Breaking News

ಹಿಂದಿನ ಬಾರಿಯ ಪ್ಯಾಕೇಜ್ ಇನ್ನೂ ತಲುಪಿಲ್ಲವೆಂಬ ವಿಪಕ್ಷಗಳ ಆರೋಪಕ್ಕೆ ಡಿಸಿಎಂ ಸ್ಪಷ್ಟನೆ

Spread the love

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವಿಶೇಷ ಪ್ಯಾಕೇಜ್​ ಘೋಷಣೆಯಾಗುತ್ತಿದ್ದಂತೆಯೇ ವಿರೋಧ ಪಕ್ಷಗಳ ನಾಯಕರ ಆರ್ಭಟ ಜೋರಾಗಿದೆ. ಕಳೆದ ಬಾರಿಯ ಪ್ಯಾಕೇಜ್​ ಇನ್ನೂ ಫಲಾನುಭವಿಗಳ ಕೈ ತಲುಪಿಲ್ಲ ಅಂತಾ ಆರೋಪಗಳು ಕೇಳಿ ಬರ್ತಿದೆ. ವಿಪಕ್ಷಗಳ ಈ ಆರೋಪವನ್ನ ಡಿಸಿಎಂ ಅಶ್ವತ್ಥ ನಾರಾಯಣ್​ ತಳ್ಳಿ ಹಾಕಿದ್ದಾರೆ.

ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು, ಈ ಆರ್ಥಿಕ ಪ್ಯಾಕೇಜ್​ನಲ್ಲಿ ಕೆಲವು ವಲಯಗಳಿಗೆ ಆದ್ಯತೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಬೇರೆ ವಲಯಗಳಿಗೆ ಆದ್ಯತೆ ನೀಡುವ ಪ್ಯಾಕೇಜ್​ ಕೂಡ ಬರಲಿದೆ. ಆದರೆ ವಿಪಕ್ಷಗಳು ಕಳೆದ ಬಾರಿಯ ಪ್ಯಾಕೇಜ್​ ಫಲಾನುಭವಿಗಳ ಕೈ ತಲುಪಿಲ್ಲ ಎಂದು ಹೇಳ್ತಿದ್ದಾರೆ. ವಿಪಕ್ಷ ನಾಯಕರ ಈ ಆರೋಪ ಶುದ್ಧ ಸುಳ್ಳು. ನಮ್ಮ ಸರ್ಕಾರ ಜನರಿಗೆ ಸಹಾಯ ಧನವನ್ನು ನೀಡಿದೆ ಎಂದು ಹೇಳಿದರು.

ಇದೇ ವೇಳೆ ಲಾಕ್​ಡೌನ್​ ವಿಸ್ತರಣೆ ವಿಚಾರವಾಗಿಯೂ ಮಾತನಾಡಿದ ಅವರು, ಸಿಎಂ ಈಗಾಗಲೇ ತಿಳಿಸಿರುವಂತೆ ಲಾಕ್​ಡೌನ್​ ವಿಸ್ತರಣೆ ಮಾಡಬೇಕೋ ಬೇಡವೋ ಅನ್ನೋದರ ಬಗ್ಗೆ 23ರಂದು ಚರ್ಚೆ ನಡೆಸುತ್ತೇವೆ.

ಲಾಕ್​ಡೌನ್​ ವಿಸ್ತರಣೆ ವಿಚಾರದಲ್ಲಿ ವಿಪಕ್ಷಗಳ ಸಲಹೆಯನ್ನೂ ಸ್ವೀಕರಿಸುತ್ತಿದ್ದೇವೆ. ಅಂದು ಪರಿಸ್ಥಿತಿಯನ್ನ ನೋಡಿಕೊಂಡು ರಾಜ್ಯಕ್ಕೆ ಲಾಕ್​ಡೌನ್​ ವಿಸ್ತರಣೆ ಅವಶ್ಯಕತೆ ಇದೆಯೋ ಇಲ್ಲವೋ ಎಂಬುದನ್ನ ತೀರ್ಮಾನಿಸ್ತೇವೆ ಎಂದು ತಿಳಿಸಿದರು.

ಜಾಗತಿಕ ಟೆಂಡರ್​ ಮೂಲಕ ಲಸಿಕೆ ಖರೀದಿ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಅಶ್ವತ್ಥ ನಾರಾಯಣ್​, 18 ರಿಂದ 45 ವರ್ಷದ ಒಳಗಿನವರಿಗೆ ಲಸಿಕೆ ನೀಡಬೇಕು ಅಂದರೆ 6.5 ಕೋಟಿ ಡೋಸ್​ ಲಸಿಕೆಯ ಅವಶ್ಯಕತೆ ಇದೆ. ನಾವು ಈಗಾಗಲೇ 3.5 ಕೋಟಿ ಲಸಿಕೆಗೆ ಆರ್ಡರ್​ ನೀಡಿದ್ದೇವೆ. ಆದರೆ ಉಳಿದ ಲಸಿಕೆಗೆ ಏನಾದರೂ ವ್ಯವಸ್ಥೆ ಆಗಬೇಕು ಅಲ್ಲವಾ..? ಹೀಗಾಗಿ ಜಾಗತಿಕ ಟೆಂಡರ್​ ಕರೆಯಲು ನಿರ್ಧರಿಸಿದ್ದೇವೆ. ಯಾವುದಾದರೂ ದೇಶ ಲಸಿಕೆ ನೀಡಲು ಮುಂದಾದರೆ ಅದನ್ನ ನಾವು ಖರೀದಿ ಮಾಡ್ತೇವೆ ಎಂದು ಹೇಳಿದರು.


Spread the love

About Laxminews 24x7

Check Also

ಅತೀ ಶೀಘ್ರದಲ್ಲೇ ನಾವು ಬರ್ತಿದ್ದೇವೆ ಎಂದ ಆಪಲ್​!

Spread the love Bengaluru: ಇನ್ನು ಕೆಲವೇ ದಿನಗಳಲ್ಲಿ ಐಫೋನ್​ 17 ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಇದಕ್ಕೂ ಮುನ್ನ ಆಪಲ್​ ಕರ್ನಾಟಕ ರಾಜ್ಯಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ