Breaking News

ನಟ ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಸಿನಿಮಾ 777 ಚಾರ್ಲಿಯಸಖತ್ ಸದ್ದು

Spread the love

ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಸಿನಿಮಾ 777 ಚಾರ್ಲಿ ಸಖತ್ ಸದ್ದು ಮಾಡುತ್ತಿದ್ದು, ಇತ್ತೀಚೆಗೆ ಗೋವಾ ಸೇರಿದಂತೆ ವಿವಿಧ ಭಾಗಗಳಲ್ಲಿ ಚಿತ್ರೀಕರಣ ನಡೆಯುತ್ತಿರುವ ಕುರಿತು ಚಿತ್ರ ತಂಡ ಅಪ್‍ಡೇಟ್ ನೀಡಿತ್ತು. ಇದೀಗ ಮತ್ತೊಂದು ಸಂತಸದ ವಿಚಾರವನ್ನು ಹಂಚಿಕೊಂಡಿದೆ.

ರಕ್ಷಿತ್ ಶೆಟ್ಟಿ ಅಭಿನಯದಲ್ಲಿ ಮೂಡಿಬರುತ್ತಿರುವ 777 ಚಾರ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದು, ಈಗಾಗಲೇ ಸಿನಿಮಾದ ಬಹುಭಾಗ ಚಿತ್ರೀಕರಣ ಪೂರ್ಣಗೊಂಡಿದೆ. ಗೋವಾ, ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಲಾಕ್‍ಡೌನ್ ಹಿನ್ನೆಲೆ ಶೂಟಿಂಗ್ ಸ್ಥಗಿತವಾಗಿದ್ದು, ಕೊನೆಯ ಹಂತದ ಚಿತ್ರೀಕರಣಕ್ಕಾಗಿ ಸಿನಿಮಾ ತಂಡ ಕಾಯುತ್ತಿದೆ. ಇದೀಗ ಸರ್ಕಾರ ಸಹ ಅವಕಾಶ ನೀಡಿದ್ದು, ಇನ್ನೇನು ಚಿತ್ರೀಕರಣ ಆರಂಭವಾಗಲಿದೆ. ಇದೆಲ್ಲದರ ಮಧ್ಯೆ ಚಿತ್ರತಂಡ ಇದ್ದಕ್ಕಿದ್ದಂತೆ ಸರ್ಪ್ರೈಸ್ ನೀಡಿದ್ದು, ಚಾರ್ಲಿ ತಂಡಕ್ಕೆ ಮತ್ತೊಬ್ಬ ನಟ ಸೇರ್ಪಡೆಯಾಗಿರುವ ಕುರಿತು ತಿಳಿಸಿದೆ.

ಅದ್ಯಾರು ಅಂತೀರಾ, ಅವರೇ ಹಂಬಲ್ ಪೋಲಿಟೀಶಿಯನ್ ಸಿನಿಮಾ ಖ್ಯಾತಿಯ ನಟ ಡ್ಯಾನಿಶ್ ಸೇಠ್. ಈ ಕುರಿತು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ತಿಳಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಚಾರ್ಲಿ ಚಿತ್ರದ ಪೋಸ್ಟರ್‍ನಲ್ಲಿ ಡ್ಯಾನಿಶ್ ಇರುವ ಚಿತ್ರ ಹಾಕಿ ಸ್ವಾಗತಿಸಿದ್ದಾರೆ. ಡ್ಯಾನಿಶ್ ಹುಟ್ಟುಹಬ್ಬವಾದ್ದರಿಂದ ಚಿತ್ರತಂಡ ಅವರಿಗೆ ಸಪ್ರ್ರೈಸ್ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪುಷ್ಕರ್, ಹ್ಯಾಪಿ ಬರ್ತ್‍ಡೇ ಬ್ರೊ ಎಂದು ಡ್ಯಾನಿಶ್ ಸೇಠ್ ಅವರಿಗೆ ಟ್ಯಾಗ್ ಮಾಡಿದ್ದು, ಇಟ್ಸ್ ಗೋಯಿಂಗ್ ಟು ಬಿ ಕಿಕ್ಕಸ್ ಫನ್ ಹ್ಯಾವಿಂಗ್ ಯು ಇನ್ 777 ಚಾರ್ಲಿ. ಆಲ್ ದಿ ಬೆಸ್ಟ್ ಫಾರ್ ಎಚ್‍ಪಿಎನ್2 ಕಾಂಟ್ ವೇಟ್ ಟು ಸೀ ಎಂದು ಬರೆದು ರಕ್ಷಿತ್ ಶೆಟ್ಟಿಯವರಿಗೆ ಟ್ಯಾಗ್ ಮಾಡಿದ್ದಾರೆ.

ಚಿತ್ರದ ಪ್ರಮುಖ ಪಾತ್ರದಲ್ಲಿ ಡ್ಯಾನಿಶ್ ಸೇಠ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದು, ಹೀಗಾಗಿ ವಿಶೇಷ ಪೋಸ್ಟರ್ ಮೂಲಕ ಚಿತ್ರ ತಂಡ ಸ್ವಾಗತಿಸಿದೆ. ಅದೂ ಸಹ ಡ್ಯಾನಿಶ್ ಅವರ ಹುಟ್ಟುಹಬ್ಬದಂತೆ ಪೋಸ್ಟರ್ ಬಿಡುಗಡೆ ಮಾಡಿರುವುದು ಸಂತಸವನ್ನು ಇಮ್ಮಡಿಗೊಳಿಸಿದೆ. ರಕ್ಷಿತ್ ಶೆಟ್ಟಿ, ಡ್ಯಾನಿಶ್ ಸೇಠ್ ಜೊತೆಗೆ ಮುದ್ದಾದ ನಾಯಿ ಮೂವರು ಬೈಕ್ ನಲ್ಲಿ ಹೋಗುತ್ತಿರುವ ಪೋಸ್ಟರ್ ಇದಾಗಿದೆ.

ಸಿನಿಮಾದಲ್ಲಿ ಡ್ಯಾನಿಶ್ ಸೇಠ್ ಕರ್ಶನ್ ರಾಯ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಅವರ ಭಾಗದ ಚಿತ್ರೀಕರಣ ಸಹ ಮುಕ್ತಾಯವಾಗಿದೆಯಂತೆ. ಇನ್ನೂ ವಿಶೇಷವೆಂದರೆ ಈ ಸಿನಿಮಾವನ್ನು ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿಯೂ ರಿಲೀಸ್ ಮಾಡಲು ಸಿನಿಮಾ ತಂಡ ಪ್ಲಾನ್ ಮಾಡಿದೆ. ಡ್ಯಾನಿಶ್ ಅವರ ಮೂರನೇ ಚಿತ್ರ ಇದಾಗಿದ್ದು, ಹಂಬಲ್ ಪೊಲಿಟಿಶಿಯನ್ ಬಳಿಕ ಅವರು ಫ್ರೆಂಚ್ ಸಿನಿಮಾ ಮೂಲಕ ಪ್ರೇಕ್ಷಕರ ಮುಮದೆ ಬರಲು ಸಿದ್ಧತೆ ನಡೆಸಿದ್ದಾರೆ. ಇದೀಗ 777 ಚಾರ್ಲಿ ಸಿನಿಮಾದಲ್ಲಿ ನಟಿಸಿದ್ದಾರೆ.


Spread the love

About Laxminews 24x7

Check Also

ಹಾರೂಗೇರಿ :ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರಿಂದ ಬೃಹತ್ ಪ್ರತಿಭಟನೆ‌.

Spread the loveಹಾರೂಗೇರಿ :ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರಿಂದ ಬೃಹತ್ ಪ್ರತಿಭಟನೆ‌. ಹಾರೂಗೇರಿ ಕ್ರಾಸನಲ್ಲಿ ರಸ್ತೆ ತಡೆದು ಅನ್ನದಾತರಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ