ವಾಷಿಂಗ್ಟನ್: ಮೈಕ್ರೋಸಾಪ್ಟ್ ಸಂಸ್ಥೆಯ ಉದ್ಯೋಗಿಯೊಬ್ಬರ ಜೊತೆ ಇಪ್ಪತ್ತು ವರ್ಷಗಳ ಹಿಂದೆ ಮೈಕ್ರೋ ಸಾಫ್ಟ್ ನ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಹೊಂದಿದ್ದ ಪ್ರಣಯ ಪ್ರಕರಣದ ತನಿಖೆಯನ್ನು ಆ ಸಂಸ್ಥೆಯು ಆಂತರಿಕ ತನಿಖೆಗೊಳಪಡಿಸಿದೆ. ಈ ಹಿನ್ನೆಲೆಯಲ್ಲಿ, ಮೈಕ್ರೋಸಾಫ್ಟ್ ಆಡಳಿತ ಮಂಡಳಿಯ ಸದಸ್ಯತ್ವಕ್ಕೆ ಬಿಲ್ ಗೇಟ್ಸ್ ರಾಜೀನಾಮೆ ನೀಡಿದ್ದಾರೆ.
ತನಿಖೆ ಮುಗಿಯುವವರಿಗೆ ತಾವು ಸಂಸ್ಥೆಯ ಪ್ರಭಾವಿ ಹುದ್ದೆಯಲ್ಲಿ ಇರಬಾರದೆಂಬ ನೈತಿಕತೆಯಿಂದಾಗಿ ಅವರು ಆಡಳಿತ ಸಂಸ್ಥೆಯಿಂದ ಹೊರಬಂದಿದ್ದಾರೆಂದು ಮೂಲಗಳು ತಿಳಿಸಿವೆ.
ಮತ್ತೂಂದೆಡೆ, ಪ್ರಕರಣದ ಕೇಂದ್ರಬಿಂದುವಾಗಿರುವ ಉದ್ಯೋಗಿಗೆ ತಾನು ನೈತಿಕ ಬೆಂಬಲ ಹಾಗೂ ಭದ್ರತೆ ನೀಡುವುದಾಗಿ ಸಂಸ್ಥೆ ತಿಳಿಸಿದೆ.
Laxmi News 24×7