಗ್ರಹಿಸಿತ್ತು.ಉತ್ತರ ಪ್ರದೇಶದಲ್ಲಿ ಲಖೌನ ಮೂರು ಕೇಂದ್ರಗಳಿಂದ ನೀರು ಸಂಗಹಿಸಿ ಎಸ್‌ಜಿಪಿಜಿಐ ಲ್ಯಾಬ್​ನಲ್ಲಿ ಪರೀಕ್ಷಿಸಲಾಯಿತು. ಈ ವೇಳೆ ನೀರಿನಲ್ಲಿ ಕೋವಿಡ್ ವೈರಸ್​ ಇರುವುದು ಗೊತ್ತಾಗಿದೆ ಎಂದಿದ್ದಾರೆ.ಇದಲ್ಲದೆ, ಮಹಾರಾಷ್ಟ್ರದ ಮುಂಬೈನಿಂದ ಸಂಗ್ರಹಿಸಿ ಕೊಳಚೆ ನೀರಿನಲ್ಲೂ ಕೋವಿಡ್ ವೈರಸ್​ ಇರುವುದು ದೃಢಪಟ್ಟಿದೆ. ದೇಶದ ಇತರ ನಗರಗಳ ನೀರಿನ ಪರೀಕ್ಷೆ ನಡೆಯುತ್ತಿದೆ ಎಂದು ಡಾ. ಉಜ್ವಾಲಾ ಘೋಶಾಲ್ ತಿಳಿಸಿದ್ದಾರೆ.


Spread the love

About Laxminews 24x7

Check Also

ಅಡಿಕೆ ಸಾಗಿಸುತ್ತಿದ್ದ VRL ಲಾರಿ ತೋಟಕ್ಕೆ ಉರುಳಿ ಸಂಪೂರ್ಣ ಜಖಂ!

Spread the loveಶಿರಸಿ:ಶಿರಸಿಯಿಂದ ಹುಬ್ಬಳ್ಳಿಗೆ ಅಡಿಕೆ ಸಾಗಿಸುತ್ತಿದ್ದ VRL ಸಂಸ್ಥೆಗೆ ಸೇರಿದ ಲಾರಿಯೊಂದು ಚಾಲಕನ ಅಜಾಗರೂಕತೆಯಿಂದ ನಿಯಂತ್ರಣ ಕಳೆದುಕೊಂಡು ರಸ್ತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ