ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಕೊರೋನಗೆ ಮದ್ದು ಒಂದನ್ನು ಹೇಳಿದ್ದು, ಪಾರಿಜಾತ ಎಲೆಯ ಕಷಾಯ ಮಾಡಿ ಕುಡಿಯಿರಿ ಎಂದಿದ್ದಾರೆ.
ಎಲ್ಲರೂ ಪಾರಿಜಾತ ಎಲೆಯ ಕಷಾಯ ಕುಡಿಯುವಂತೆ ತಮ್ಮ ಭಕ್ತರಿಗೆ ಸಂದೇಶವನ್ನೂ ಅವರು ರವಾನಿಸಿರುವ ಇವರು, ಕಷಾಯ ತಯಾರಿಸುವ ವಿಧಾನವನ್ನೂ ತಿಳಿಸಿದ್ದಾರೆ .
ಅವರು ತಿಳಿಸಿರುವ ಪ್ರಕಾರ ಐದು ಪಾರಿಜಾತದ ಎಲೆ , ಕಾಳುಮೆಣಸು , ಶುಂಠಿ , ಲಿಂಬೆಹಣ್ಣಿನ ರಸ ಹಾಕಿ ಕುದಿಸಿ ಕುಡಿದರೆ ಕೊರೋನಾದಿಂದ ಮುಕ್ತರಾಗಬಹುದು ಎಂದು ವಿನಯ್ ಗುರೂಜಿ ತನ್ನ ಭಕ್ತರಿಗೆ ಹೇಳಿದ್ದಾರೆ .
Laxmi News 24×7