Breaking News

ಕೊವಿಶೀಲ್ಡ್‌ನ ಒಂದು ಡೋಸ್‌ನಿಂದ 80% ರಕ್ಷಣೆ : ಪಬ್ಲಿಕ್‌ ಹೆಲ್ತ್‌ ಇಂಗ್ಲೆಂಡ್‌ ವರದಿ

Spread the love

ಲಂಡನ್‌/ವಾಷಿಂಗ್ಟನ್‌: ಆಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆಯ ಒಂದು ಡೋಸ್‌ ಪಡೆದರೂ ಸೋಂಕಿನಿಂದ ಮರಣಹೊಂದುವ ಅಪಾಯ ಶೇ.80ರಷ್ಟು ತಗ್ಗುತ್ತದೆ ಎಂದು ಪಬ್ಲಿಕ್‌ ಹೆಲ್ತ್‌ ಇಂಗ್ಲೆಂಡ್‌ ಬಹಿರಂಗಪಡಿಸಿದ ಹೊಸ ದತ್ತಾಂಶ ತಿಳಿಸಿದೆ.

ಅಂದರೆ, ಒಬ್ಬ ವ್ಯಕ್ತಿಯು ಕೊವಿಶೀಲ್ಡ್‌ ಲಸಿಕೆಯ ಮೊದಲ ಡೋಸ್‌ ಪಡೆದರೂ, ಸೋಂಕಿನಿಂದ ಆತ ಸಾಯುವ ಸಾಧ್ಯತೆ ಶೇ.80ರಷ್ಟು ಕಡಿಮೆ. ಅದೇ ರೀತಿ, ಫೈಜರ್‌-ಬಯಾನ್‌ ಟೆಕ್‌ ಲಸಿಕೆಯ ಒಂದು ಡೋಸ್‌ ನಲ್ಲಿ ಮರಣದ ಅಪಾಯ ಶೇ.80ರಷ್ಟು ಹಾಗೂ ಎರಡನೇ ಡೋಸ್‌ ಬಳಿಕ ಇದು ಶೇ.97ರಷ್ಟು ತಗ್ಗುತ್ತದೆ ಎಂದೂ ವರದಿ ತಿಳಿಸಿದೆ.

ಡಿಸೆಂಬರ್‌ನಿಂದ ಏಪ್ರಿಲ್‌ ವರೆಗಿನ ಅವಧಿಯಲ್ಲಿ ರೋಗ ಲಕ್ಷಣವಿದ್ದ ಸೋಂಕಿತರು ಹಾಗೂ ಪಾಸಿಟಿವ್‌ ವರದಿ ಬಂದ 28 ದಿನಗಳಲ್ಲಿ ಸಾವಿಗೀಡಾದ ಸೋಂಕಿತರೆಷ್ಟು ಎಂಬ ಆಧಾರದಲ್ಲಿ ಈ ಅಧ್ಯಯನ ನಡೆಸಲಾಗಿದೆ. ಲಸಿಕೆ ಪಡೆಯದೇ ಇದ್ದ ವ್ಯಕ್ತಿಗಳಿಗೆ ಹೋಲಿಸಿದರೆ, ಆಸ್ಟ್ರಾಜೆನೆಕಾದ ಮೊದಲ ಡೋಸ್‌ ಪಡೆದ ವ್ಯಕ್ತಿಗಳು ಸಾವಿನಿಂದ ಶೇ.55ರಷ್ಟು ರಕ್ಷಣೆ ಪಡೆದಿದ್ದರು.

ಅದೇ ರೀತಿ ಫೈಜರ್‌ನ ಮೊದಲ ಡೋಸ್‌ ಪಡೆದ ವ್ಯಕ್ತಿಗಳು ಶೇ.44ರಷ್ಟು ರಕ್ಷಣೆ ಪಡೆದಿದ್ದರು. ಈ ಲೆಕ್ಕಾಚಾರವನ್ನು ಪರಿಗಣಿಸಿದರೆ, ಕೊವಿಶೀಲ್ಡ್‌ ಲಸಿಕೆ ಪಡೆದ ಸೋಂಕಿರತರು ಮರಣ ಹೊಂದುವ ಸಾಧ್ಯತೆ ಶೇ.80ರಷ್ಟು ತಗ್ಗಿದರೆ, ಫೈಜರ್‌  ಲಸಿಕೆಯ ಎರಡೂ ಡೋಸ್‌ ಪಡೆದವರು ಸಾಯುವ ಸಾಧ್ಯತೆ ಶೇ.97ರಷ್ಟು ತಗ್ಗುತ್ತದೆ ಎಂದು ಪಬ್ಲಿಕ್‌ ಹೆಲ್ತ್‌ ಇಂಗ್ಲೆಂಡ್‌ನ‌ ವರದಿ ಹೇಳಿದೆ.


Spread the love

About Laxminews 24x7

Check Also

ದಾನವೀರ ಶರಣ ಸಿರಸಂಗಿ ಲಿಂಗರಾಜ ದೇಸಾಯಿ ಅವರ 165ನೇ ವರ್ಷದ ಜಯಂತ್ಯೋತ್ಸವ ಆಚರಣೆ

Spread the loveಸವದತ್ತಿ; ದಾನವೀರ ಶರಣ ಸಿರಸಂಗಿ ಲಿಂಗರಾಜ ದೇಸಾಯಿ ಅವರ 165ನೇ ವರ್ಷದ ಜಯಂತ್ಯೋತ್ಸವ ಆಚರಣೆ ಧಾರವಾಡದ ಮುರುಗಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ