Breaking News

ಮೈಸೂರು ತಲುಪಿದ ಆಮ್ಲಜನಕ ಟ್ಯಾಂಕ್‌

Spread the love

ಮೈಸೂರು: ಕೇಂದ್ರ ಸರ್ಕಾರವು ಆಮ್ಲಜನಕ ಎಕ್ಸ್‌ಪ್ರೆಸ್‌ನಲ್ಲಿ ಮಂಗಳವಾರ ಬೆಂಗಳೂರಿಗೆ ಸಾಗಿಸಿದ್ದ ಆಮ್ಲಜನಕದ ಒಂದು ಕಂಟೈನರ್‌ ಅನ್ನು (ಟ್ಯಾಂಕ್‌) ಬುಧವಾರ ಬೆಳಿಗ್ಗೆ ಮೈಸೂರಿಗೆ ತರಲಾಯಿತು. ಈ ಕಂಟೈನರ್‌ನಲ್ಲಿ 20 ಸಾವಿರ ಲೀಟರ್ ಆಮ್ಲಜನಕ ತುಂಬಿದೆ.

ಈ ಆಮ್ಲಜನಕವನ್ನು ಸ್ಥಳೀಯವಾಗಿ ಶೇಖರಿಸಿ ಕೂಡಲೇ ಕಂಟೈನರ್‌ ಹಿಂದಿರುಗಿಸಬೇಕಿತ್ತು. ಆದರೆ, ಇಷ್ಟು ಆಮ್ಲಜನಕವನ್ನು ಸಂಗ್ರಹಿಸಲು ಬೇಕಾದ ಶೇಖರಣಾ ಘಟಕ ಮೈಸೂರು ಜಿಲ್ಲೆಯಲ್ಲಿ ಇರಲಿಲ್ಲ. ಹೀಗಾಗಿ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ವಿಕೋಪ ನಿರ್ವಹಣೆ ಕಾಯ್ದೆ ಪ್ರಯೋಗಿಸಿ ಕಡಕೊಳ ಕೈಗಾರಿಕಾ ಪ್ರದೇಶದ ತ್ರಿನೇತ್ರ ಗ್ಯಾಸಸ್‌ನಲ್ಲಿದ್ದ ಸೌಲಭ್ಯವನ್ನು ಜಿಲ್ಲಾಡಳಿತದ ಸುಪರ್ದಿಗೆ ಪಡೆದಿದ್ದಾರೆ. ಅಲ್ಲದೇ, ಇಲ್ಲಿನ 20ಕೆಎಲ್‌ ಸಾಮರ್ಥ್ಯದ ಆಮ್ಲಜನಕ ಘಟಕದಲ್ಲಿ ಶೇಖರಿಸಲು ವ್ಯವಸ್ಥೆ ಕಲ್ಪಿಸಿದ್ದಾರೆ.


Spread the love

About Laxminews 24x7

Check Also

ಮಹಿಳೆಯರನ್ನು ನಿಂದಿಸುವುದೇ ಬಿಜೆಪಿಗರ ಕೆಲಸ: ಸಚಿವೆ ಹೆಬ್ಬಾಳಕರ

Spread the love ಮಹಿಳೆಯರನ್ನು ನಿಂದಿಸುವುದೇ ಬಿಜೆಪಿಗರ ಕೆಲಸ: ಸಚಿವೆ ಹೆಬ್ಬಾಳಕರ ಎಂಎಲ್ಸಿ ರವಿಕುಮಾರ್ ವಿರುದ್ಧ ಲಕ್ಷ್ಮೀ ಹೆಬ್ಬಾಳಕರ್ ವಾಗ್ದಾಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ